ಮಾಲ್ಗುಡಿ ಡೇಸ್ ಚಾಲೆಂಜ್: ಫೋಟೋ ಕ್ಲಿಕ್ಕಿಸಿ ಬಹುಮಾನ ಗೆಲ್ಲಿ, ಉಚಿತವಾಗಿ ಚಿತ್ರ ವೀಕ್ಷಿಸಿ

Malgudi Days: ರತ್ನಾಕರ್ ಕಾಮತ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಎಂಬ ಕಾಲ್ಪನಿಕ ವ್ಯಕ್ತಿಯ ಜೀವನದ ಕಥಾ ಹಂದರ ಹೊಂದಿದೆ. ಮಾಲ್ಗುಡಿ ಪಾತ್ರಕ್ಕಾಗಿ ವಿಜಯ ರಾಘವೇಂದ್ರ ಸಾಕಷ್ಟು ಶ್ರಮ ಕೂಡ ಹಾಕಿದ್ದಾರೆ.

zahir | news18-kannada
Updated:January 14, 2020, 6:15 PM IST
ಮಾಲ್ಗುಡಿ ಡೇಸ್ ಚಾಲೆಂಜ್: ಫೋಟೋ ಕ್ಲಿಕ್ಕಿಸಿ ಬಹುಮಾನ ಗೆಲ್ಲಿ, ಉಚಿತವಾಗಿ ಚಿತ್ರ ವೀಕ್ಷಿಸಿ
.
  • Share this:
ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ 'ಮಾಲ್ಗುಡಿ ಡೇಸ್' ಟೀಸರ್ ಮೂಲಕವೇ ಭಾರೀ ಸದ್ದು ಮಾಡುತ್ತಿದೆ. ವಿಭಿನ್ನ ನಿರೂಪಣೆ ಮತ್ತು ನೆಲಗಟ್ಟಿನ ಕಥೆ ಹೊಂದಿರುವ ಈ ಚಿತ್ರ ಹಲವು ರೀತಿಯಲ್ಲಿ ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ಸಿನಿಪ್ರಿಯರಿಗೆ ಚಿತ್ರತಂಡ ವಿಶೇಷ ಆಫರ್​ವೊಂದನ್ನು ಮುಂದಿಟ್ಟಿದೆ.

ಪ್ರಯೋಗಗಳಿಗೆ ತಮ್ಮನ್ನು ತಾವು ಸದಾ ತೆರೆದುಕೊಳ್ಳುವ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ 60 ವರ್ಷ ವಯಸ್ಸು ದಾಟಿದ ವಯೋವೃದ್ಧನ ಪಾತ್ರ ನಿರ್ವಹಿಸಿದ್ಧಾರೆ. ಇದೇ ಮಾದರಿಯಲ್ಲಿ ನೀವು ವಯಸ್ಸಾದರೆ ಹೇಗೆ ಕಾಣಿಸುತ್ತೀರಿ ಎಂದು ತಿಳಿಯಲು ಹಲವು ಆ್ಯಪ್​ಗಳು ಲಭ್ಯವಿದೆ. ಇಂತಹ ಅಪ್ಲಿಕೇಶನ್​ ಮೂಲಕ ನಿಮ್ಮ ಫೋಟೋ  ಕ್ಲಿಕ್ಕಿಸಿ  ವಯಸ್ಸಾದಾಗ ಹೇಗೆ ಕಾಣಿಸುತ್ತೀರಿ ಎಂದು ತಿಳಿಸಿದರೆ 'ಮಾಲ್ಗುಡಿ ಡೇಸ್' ಚಿತ್ರತಂಡ ಬಹುಮಾನ ನೀಡಲಿದೆ.

ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಫೋಟೋ ಕ್ಲಿಕ್ಕಿಸಿ ನಿಮ್ಮ ನೆಚ್ಚಿನ ಹಲೋ ಆ್ಯಪ್​ನಲ್ಲಿ #MalgudiDaysFaceChallenge ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿದರೆ ಸಾಕು. ನಿಮ್ಮ ಫೋಟೋಗೆ ಆಕರ್ಷಕ ಬಹುಮಾನ ಸಿಗುವುದಲ್ಲದೆ, ಮಾಲ್ಗುಡಿ ಡೇಸ್ ಚಿತ್ರ ತಂಡದೊಂದಿಗೆ ಸಿನಿಮಾ ವೀಕ್ಷಿಸುವ ಸುವರ್ಣಾವಕಾಶ ಪಡೆಯುತ್ತೀರಿ.

ಮಾಲ್ಗುಡಿ ಡೇಸ್


ಅಂದಹಾಗೆ, ಎಂಬತ್ತರ ದಶಕದಲ್ಲಿ ಕಿರುತೆರೆಯಲ್ಲಿ ಧಾರಾವಾಹಿಯಾಗಿ ಬಂದ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಚಿತ್ರಕ್ಕೂ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರಕ್ಕೂ ಸಂಬಂಧವಿಲ್ಲ. ಇದು ಬೇರೆಯದೇ ಕಥೆಯಾಗಿದೆ ಎಂದು ನಿರ್ದೇಶಕ ಕಿಶೋರ್ ಮೂಡಬಿದ್ರೆ ತಿಳಿಸಿದ್ದಾರೆ.

ರತ್ನಾಕರ್ ಕಾಮತ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಎಂಬ ಕಾಲ್ಪನಿಕ ವ್ಯಕ್ತಿಯ ಜೀವನದ ಕಥಾ ಹಂದರ ಹೊಂದಿದೆ. ಮಾಲ್ಗುಡಿ ಪಾತ್ರಕ್ಕಾಗಿ ವಿಜಯ ರಾಘವೇಂದ್ರ ಸಾಕಷ್ಟು ಶ್ರಮ ಕೂಡ ಹಾಕಿದ್ದಾರೆ. ಕಷ್ಟವೆನಿಸುವ ವಯೋವೃದ್ಧನ ಪಾತ್ರ ನಿರ್ವಹಣೆಯನ್ನು ಅವರು ಸರಾಗವಾಗಿ ಮಾಡಿದ್ಧಾರೆನ್ನಲಾಗಿದೆ. ಶೂಟಿಂಗ್ ದಿನಗಳಲ್ಲಿ ಅವರ ಮೇಕಪ್​ಗಾಗೇ ನಾಲ್ಕೈದು ಗಂಟೆ ತೆಗೆದುಕೊಳ್ಳುತ್ತಿತ್ತು. ಕೇರಳದ ರೋಷನ್ ಎಂಬುವರು ಮೇಕಪ್ ಮಾಡಿದ್ದು, ಈ ಬಗ್ಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ ಎಂದಿದ್ದಾರೆ ನಿರ್ದೇಶಕರು.

ಅಂದಹಾಗೆ, ನಿರ್ದೇಶಕ ಕಿಶೋರ್ ಮೂಡಬಿದ್ರೆ ಅವರಿಗೆ ಇದು ಚೊಚ್ಚಲ ಕನ್ನಡ ಸಿನಿಮಾ. ಈಗಾಗಲೇ “ಅಪ್ಪೆ ಟೀಚರ್” ಎಂಬ ಸೂಪರ್ ಹಿಟ್ ತುಳು ಸಿನಿಮಾ ನಿರ್ದೇಶಿಸಿರುವ ಕಿಶೋರ್ ಅವರು ಕೆಲ ಕನ್ನಡ ಧಾರಾವಾಹಿಗಳಲ್ಲೂ ತೊಡಗಿಸಿಕೊಂಡ ಅನುಭವ ಹೊಂದಿದ್ದಾರೆ.ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ಗ್ರೀಷ್ಮಾ ಶ್ರೀಧರ್ ನಟಿಸಿದ್ದಾರೆ. ಉದಯ್ ಲೀಲಾ ಅವರು ಕ್ಯಾಮರಾ ಕೆಲಸ ನಿರ್ವಹಿಸಿದ್ಧಾರೆ. ತುಳು ಸಿನಿರಂಗ ಮತ್ತು ಕನ್ನಡ ಕಿರುತೆರೆಯ ಹಲವು ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಮಾಲ್ಗುಡಿ ಡೇಸ್ ನಟ ವಿಜಯ ರಾಘವೇಂದ್ರ ಮತ್ತು ನಿರ್ದೇಶಕ ಕಿಶೋರ್ ಮೂಡಬಿದ್ರೆ ಇಬ್ಬರಿಗೂ ಬಹುನಿರೀಕ್ಷೆಯ ಮತ್ತು ಅಗ್ನಿಪರೀಕ್ಷೆಯ ಸಿನಿಮಾವಾಗಿದೆ. ಈ ಚಿತ್ರವು ಕನ್ನಡ ಸಿನಿಮಾ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ.

ಇದೀಗ ತಮ್ಮ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಾಣುವ ಇರಾದೆಯಲ್ಲಿರುವ ನಿರ್ದೇಶಕ ಕಿಶೋರ್ #MalgudiDaysFaceChallenge ಮೂಲಕ ವಿಭಿನ್ನ ಪ್ರಚಾರಕ್ಕೆ ಇಳಿದಿದ್ದು, ಆ ಮೂಲಕ ಸಿನಿ ಪ್ರಿಯರಿಗೆ  ಬಹುಮಾನ ಮತ್ತು ಫ್ರಿ ಚಿತ್ರ ವೀಕ್ಷಿಸುವ ಅವಕಾಶ ನೀಡಿ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​ ಕನ್ನಡ ಸೀಸನ್​ 7ನಲ್ಲಿ ಬಿಗ್ ಟ್ವಿಸ್ಟ್​..!

ಇದನ್ನೂ ಕ್ಲಿಕ್ ಮಾಡಿ: ಬೆಕ್ಕಿನ ಜೀವ ಉಳಿಸಲು ಮಗುವಿನ ಪ್ರಾಣದೊಂದಿಗೆ ಚೆಲ್ಲಾಟ: ವೈರಲ್ ಆಯ್ತು ಭೀಭತ್ಸ ವಿಡಿಯೋ..!
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