• Home
  • »
  • News
  • »
  • entertainment
  • »
  • ಭಾರತದಿಂದ ಮಾಲ್ಡೀವ್ಸ್‌ಗೆ ವಿಮಾನ ನಿಷೇಧ: ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಿಸಿ ಮುಟ್ಟಿಸಿದ ಮೀಮ್ಸ್‌

ಭಾರತದಿಂದ ಮಾಲ್ಡೀವ್ಸ್‌ಗೆ ವಿಮಾನ ನಿಷೇಧ: ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಿಸಿ ಮುಟ್ಟಿಸಿದ ಮೀಮ್ಸ್‌

ಬಾಲಿವುಡ್​ ಸೆಲೆಬ್ರಿಟಿಗಳ ಕುರಿತಾದ ಮೀಮ್ಸ್​

ಬಾಲಿವುಡ್​ ಸೆಲೆಬ್ರಿಟಿಗಳ ಕುರಿತಾದ ಮೀಮ್ಸ್​

ಮಾಲ್ಡೀವ್ಸ್ ಎನ್ನುವ ಪ್ರವಾಸಿ ತಾಣ ಭಾರತದ ಬಹುತೇಕರಿಗೆ ಹತ್ತಿರವಾಗಿದ್ದೇ ಸೆಲೆಬ್ರಿಟಿಗಳು ಅಲ್ಲಿ ಕಾಣಿಸಿಕೊಂಡಾಗ. ಅಲ್ಲದೇ ಮಾಲ್ಡೀವ್ಸ್ ಅಂದ್ರೆ ಜನಪ್ರಿಯ ವ್ಯಕ್ತಿಗಳಿಗೆ ಮನಮೆಚ್ಚಿನ ತಾಣ. ಇತ್ತೀಚೆಗೆ ಜಾನ್ವಿ ಕಪೂರ್, ಶ್ರದ್ಧಾ ಕಪೂರ್ ಮತ್ತು ದಿಶಾ ಪಟಾನಿಯಂತಹ ಅನೇಕ ನಟಿಯರು ಸಮುದ್ರ ತೀರದಲ್ಲಿ ತೆಗೆದ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಮೊನ್ನೆಯಷ್ಟೇ ಮಾಲ್ಡೀವ್ಸ್‌ಗೆ ಹೋಗಿ ಹಿಂತಿರುಗಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್ ಸೆಲೆಬ್ರಿಟಿಗಳಾದ ಜಾಹ್ನವಿ ಕಪೂರ್, ಶ್ರದ್ಧಾ ಕಪೂರ್ ಮತ್ತು ದಿಶಾ ಪಟಾನಿ ಸೇರಿದಂತೆ ಬಾಲಿವುಡ್‌ನ ಬಹುತೇಕ ಮಂದಿ ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ತೆಗೆದ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಅಲ್ಲದೇ ಇತ್ತೀಚೆಗೆ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಕೊರೋನಾ ಕ್ವಾರಂಟೈನ್ ಮುಗಿಸಿ ಮಾಲ್ಡೀವ್ಸ್‌ಗೆ ಹಾರಿದ್ದರು. ಕೋವಿಡ್ 19ರ ಎರಡನೇ ಅಲೆಯಿಂದ ಭಾರತ ತತ್ತರಿಸುತ್ತಿದೆ. ಅಲ್ಲದೇ  ಭಾರತದಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಇನ್ನಿತರ ದೇಶಗಳು ಭಯ ಭೀತರಾಗಿದ್ದಾರೆ. ಆದ್ದರಿಂದ ಬೇರೆ ಬೇರೆ ದೇಶಗಳು ಭಾರತದಿಂದ  ಹೋಗುವವರನ್ನು ಬರಮಾಡಿಕೊಳ್ಳಲು ಹಿಂದೇಟು ಹಾಕಿದ್ದು ಭಾರತದಿಂದ ಬರುವ, ಹೋಗುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ. ಪ್ರಸ್ತುತ ಭಾರತದಿಂದ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸುತ್ತಿವೆ. ಯುಕೆ, ಹಾಂಗ್ ಕಾಂಗ್, ಕೆನಡಾ, ಸಿಂಗಾಪುರ್ ಮತ್ತು ಇರಾನ್ ಸೇರಿದಂತೆ ಹಲವು ದೇಶಗಳು ಭಾರತದಿಂದ ವಿಮಾನ ನಿಷೇಧಿಸಿರುವುದಾಗಿ ಘೋಷಿಸಿವೆ.


