Director Sachy passed Away: ಅಯ್ಯಪ್ಪನುಂ ಕೋಶಿಯುಮ್‘​ ನಿರ್ದೇಶಕ ಸಚ್ಚಿದಾನಂದನ್ ನಿಧನ

ಸಚ್ಚಿ ಎಂದೇ ಖ್ಯಾತಿ ಆಗಿದ್ದ ಇವರಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಹೀಗಾಗಿ ಇವರನ್ನು ತ್ರಿಶೂರ್​ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಸಚ್ಚಿ

ಸಚ್ಚಿ

 • Share this:
  ಭಾರತೀಯ ಚಿತ್ರರಂಗಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ನವಾಜುದ್ದೀನ್​ ಸಿದ್ಧಕಿ, ರಿಷಿ ಕಪೂರ್​, ಚಿರಂಜೀವಿ ಸರ್ಜಾ, ಸುಶಾಂತ್​ ಸಿಂಗ್​ ಅವರನ್ನು ನಾವು ಕಳೆದುಕೊಂಡಿದ್ದೇವೆ. ಈಗ ಮಲಯಾಳಂನ ಖ್ಯಾತ ನಿರ್ದೇಶಕ ಕೆಆರ್​ ಸಚಿದಾನಂದನ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

  ಸಚ್ಚಿ ಎಂದೇ ಖ್ಯಾತಿ ಆಗಿದ್ದ ಇವರಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಹೀಗಾಗಿ ಇವರನ್ನು ತ್ರಿಶೂರ್​ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.

  ಸಚಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಅನಾರ್ಕಲಿ ಮತ್ತು ​ ಅಯ್ಯಪ್ಪನುಂ ಕೋಶಿಯುಮ್ ಸಿನಿಮಾಗಳು ಪ್ರಮುಖವಾದುವು. ಅಯ್ಯಪ್ಪನುಂ ಕೋಶಿಯುಮ್ ಸಿನಿಮಾದಲ್ಲಿ ಪೃಥ್ವಿರಾಜ್​ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾ ಹಿಂದಿ, ತಮಿಳು ಹಾಗೂ ತೆಲುಗಿಗೂ ರಿಮೇಕ್​ ಆಗುತ್ತಿದೆ.  ಸಚಿ ಸಾವಿಗೆ ಮಲಯಾಳಂ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಸುರಿಸಿದೆ. ಅಲ್ಲದೆ, ಒಂದಾದರ ಮೇಲೆ ಒಂದರಂತೆ ಶಾಕ್​ ಎದುರಾಗುತ್ತಿರುವುದಕ್ಕೆ ಆಘಾತ ಕೂಡ ವ್ಯಕ್ತಪಡಿಸಿದ್ದಾರೆ.
  First published: