Forensic: ಕನ್ನಡಕ್ಕೆ ಮಲಯಾಳಂನ ಸೂಪರ್​ ಹಿಟ್​ ಸಿನಿಮಾ ಡಬ್​.. ಅಲ್ಲಿ `ಫೋರೆನ್ಸಿಕ್​’ ಇಲ್ಲಿ `ಅಂತಿಮಕ್ಷಣ’!

ಮಮತಾ, ಟೊವಿನೊ ಥಾಮಸ್​, ರಾಬಾ ಮೋನಿಕಾ

ಮಮತಾ, ಟೊವಿನೊ ಥಾಮಸ್​, ರಾಬಾ ಮೋನಿಕಾ

  • Share this:
ಮಲಯಾಳಂ(Malayalam) ಚಿತ್ರರಂಗದಲ್ಲಿ ಕಥೆ(Story) ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತೆ. ಸಿಂಪಲ್​ ಕಥೆ ಇದ್ದರೂ ಅದನ್ನು ಜನರಿಗೆ ಮುಟ್ಟಿಸುವ ರೀತಿ ಅದ್ಭುತವಾಗಿರುತ್ತೆ. ಅದರಲ್ಲೂ ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ಕಥೆಯುಳ್ಳ ಸಿನಿಮಾಗಳನ್ನೇ ಸಿನಿಪ್ರಿಯರಿಗೆ ನೀಡುತ್ತಿದೆ. ಈ ಸಿನಿಮಾಗಳು ಬಾಕ್ಸಾಫೀಸ್‌(Box Office)ನಲ್ಲೂ ಉತ್ತಮ ಗಳಿಕೆ ಕಂಡಿವೆ. ಆದರೆ, ಮಲಯಾಳಂ ಸಿನಿಮಾಗಳು ಕನ್ನಡ ಭಾಷೆಗಳಿಗೆ ಅತೀ ಕಡಿಮೆ ಸಂಖ್ಯೆಯಲ್ಲಿ ಡಬ್(Dub) ಆಗುತ್ತಿತ್ತು. ಆದರೆ, ಈಗ 2020ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ(Super Hit Cinema)ವೊಂದು ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಸಜ್ಜಾಗಿದೆ. ಹೌದು, ‘ಫೋರೆನ್ಸಿಕ್​’(Forensic) ಸಿನಿಮಾ ಕನ್ನಡಕ್ಕೆ ಡಬ್​ ಆಗುತ್ತಿದೆ.  ಮಲೆಯಾಳಂನಲ್ಲಿ ಕಂಟೆಂಟ್ ಓರಿಯಂಟೆಡ್(Content Oriented) ಚಿತ್ರಗಳು ಹೆಚ್ಚು ಬರುತ್ತದೆ ಎಂಬ ಮಾತು ಎಲ್ಲೆಡೆ ಇದೆ. ಆ ಪೈಕಿ ವಿಭಿನ್ನ ಕಥಾಹಂದರ ಹೊಂದಿರುವ ‘ಫೋರೆನ್ಸಿಕ್​’ಚಿತ್ರವೂ ಒಂದು. ಈ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು.

ಕನ್ನಡದಲ್ಲಿ ‘ಅಂತಿಮ ಕ್ಷಣ’ವಾಗಿ ಬರ್ತಿದೆ ಫೋರೆನ್ಸಿಕ್​!

‘ಫೋರೆನ್ಸಿಕ್​’ ಚಿತ್ರ ನೋಡಿ ಪ್ರಭಾವಿತರಾದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು ‘ಅಂತಿಮಕ್ಷಣ’ ಎಂಬ ಹೆಸರಿನಿಂದ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ‌ತಿಳಿಯಲಿದೆ. ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಟೊವಿನೊ‌ ಥಾಮಸ್, ರೆಬಾ ಮೋನಿಕಾ, ಮಮತ ಮೋಹನದಾಸ್,‌ ಪ್ರತಾಪ್ ಪೋಪನ್ , ಜಿಜುಜಾನ್ ಮುಂತಾದವರಿದ್ದಾರೆ.

ಟೊವಿನೋ ಥಾಮಸ್ ​ ಸಿನಿಮಾ ‘ಫೋರೆನ್ಸಿಕ್’!

