Holy Wound: ಸಲಿಂಗ ಕಾಮದ ಕುರಿತಾದ ಮಲಯಾಳಂ ಚಿತ್ರ ಈಗ ಒಟಿಟಿಯಲ್ಲಿ ಲಭ್ಯ

ಮಲಯಾಳಂ ಚಿತ್ರವಾದ "ಹೋಲಿ ವೂಂಡ್",  ಓಟಿಟಿ ವೇದಿಕೆಯಾದ ಎಸ್.ಎಸ್ ಫ್ರೇಮ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಮಹಿಳಾ ಸಲಿಂಗ ಕಾಮಾಧರಿತ ಅಂದರೆ ಲೆಸ್ಬಿಯನ್‍ಗೆ ಸಂಬಂಧಿಸಿದ ಚಿತ್ರಕಥೆ ಹೊಂದಿದೆ. ಬಿಗ್ ಬಾಸ್ ಸ್ಪರ್ಧಿ ಜಾನಕಿ ಸುಧೀರ್ ಹಾಗೂ ಅಮೃತಾ ವಿನೋದ್ ಅವರು ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವನ್ನು ಅಶೋಕ್ ಆರ್ ನಾಥ್ ಅವರು ನಿರ್ದೇಶಿಸಿದ್ದಾರೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿದೆ.

ಹೋಲಿ ವೂಂಡ್

ಹೋಲಿ ವೂಂಡ್

  • Share this:
ಹಿಂದೊಮ್ಮೆ ಜನರು ಮನರಂಜನೆ ಬೇಕೆಂದಿದ್ದರೆ ಹೊಸ ಚಿತ್ರಗಳು (New Movies) ಚಿತ್ರಮಂದಿರಗಳಲ್ಲಿ (Theater) ಬಿಡುಗಡೆಯಾಗುವವರೆಗೂ ಕಾಯಬೇಕಿತ್ತು. ಆದರೆ, ಕಾಲ ಈಗ ಬದಲಾಗಿದೆ. ಮನರಂಜನೆಗೇನೂ ಕೊರತೆಯಿಲ್ಲ. ಈ ಓಟಿಟಿ ವೇದಿಕೆಗಳು ಬಂದಾಗಿನಿಂದಲೂ ಚಿತ್ರಮಂದಿರಗಳಿಗೇನೇ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಕುಳಿತು ಹೊಸ ಹೊಸ ಚಿತ್ರಗಳನ್ನು ನೋಡಬಹುದಾಗಿದೆ. ಸದ್ಯ, ಈಗ ಮಲಯಾಳಂ ಚಿತ್ರವಾದ "ಹೋಲಿ ವೂಂಡ್" (Holy Wound),  ಓಟಿಟಿ ವೇದಿಕೆಯಾದ ಎಸ್.ಎಸ್ ಫ್ರೇಮ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಮಹಿಳಾ ಸಲಿಂಗ ಕಾಮಾಧರಿತ ಅಂದರೆ ಲೆಸ್ಬಿಯನ್‍ಗೆ ಸಂಬಂಧಿಸಿದ ಚಿತ್ರಕಥೆ ಹೊಂದಿದೆ. ಬಿಗ್ ಬಾಸ್ ಸ್ಪರ್ಧಿ ಜಾನಕಿ ಸುಧೀರ್ ಹಾಗೂ ಅಮೃತಾ ವಿನೋದ್ ಅವರು ಪ್ರಮುಖ ಪಾತ್ರಗಳಲ್ಲಿರುವ (Character)  ಈ ಚಿತ್ರವನ್ನು ಅಶೋಕ್ ಆರ್ ನಾಥ್ ಅವರು ನಿರ್ದೇಶಿಸಿದ್ದಾರೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿದೆ.

ಚಿತ್ರದಲ್ಲಿ ಏನೇನಿದೆ?
ಇತ್ತೀಚಿಗಷ್ಟೇ ಈ ಚಿತ್ರದ ನಿರ್ಮಾಣಕಾರರು ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದನ್ನು ಗಮನಿಸಬಹುದು. ಅಬ್ಬರ, ಸದ್ದುಗಳಿಲ್ಲದ ಈ ಚಿತ್ರದಲ್ಲಿ ಮಹಿಳಾ ಸಲಿಂಗಕಾಮದ ಸಂಬಂಧವನ್ನು ಬಲು ಧೈರ್ಯವಾಗಿ ಹೇಳಲು ಪ್ರಯತ್ನಿಸಲಾಗಿದೆ. ಚಿಕ್ಕವರಿದ್ದಾಗಲೇ ಪರಸ್ಪರ ಪ್ರೀತಿಸುತ್ತಿದ್ದ, ಆ ನಂತರ ಕಾರಣಾಂತರಗಳಿಂದ ಬೇರೆಯಾಗಿದ್ದ ಇಬ್ಬರು ಮಹಿಳೆಯರು ಹಲವು ವರ್ಷಗಳ ನಂತರ ತಮ್ಮ ಸಂಬಂಧವನ್ನು ಹೇಗೆ ಪುನರುಜ್ಜೀವನಗೊಳಿಸಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಮುಖ್ಯವಾಗಿ ಹೇಳಲಾಗಿದೆ. ಈ ಇಬ್ಬರಲ್ಲಿ ಒಬ್ಬರು ನನ್ ಆಗಿದ್ದರೆ ಇನ್ನೊಬ್ಬರು ಗೃಹಿಣಿಯಾಗಿರುತ್ತಾರೆ.

ಇದನ್ನೂ ಓದಿ: Sunny Leone: ಆರೆಂಜ್‌ ಡ್ರೆಸ್‌ನಲ್ಲಿ ಈ ರೇಂಜಿಗೆ ಕಾಣಿಸ್ತಾಳೆ ಸೇಸಮ್ಮ! ಸನ್ನಿ ನೋಡಿ ಸೂರ್ಯನೇ ಸುಸ್ತಾದ್ನಂತೆ!

ಅಷ್ಟಕ್ಕೂ ಈ ಚಿತ್ರಕ್ಕೆ ಸಂಬಂಧಿಸಿದಂತೆ ಎಲ್ಲವೂ ಸುಸೂತ್ರವಾಗಿತ್ತು ಎನ್ನಲಾಗದು. ಏಕೆಂದರೆ ಕಳೆದ ಹಲವು ತಿಂಗಳುಗಳಲ್ಲಿ ಈ ಚಿತ್ರ ಸಾಕಷ್ಟು ಅಡಚಣೆಗಳನ್ನು ಎದುರಿಸಿದೆ. ಈ ಚಿತ್ರವನ್ನು ಬಿಡುಗಡೆ ಮಾಡದಂತೆ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಹ ಸಲ್ಲಿಸಲಾಗಿತ್ತು. ಹೌದು, ಜಾರ್ಖಂಡ್ ಮೂಲದ ಇಬ್ಬರು ನನ್ ಗಳು ಈ ಚಿತ್ರಕ್ಕೆ ತಡೆ ಕೋರಿ ಈ ಹಿಂದೆ ಹೈಕೋರ್ಟ್ ಮೆಟ್ಟಿಲನ್ನು ಸಹ ಏರಿಯಾಗಿದೆ. ಅವರು ತಮ್ಮ ಅರ್ಜಿಯಲ್ಲಿ ಈ ಚಿತ್ರ ಬಿಡುಗಡೆಯಾದರೆ ಧಾರ್ಮಿಕ ಭಾವನೆಗೆ ಹಾನಿ ಮಾಡಲಿದೆ ಎಂದು ಹೇಳಿ ಅರ್ಜಿ ಸಲ್ಲಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಸಿನೆಮಾ ಉದ್ದೇಶವೇನು?
ಸಾಕಷ್ಟು ಅಡಚಣೆಗಳನ್ನು ಎದುರಿಸಿ ಕೊನೆಗೂ ಈ ಚಿತ್ರ ಆಗಸ್ಟ್ 12 ರಂದು ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಪೌಲ್ ವಿಕ್ಲಿಫ್ ಅವರು ಈ ಚಿತ್ರಕ್ಕೆ ಕಥೆಯನ್ನು ಬರೆದಿದ್ದು ಈ ಚಿತ್ರದಲ್ಲಿ ಸಾಬು ಪ್ರೌಧೀನ್ ಅವರನ್ನು ಸಹ ಕಾಣಬಹುದಾಗಿದೆ. 'ಮರಕ್ಕಾರ್' ಖ್ಯಾತಿಯ ರೊನ್ನಿ ರಾಫೇಲ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು ಸಂದೀಪ್ ಆರ್. ಸಹಸ್ರಾರ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಈ ರೀತಿಯ ಸೂಕ್ಷ್ಮ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವ ಚಿತ್ರಾಸಕ್ತರು ಇನ್ನೆರಡು ದಿನಗಳಲ್ಲಿ ಈ ಚಿತ್ರದ ಅನುಭವ ಪಡೆಯಬಹುದಾಗಿದೆ.