ಯುಎಸ್ ತನ್ನ ಎಲ್ಲಾ ಪ್ರಯಾಣಿಕರಿಗೂ ಮಾರ್ಗದರ್ಶನ ನೀಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಭಾರತದಿಂದ ಹೊರಗೆ ಮತ್ತು ಒಳಗೆ ಪ್ರಯಾಣಿಕರು ಪಯಣಿಸುವುದು ಸರಿಯಲ್ಲ. ಪ್ರಸ್ತುತ ಲಸಿಕೆ ಹಾಕಿಸಿಕೊಂಡಿರುವ ವ್ಯಕ್ತಿಗಳು ಸಹ ವೈರಸ್‌ಗೆ ತುತ್ತಾಗುವ ಮೂಲಕ ಸೋಂಕಿತರರಾಗುತ್ತಿದ್ದಾರೆ ಎಂದಿದೆ. ಇನ್ನೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಭಾರತದ ವಿಮಾನವನ್ನು ನಿಷೇಧಿಸಿರುವ ಹೊಸ ದೇಶದ ಪಾಲಿಗೆ ಸೆಲೆಬ್ರಿಟಿಗಳ ಹಬ್​ ಆಗಿರುವ ಮಾಲ್ಡೀವ್ಸ್ ಕೂಡ ಈಗ ಸೇರಿಕೊಂಡಿದೆ. ಪ್ರವಾಸೋದ್ಯಮ ಸಚಿವಾಲಯವು ಭಾರತದಿಂದ ವಿಮಾನಗಳನ್ನು ಸ್ಥಗಿತಗೊಳಿಸಿರುವುದಾಗಿ ಭಾನುವಾರ ಟ್ವೀಟ್ ಮಾಡಿದೆ.'ಏಪ್ರಿಲ್ 27 ರಿಂದ ಜಾರಿಗೆ ಬರುವಂತೆ ಭಾರತದಿಂದ ಮಾಲ್ಡೀವ್ಸ್‌ಗೆ ಪ್ರಯಾಣಿಸಲು ಸಜ್ಜಾಗಿರುವ ಪ್ರಯಾಣಿಕರ ಮೇಲೆ ನಿಷೇಧ ಹೇರಲಾಗಿದೆ. ಜನವಸತಿ ದ್ವೀಪಗಳಲ್ಲಿ ಪ್ರವಾಸಿಗರು ಉಳಿಯುವಂತಿಲ್ಲ. ಈ ಎಲ್ಲಾ ಅನಾನುಕೂಲತೆಯೊಂದಿಗೆ ನಮ್ಮ ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸಲು ಪ್ರಯತ್ನಿಸಲು ನಿಮ್ಮ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ' ಎಂದು ಹೇಳಲಾಗಿದೆ.


ಈ ಪ್ರಕಟಣೆಯ ನಂತರ ಇಂಟರ್​ನೆಟ್‌ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಕುರಿತು ಮೀಮ್ಸ್‌ಗಳು ಹರಿದಾಡುತ್ತಿವೆ. ಭಾರತ ಎರಡನೇ ಅಲೆಯಲ್ಲಿ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೂಕ್ಷ್ಮತೆ ಕಳೆದುಕೊಂಡವರಂತೆ ತಮ್ಮ ಮಾಲ್ಡೀವ್ಸ್‌ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮುಜುಗರಕ್ಕೊಳಗಾಗಿದ್ದಾರೆ.


ಮಾಲ್ಡೀವ್ಸ್ ಎನ್ನುವ ಪ್ರವಾಸಿ ತಾಣ ಭಾರತದ ಬಹುತೇಕರಿಗೆ ಹತ್ತಿರವಾಗಿದ್ದೇ ಸೆಲೆಬ್ರಿಟಿಗಳು ಅಲ್ಲಿ ಕಾಣಿಸಿಕೊಂಡಾಗ. ಅಲ್ಲದೇ ಮಾಲ್ಡೀವ್ಸ್ ಅಂದ್ರೆ ಜನಪ್ರಿಯ ವ್ಯಕ್ತಿಗಳಿಗೆ ಮನಮೆಚ್ಚಿನ ತಾಣ. ಇತ್ತೀಚೆಗೆ ಜಾನ್ವಿ ಕಪೂರ್, ಶ್ರದ್ಧಾ ಕಪೂರ್ ಮತ್ತು ದಿಶಾ ಪಟಾನಿಯಂತಹ ಅನೇಕ ನಟಿಯರು ಸಮುದ್ರ ತೀರದಲ್ಲಿ ತೆಗೆದ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಮೊನ್ನೆಯಷ್ಟೇ ಮಾಲ್ಡೀವ್ಸ್‌ಗೆ ಹೋಗಿ ಹಿಂತಿರುಗಿದ್ದಾರೆ. ಆದರೆ ಇನ್ನೂ ಯಾವ ಫೋಟೋಗಳನ್ನೂ ಹಂಚಿಕೊಂಡಿಲ್ಲ.


ಇನ್ನು, ಬಾಲಿವುಡ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಪ್ರವಾಸವಿಲ್ಲದೇ ಹೇಗೆಲ್ಲಾ ರಿಯಾಕ್ಟ್ ಮಾಡಬಹುದು ಎನ್ನುವ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಾಲಿವುಡ್ ಸೆಲೆಬ್ರೆಟಿ ಇಂದು ರಾತ್ರಿ : 'ಅ ರಾತ್ರಿ ಅವನು 2 ಗಂಟೆ ತನಕ ಕುಡಿದ' ಎಂದು ಒಬ್ಬ ಬಳಕೆದಾರರು ತಿಳಿಸಿದ್ದರೆ, ಪ್ರಯಾಗ್ ಎನ್ನುವ ಬಳಕೆದಾರರು 'ನಾನೀಗ ಏನ್ ಮಾಡ್ಲಿ ಮತ್ತೆ? ಕೆಲ್ಸ ಬಿಡ್ಲಾ?' ಎಂದು ಕಾಲೆಳೆದಿದ್ದಾರೆ.


ಶರ್ಮಾಜಿ ಕಾ ಬೇಟಾ ಎನ್ನುವ ಬಳಕೆದಾರರು 'ಈಗ ಗೋವಾ ಬನ್ನಿ ಬನ್ನಿ ಎಂದು ಬಾಲಿವುಡ್ ಮಂದಿಯನ್ನು ಕರೆಯುತ್ತಿದೆ' ಎಂದಿದ್ದಾರೆ. ಇನ್ನು, ಅನಿಂದಿತಾ ಆಚಾರ್ಯ ಎನ್ನುವವರು 'ಇದು ಬಹಳ ತಡವಾಗಿಲ್ಲವೇ? ಮಾಲ್ಡೀವ್ಸ್‌ನ ಸೂರ್ಯನ ರಶ್ಮಿಯ ಚುಂಬನವನ್ನು ಈಗಾಗಲೇ ಬಹಳಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಪೋಸ್ಟ್ ಮಾಡಿ ಆಗಿದೆ' ಎಂದಿದ್ದಾರೆ.