ಮಲಯಾಳಂ ಸ್ಟಾರ್ ಟೊವಿನೋ ಥಾಮಸ್ ಹಾಗೂ ಮಮತಾ ಮೋಹನ್‌ದಾಸ್,  ರೆಬಾ ಮೋನಿಕಾ ಜಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಫೋರೆನ್ಸಿಕ್'. 2020ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಹಾಗೂ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.  ಜೆಕ್ಸ್ ಬಿಜೋಯ್ ಸಂಗೀತ ನಿರ್ದೇಶನ, ಅಖಿಲ್ ಜಾರ್ಜ್ ಛಾಯಾಗ್ರಹಣ, ಶಮೀರ್ ಅಹಮದ್ ಸಂಕಲನ ಈ ಚಿತ್ರಕ್ಕಿದೆ. ಬಿ.ಮಂಜುನಾಥ್ ಹಾಗೂ ರಜನೀಶ್ ದೇವ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: Puneeth Rajkumar ಅಲ್ಲ ಇವರು ಜ್ಯೂ.'ಅಪ್ಪು'! 'ಮಾರಕಾಸ್ತ್ರ' ಹಿಡಿದು ಬರ್ತಿದ್ದಾರೆ ಆನಂದ್

‘ಫೋರೆನ್ಸಿಕ್’ ಸಿನಿಮಾ ತಮಿಳು-ತೆಲುಗಿಗೂ ಡಬ್

ಮಲಯಾಳಂ ಸಿನಿಮಾ 'ಫೋರೆನ್ಸಿಕ್' ಕೇವಲ ಕನ್ನಡ ಅಷ್ಟೇ ಅಲ್ಲ. ತೆಲುಗು ಹಾಗೂ ತಮಿಳು ಭಾಷೆಗೂ ಡಬ್ ಆಗಿದೆ. ತಮಿಳು ಭಾಷೆಯಲ್ಲಿ 'ಕಡೈಸಿ ನೊಡಿಗಳ್' ಹೆಸರಿನಲ್ಲಿ ಬಿಡುಗಡೆಯಾಗಿದೆ. ಇದೇ ರೀತಿ ತೆಲುಗಿಗೂ ಸಿನಿಮಾ ಡಬ್ ಆಗಿದೆ. ಟೊವಿನೊ ಥಾಮಸ್ ನಟಿಸಿದ ಸಿನಿಮಾ 'ಮಿನ್ನಲ್ ಮುರಳಿ' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಜನಪ್ರಿಯತೆಯನ್ನೇ ಆಧಾರವಾಗಿಟ್ಟುಕೊಂಡು ದಕ್ಷಿಣ ಭಾರತದ ಸಿನಿಮಾಗಳಿಗೆ ಡಬ್ ಮಾಡಲಾಗುತ್ತಿದೆ.

ಇದನ್ನೂ ಓದಿ: Sandalwoodಗೆ ಕೊಡಗಿನ ಹೊಸ ಪ್ರತಿಭೆ, ನಿರ್ದೇಶಕಿಯಾಗಿ ಯಶೋಧಾ ಪ್ರಕಾಶ್ `ರಂಗಪ್ರವೇಶ’!

ಹಿಂದಿಗೂ ರಿಮೇಕ್​ ಆಗುತ್ತಿದೆ ಮಲಯಾಳಂ ಸಿನಿಮಾ!

ಹೌದು, ಕನ್ನಡ, ತೆಲುಗು, ತಮಿಳು ಭಾಷೆಗೆ ಫೋರೆನ್ಸಿಕ್​ ಸಿನಿಮಾ ಡಬ್​ ಆಗುತ್ತಿದೆ. ಆದರೆ, ಹಿಂದಿಯಲ್ಲಿ ಈ ಸಿನಿಮಾವನ್ನು ರಿಮೇಕ್​ ಮಾಡಲಾಗುತ್ತಿದೆ. ಟೊವಿನೊ ಥಾಮಸ್​ ನಟಿಸಿದ್ದ ಪಾತ್ರದಲ್ಲಿ ಹಿಂದಿಯ ವಿಕ್ರಾಂತ್​ ಮಸೈ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ರಾಧಿಕಾ ಆಪ್ಟೆ, ಪ್ರಾಚಿ ದೇಸಾಯಿ, ರೋಹಿತ್ ರಾಯ್ ಕೂಡ ನಟಿಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನೂ ಕನ್ನಡಕ್ಕೆ ಡಬ್​ ಆಗುತ್ತಿರುವ ಫೋರೆನ್ಸಿಕ್​ ಸಿನಿಮಾಗೆ ಯಾವ ಒಟಿಟಿ ಸಂಸ್ಥೆ ಹಕ್ಕುಗಳನ್ನು ಖರೀದಿಸುತ್ತೆ ಅಂತ ಕಾದುನೋಡಬೇಕಿದೆ.
Published by:Vasudeva M
First published: