Malgudi Days: ಪ್ರಾಸ್ಥೆಟಿಕ್​ ಮೇಕಪ್​ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದ ಮಾಲ್ಗುಡಿ ಡೇಸ್​ ಚಿತ್ರತಂಡ..!

Prosthetic Makeup Making Video: ವಿಜಯ್​ ರಾಘವೇಂದ್ರ ಅವರಿಗೆ ಈ ಸಿನಿಮಾದಲ್ಲಿ ಅಭಿನಯಿಸುವಾಗ ಎದುರಾಗಿದ್ದ ಸವಾಲುಗಳಲ್ಲಿ ಒಂದು ವಯೋವೃದ್ಧನ ಪಾತ್ರ. ಅಂದರೆ ಪಾತ್ರಕ್ಕಿಂತ ಹೆಚ್ಚಾಗಿ ಅದಕ್ಕಾಗಿ ಮಾಡುತ್ತಿದ್ದ ಮೇಕಪ್​.

Anitha E | news18-kannada
Updated:February 15, 2020, 10:00 AM IST
Malgudi Days: ಪ್ರಾಸ್ಥೆಟಿಕ್​ ಮೇಕಪ್​ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದ ಮಾಲ್ಗುಡಿ ಡೇಸ್​ ಚಿತ್ರತಂಡ..!
ವಿಜಯ್​ ರಾಘವೇಂದ್ರ
  • Share this:
ವಿಜಯ್​ರಾಘವೇಂದ್ರ ಅವರ ಅಭಿನಯದ 'ಮಾಲ್ಗುಡಿ ಡೇಸ್​' ಚಿತ್ರ ಬಿಡುಗಡೆಯಾಗಿದ್ದು, ಅದಕ್ಕೆ ಮಿಶ್ರಪ್ರತಿಕ್ರಿಯೆ ಸಿಗುತ್ತಿದೆ. ಕಿಶೋರ್​ ಮೂಡಬಿದ್ರೆ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಅವರು ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ್​ ರಾಘವೇಂದ್ರ ಅವರಿಗೆ ಈ ಸಿನಿಮಾದಲ್ಲಿ ಅಭಿನಯಿಸುವಾಗ ಎದುರಾಗಿದ್ದ ಸವಾಲುಗಳಲ್ಲಿ ಒಂದು ವಯೋವೃದ್ಧನ ಪಾತ್ರ. ಅಂದರೆ ಪಾತ್ರಕ್ಕಿಂತ ಹೆಚ್ಚಾಗಿ ಅದಕ್ಕಾಗಿ ಮಾಡುತ್ತಿದ್ದ ಮೇಕಪ್​.

Vijay Raghavendra, Malgudi Days Official Teaser, Vijay Raghavendra, Sandalwood movies, Kannada movies
ಮಾಲ್ಗುಡಿ ಡೇಸ್


ಹೌದು, 60 ದಾಟಿದ ವೃದ್ಧನ ಪಾತ್ರಕ್ಕಾಗಿ ವಿಜಯ್​ ರಾಘವೇಂದ್ರ ಅವರನ್ನುಸಿದ್ಧಗೊಳಿಸಲು ವಿಶೇಷವಾಗಿ ಪ್ರಾಸ್ಥೆಟಿಕ್​​ ಮೇಕಪ್​ ಮಾಡಲಾಗುತ್ತಿತ್ತು. ಅದಕ್ಕಾಗಿ ಕೇರಳದ ಮೇಕಪ್​ ಕಲಾವಿದ ರೋಷನ್​ ಅವರನ್ನು ಕರೆಸಲಾಗಿತ್ತು.

Malgudi Days movie team released the Prosthetic making video 
ವಿಜಯ್​ ರಾಘವೇಂದ್ರ ಅವರಿಗೆ ಮೇಕಪ್​ ಮಾಡುತ್ತಿರುವ ಕಲಾವಿದ ರೋಷನ್​


ಲಕ್ಷ್ಮೀನಾರಾಯಣ ಮಾಲ್ಗುಡಿ ಪಾತ್ರಕ್ಕಾಗಿ ವಿಜಯ್​ ರಾಘವೇಂದ್ರ ಅವರು ನಿತ್ಯ 4 ಗಂಟೆಗೂ ಹೆಚ್ಚು ಸಮಯ ಮೇಕಪ್​ ಮಾಡಿಕೊಳ್ಳಬೇಕಾಗಿತ್ತು. ಈ ಮೇಪಕ್​ ಇರುವ ಕಡೆ ದೇಹದಿಂದ ಬೆವರು ಸಹ ಹೊರ ಬರುತ್ತಿರಲಿಲ್ಲ. ಅಲ್ಲದೆ ಈ ಮೇಕಪ್​ ಹಾಕಿದರೆ ಹೆಚ್ಚು ಬಿಸಿಲಿಗೆ ಹೋಗುವಂತಿರಲಿಲ್ಲ. ಆದರೆ ಚಿತ್ರೀಕರಣ ಬಿಸಿಲ ಪ್ರದೇಶದಲ್ಲೇ ನಡೆಯುತ್ತಿತ್ತು. ಹೀಗಾಗಿ ಅದು ಕೇವಲ 4-5 ಗಂಟೆ ಮೇಕಪ್​ ಇರುತ್ತಿತ್ತಂತೆ.

 



 




View this post on Instagram




 

Getting into the skin of LAKSHMI NARAYANA MALGUDI


A post shared by Vijay Raghavendra (@raagu.vijay) on






ಒಮ್ಮೆ ಮೇಕಪ್​ ಮಾಡಿದರೆ ಕೆಲಸ ಮುಗಿಯುತ್ತಿರಲಿಲ್ಲ. ನಿತ್ಯ ಮತ್ತೆ ಅದನ್ನು ತೆಗೆಯುವುದು ಸಹ ದೊಡ್ಡ ಕೆಲಸವೇ. ಅದನ್ನೂ ತುಂಬಾ ಸಮಾಧಾನದಿಂದ ಸಮಯ ತೆಗೆದುಕೊಂಡು ತೆಗೆಯಬೇಕಿತ್ತಂತೆ. ತಮ್ಮ ಅನುಭವವನ್ನು ಚಿತ್ರತಂಡ ಹಾಗೂ ವಿಜಯ್​ ರಾಘವೇಂದ್ರ ಅವರೂ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ​

ಸಿನಿಮಾ ಬಿಟ್ಟರೆ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿಗೆ ಏನು ತುಂಬಾ ಇಷ್ಟ ಗೊತ್ತಾ..?

First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