ಇದನ್ನೂ ಓದಿ: Kavya Gowda: ಬಾಯ್​ಫ್ರೆಂಡ್​ ಜತೆ ದುಬೈನಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ..!​


ಶೃತಿ ಎನ್ನುವ ಬಳಕೆದಾರರು 'ಇನ್ನಾದರೂ ನಮ್ಮ ಸೆಲೆಬ್ರಿಟಿಗಳು, ತಮ್ಮ ಸವಲತ್ತುಗಳನ್ನು ಪಕ್ಕಕ್ಕಿಟ್ಟು ಸಾಮಾನ್ಯರ ನೋವು ಅರಿತುಕೊಳ್ಳಬಹುದು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಕೆಲಸ ಕಳೆದುಕೊಂಡರೇ? ಈಗ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ಗಳನ್ನು ಹೇಗೆ ಪ್ರಸಿದ್ಧಿಗೊಳಿಸುತ್ತಾರೆ' ಎಂದಿದ್ದಾರೆ. ಈಗಾಗಲೇ ಮಾಲ್ಡೀವ್ಸ್‌ಗೆ ಟಿಕೆಟ್ ಬುಕ್ ಮಾಡಿರುವವರು 'ನನ್ನ ಹಣೆಬರಹವೇ ಸರಿಯಿಲ್ಲ' ಎಂದುಕೊಳ್ಳುತ್ತಾರೆ ಮತ್ತೊಬ್ಬರು 'ಟುನಕ್ ಟುನಕ್ ಮ್ಯೂಸಿಕ್ ನಿಲ್ಲುತ್ತದೆ' ಎಂದಿದ್ದಾರೆ.ಬಾಲಿವುಡ್ ಸೆಲೆಬ್ರಿಟಿಗಳು ರಜೆ ದಿನದ ಚಿತ್ರಗಳನ್ನು ಪೋಸ್ಟ್ ಮಾಡುವ ಕುರಿತು ನಟ ನವಾಜುದ್ದೀನ್ ಸಿದ್ದಿಕಿ ಆಕ್ರೋಶ ಹೊರ ಹಾಕಿದ್ದರು. ನಮ್ಮ ಜಗತ್ತು ಭೀಕರ ಆರ್ಥಿಕ ಹೊಡೆತದಿಂದ ತತ್ತರಿಸುತ್ತಿದೆ. ಜನರಿಗೆ ಆಹಾರವಿಲ್ಲ ಮತ್ತು ನೀವು ಹಣವನ್ನು ವ್ಯರ್ಥ ಮಾಡುತ್ತಿದ್ದೀರಿ, ಸ್ವಲ್ಪವಾದ್ರೂ ನಾಚಿಕ ಬೇಡ್ವಾ?. " ಎಂದು ತರಾಟೆಗೆ ತೆಗೆದುಕೊಂಡಿದ್ದರು.


ಇದನ್ನೂ ಓದಿ: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!


'ಸೆಲೆಬ್ರಿಟಿಗಳ ಬಳಿ ಮಾತನಾಡುವುದಕ್ಕೆ ಬೇರೆ ವಿಷಯವಿಲ್ಲ. ಅದಕ್ಕೆ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನಟನೆ ಬಿಟ್ಟು ಇನ್ನೇನು ಮಾಡಬಲ್ಲರು? ಇವರೆಲ್ಲಾ ಮಾಲ್ಡೀವ್ಸ್‌ನ ಒಂದು ತಮಾಷೆಯಾಗಿ ಕಾಣುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಜೊತೆಗೆ ಅವರ ಮಾತುಕತೆ ಏನಿದೆಯೋ ಗೊತ್ತಿಲ್ಲ. ಆದರೆ ಈ ಸಮಯದಲ್ಲಿ ಮಾನವೀಯತೆ ಮೆರೆಯಲು ನಿಮ್ಮ ರಜೆ ಬಳಸಿಕೊಳ್ಳಿ. ಎಲ್ಲಾ ಕಡೆ ಸಂಕಟದ ಕೂಗಿದೆ. ಕೋವಿಡ್ ಕಾವು ಸುಡುತ್ತಿದೆ. ದಯವಿಟ್ಟು ಹೃದಯದಿಂದ ಯೋಚಿಸಿ. ಈಗಾಗಲೇ ನೊಂದವರನ್ನೂ ಹಾಗೂ ಸಂಕಟದಲ್ಲಿರುವವರನ್ನು ಕೆಣಕಬೇಡಿ' ಎಂದು ನವಾಜುದ್ದೀನ್ ತಿಳಿಸಿದ್ದಾರೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು