ಮತ್ತೆ ಬಂದ ಮರ್ಡರ್ ಮಲ್ಲಿಕಾ: ರಿ ಎಂಟ್ರಿಯಲ್ಲೇ ಹೊಸ ಬಾಂಬ್ ಸಿಡಿಸಿದ ಸೆಕ್ಸಿ ಕ್ವೀನ್..!

ನಾನು ತುಂಬಾ ಬೋಲ್ಡ್ ಎಂಬುದು ಚಿತ್ರರಂಗದಲ್ಲಿ ಇರುವವರಿಗೆ ಗೊತ್ತಿರುವ ವಿಷಯ. ಹೀಗಾಗಿ ಯಾರೂ ಕೂಡ ನನ್ನ ಬಳಿ ದೈಹಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟಿಲ್ಲ.

news18
Updated:June 27, 2019, 10:05 PM IST
ಮತ್ತೆ ಬಂದ ಮರ್ಡರ್ ಮಲ್ಲಿಕಾ: ರಿ ಎಂಟ್ರಿಯಲ್ಲೇ ಹೊಸ ಬಾಂಬ್ ಸಿಡಿಸಿದ ಸೆಕ್ಸಿ ಕ್ವೀನ್..!
Mallika-Sherawat
news18
Updated: June 27, 2019, 10:05 PM IST
ಬಿಟೌನ್ ಸೆಕ್ಸಿ ಕ್ವೀನ್ ಮಲ್ಲಿಕಾ ಯಾರಿಗೆ ತಾನೆ ಗೊತ್ತಿಲ್ಲ. 'ಮರ್ಡರ್'​ ಚಿತ್ರದ ಹಸಿ ಬಿಸಿ ದೃಶ್ಯದ ಮೂಲಕ ಪಡ್ಡೆಗಳ ಮೈ ಬಿಸಿ ಹೆಚ್ಚಿಸಿದ್ದ ಈ ನಟಿ ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಜೋಗಿ ಪ್ರೇಮ್​ ನಟಿಸಿ-ನಿರ್ದೇಶಿಸಿದ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಗೌರಿಪಾಳ್ಯದ ಗಲ್ಲಿಯೊಳಗೆ...ಬಳುಕುವ ಬಳ್ಳಿ ಕುಣಿದು ಕುಪ್ಪಳಿಸಿದ್ದರು. ಸಾಕಷ್ಟು ನೇಮ್-ಫೇಮ್​ಗಳಿಸಿದ್ದ ಈ ಮಿಂಚುಳ್ಳಿ ಅದೇಕೋ ಒಮ್ಮೆಲೇ ಬಾಲಿವುಡ್​ನಿಂದ ಮಾಯವಾಗಿದ್ದರು.

ಇದೀಗ ಬರೋಬ್ಬರಿ ಎರಡು ವರ್ಷಗಳ ಬಳಿಕ ಬಳುಕುವ ಮಲ್ಲಿಯಾಗಿ ತಿರುಗಿ ಬಂದಿದ್ದಾರೆ. ಅದು ಕೂಡ ವೆಬ್ ಸಿರೀಸ್ ಮೂಲಕ ಎಂಬುದೇ ವಿಶೇಷ. ಬಾಲಾಜಿ ನಿರ್ಮಾಣ ಸಂಸ್ಥೆಯ ಹೊಸ ವೆಬ್ ಸರಣಿ 'ಬೂ...ಸಬ್ಕಿ ಫತೇಗಿ'ನಲ್ಲಿ ಮಲ್ಲಿಕಾ ಶೆರಾವತ್ ಅಭಿನಯಿಸಿದ್ದಾರೆ. ಹಾರರ್ ಕಥಾ ಹಂದರ ಹೊಂದಿರುವ ಈ ವೆಬ್​ ಸಿರೀಸ್​ಗೆ ತುಷಾರ್ ಕಪೂರ್ ನಾಯಕ. ಇಲ್ಲಿ ನಾಯಕ ಮತ್ತು ಆತನ ಕುಟುಂಬದವರನ್ನು ಕಾಡುವ ಪಾತ್ರದಲ್ಲಿ 'ಮರ್ಡರ್' ಮಲ್ಲಿಕಾ ಕಾಣಿಸಲಿದ್ದಾರೆ.

ಇದೀಗ ಬಣ್ಣದ ಲೋಕದಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವ ಮಲ್ಲಿಕಾ 'ಬೂ...ಸಬ್ಕಿ ಫತೇಗಿ' ವೆಬ್​ ಸಿರೀಸ್​ನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅರೆರೇ..ಇಷ್ಟೊಂದು ದೀರ್ಘ ಅವಧಿಯ ಬಳಿಕ ಮತ್ತೆ ಬಣ್ಣ ಹಚ್ಚಿದ್ದೀರಾ? ಎಲ್ಲೋಗಿದ್ದೀರಿ ಎಂಬ ಪ್ರಶ್ನೆಗೆ ತೆರೆಮರೆಯ ಕಹಾನಿಯೊಂದನ್ನು  ಮಲ್ಲಿಕಾ ಬಿಚ್ಚಿಟ್ಟಿದ್ದಾರೆ.

"ನಾನು ಯಾವುದೇ ನಟರ ಜೊತೆ ಡೇಟಿಂಗ್​ಗೆ ಹೋಗಿಲ್ಲ. ಹೀಗಾಗಿ ನನಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಹುತೇಕ ನಟರು, ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಅವರ ಗರ್ಲ್​ ಫ್ರೆಂಡ್​ಗಳ ಜೊತೆ ಕೆಲಸ ಮಾಡಲು ಬಯಸುತ್ತಾರೆ. ಹೀಗಾಗಿ ನನಗೆ ಅವಕಾಶಗಳು ಸಿಗುತ್ತಿರಲಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ.ಇದೇ ಸಂದರ್ಭದಲ್ಲಿ ಮೀಟೂ ಅಭಿಯಾನದ ಬಗ್ಗೆಯು ಮಾತನಾಡಿದ ನಟಿ, ನಾನು ತುಂಬಾ ಬೋಲ್ಡ್ ಎಂಬುದು ಚಿತ್ರರಂಗದಲ್ಲಿ ಇರುವವರಿಗೆ ಗೊತ್ತಿರುವ ವಿಷಯ. ಹೀಗಾಗಿ ಯಾರೂ ಕೂಡ ನನ್ನ ಬಳಿ ದೈಹಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟಿಲ್ಲ. ಏಕೆಂದರೆ ಅವರು ನನ್ನ ಬಳಿ ಪಾತ್ರಕ್ಕಾಗಿ ಪಲ್ಲಂಗ ಬೇಡಿಕೆಯಿಡಲು ಹೆದರುತ್ತಿದ್ದರು ಎಂದು ಬೋಲ್ಡ್​ ಆಗಿಯೇ  ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲದೆ ತಾನು ವಿವಾಹವಾಗದೇ ಸಿಂಗಲ್ ಆಗಿರಲು ಬಯಸುವುದಾಗಿ ಇದೇ ಸಂದರ್ಭದಲ್ಲಿ ಮಲ್ಲಿಕಾ ಶೆರಾವತ್ ಹೇಳಿದರು.

Loading...

ಇದನ್ನೂ ಓದಿ: ತಮಿಳು ಬಿಗ್ ​ಬಾಸ್ ಮನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಾಯಕಿ..!
First published:June 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...