ಇದನ್ನೂ ಓದಿ:  Harnaaz Sandhu: ಮೊದಲ ಸಿನಿಮಾದಲ್ಲೇ ವಿಶ್ವ ಸುಂದರಿಗೆ ಎದುರಾಯ್ತು ಸಂಕಷ್ಟ! ಹರ್ನಾಜ್ ಕೌರ್ ಸಂಧು ವಿರುದ್ಧ ಮೊಕದ್ದಮೆ

ಅಷ್ಟಕ್ಕೂ, ಲೆಸ್ಬಿಯನ್ ಎಂಬ ಅಂಶವನ್ನು ಭಾರತದಂತಹ ದೇಶದಲ್ಲಿ ಹೆಚ್ಚು ಕಡಿಮೆ ತಿರಸ್ಕೃತ ಭಾವನೆಯಲ್ಲಿಯೇ ನೋಡಲಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಸಹ ಒಂದು ಸಹಜ ಸ್ಥಿತಿ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಲ್ಲೊಂದು, ಇಲ್ಲೊಂದು ಪ್ರಯತ್ನಗಳು ಈ ಹಿಂದೆಯೂ ಆಗಿರುವುದನ್ನು ಗಮನಿಸಬಹುದು. ಉದಾಹರಣೆಗೆ ಹೇಳಬೇಕೆಂದರೆ ದೀಪಾ ಮೆಹ್ತಾ ಅವರ ಫೈರ್ ಎಂಬ ಚಿತ್ರವು ಇದೇ ರೀತಿಯ ಕಥೆಯನ್ನು ಹೊಂದಿತ್ತು. ಆ ಚಿತ್ರದಲ್ಲಿ ಹಿರಿಯ ಕಲಾವಿದೆ ಶಬಾನಾ ಅಜ್ಮಿ ಹಾಗೂ ನಂದಿತಾ ದಾಸ್ ಅವರು ಸಲಿಂಗಕಾಮಿಗಳಾಗಿ ಅಭಿನಯಿಸಿದ್ದರು.

ಚಿತ್ರ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರಕ್ಕೆ ಹಲವು ಪ್ರತಿಭಟನಾಕಾರರಿಂದ ದಾಳಿ 
ಈ ಚಿತ್ರವು ಬಿಡುಗಡೆಯಾದಾಗ ಕೆಲ ಸಮಯ ಉತ್ತಮ ಪ್ರದರ್ಶನ ಕಂಡಿತಾದರೂ ದಿನಗಳೆದಂತೆ ಈ ಚಿತ್ರವು ಸಾಕಷ್ಟು ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಮುಂಬೈ ಹಾಗೂ ದೆಹಲಿಯಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರಕ್ಕೆ ಹಲವು ಪ್ರತಿಭಟನಾಕಾರರು ದಾಳಿಯನ್ನೂ ಸಹ ಮಾಡಿದ್ದರು ಎಂದು ಹೇಳಬಹುದು. ಒಟ್ಟಿನಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದಂತಹ ಚಿತ್ರಗಳನ್ನು ಭಾರತದಲ್ಲಿ ನಿರ್ಮಿಸುವುದು ಒಂದು ರೀತಿಯ ಸವಾಲಿನ ವಿಷಯವೇ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
Published by:Ashwini Prabhu
First published: