Famous actor: ನಟನೆ ಬಿಟ್ಟು ಕಸ ಗುಡಿಸುವ ಕೆಲಸ ಮಾಡಲು ಮುಂದಾದ ಈ ಖ್ಯಾತ ನಟ!

Aadu 2 / ಆದು 2

Aadu 2 / ಆದು 2

Unni Rajan: ಉನ್ನಿ ರಾಜನ್ ಪ್ರಸಿದ್ಧ ದಿವಂಗತ ನಟ ರಾಜನ್ ಪಿ ದೇವ್ ಅವರ ಮಗ ಎಂಬುದು ಬಹುತೇಕರಿಗೆ ತಿಳಿದಿಲ್ಲ. ರಾಜನ್​ ಪಿ ದೇವ್​ ಅವರು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲದೆ ಹೆಸರುವಾಸಿ ನಟನಾಗಿ ಗುರುತಿಸಿಕೊಂಡಿದ್ದರು.

  • Share this:

    ದಕ್ಷಿಣ ಚಿತ್ರರಂಗದ ಖ್ಯಾತ ನಟ ಉನ್ನಿ ರಾಜನ್ (Unni Rajan) ನಟನೆಯಿಂದಲೇ (Acting) ಹೆಸರುವಾಸಿಯಾಗಿದ್ದಾರೆ. ತಮ್ಮ ಸದೃಢ ನಟನೆಯಿಂದಲೇ ಎಲ್ಲರ ಗಮನ ಸೆಳೆದವರಿವರು. ಮಲಯಾಳಂನ (Malayalam) ಕೆಲವು ಸಿನಿಮಾಗಳಲ್ಲಿ (Film) ಬಣ್ಣ ಹಚ್ಚಿದ್ದ ಇವರು ನಟನೆಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದರು. ಆದರೀಗ ಈ ನಟ ನಟನೆ ಬಿಟ್ಟು ಕಸ ಗುಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.


    ಉನ್ನಿ ರಾಜನ್ ಪ್ರಸಿದ್ಧ ದಿವಂಗತ ನಟ ರಾಜನ್ ಪಿ ದೇವ್ ಅವರ ಮಗ ಎಂಬುದು ಬಹುತೇಕರಿಗೆ ತಿಳಿದಿಲ್ಲ. ರಾಜನ್​ ಪಿ ದೇವ್​ ಅವರು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲದೆ, ಹೆಸರುವಾಸಿ ನಟನಾಗಿ ಗುರುತಿಸಿಕೊಂಡಿದ್ದರು.


    ಆದರೀಗ ಅವರ ಮಗ ಉನ್ನಿ ರಾಜನ್​ ಕಸ ಹೆಕ್ಕುವ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿದೆ. 48 ವರ್ಷದ ನಟ ಉನ್ನಿ ರಾಜನ್ ಇತ್ತೀಚೆಗೆ ತಮ್ಮ ಹುಟ್ಟೂರಾದ ಕಾಸರಗೋಡಿನ ಹಾಸ್ಟೆಲ್‌ನಲ್ಲಿ ಕೆಲಸ ಮಾಡಲು ಸ್ವೀಪರ್ ಆಗಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಅವರೂ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.


    ಮೇ 15ರ ನಂತರ ಉನ್ನಿ ರಾಜನ್​ ಅಲ್ಲಿ ಕೆಲಸಕ್ಕೆ ಸೇರಲಿದ್ದಾರೆ. ರಾಜನ್​ 10 ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಲಾಗುತ್ತಿದೆ. ಕೇರಳ ಸರ್ಕಾರದ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯು ನಡೆಸುತ್ತಿರುವ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್‌ ಶೌಚಾಲಯಗಳು ಇದಾಗಿದೆ ಎಂದು ಹೇಳಲಾಗುತ್ತಿದೆ.


    ಇದನ್ನೂ ಓದಿ: Elon Musk: ತನ್ನನ್ನೇ ಹೋಲುವ ವ್ಯಕ್ತಿಯನ್ನು ಕಂಡು ಎಲಾನ್ ಮಸ್ಕ್ ಶಾಕ್! ಆತನನ್ನು ಭೇಟಿಯಾಗುತ್ತೇನೆ ಎಂದ ಟೆಸ್ಲಾ ಸಿಇಒ




    ಉನ್ನಿ ರಾಜನ್​ ಈ  ಬಗ್ಗೆ ಮಾತನಾಡಿದ್ದು, 'ಈ ಕೆಲಸವನ್ನು ಅವರು ಸ್ವಯಂಪ್ರೇರಣೆಯಿಂದ ಇಷ್ಟಪಟ್ಟಿದ್ದಾರೆ. ಇಲ್ಲಿ ನಿಯಮಿತವಾಗಿ ಸಂಬಳ ಸಿಗುತ್ತದೆ. ಆದರೆ ಮನರಂಜನಾ ಜಗತ್ತಿನಲ್ಲಿ ಬಹಳ ಸಮಯ ಕಾಯಬೇಕು ಎಂದು ಹೇಳಿದ್ದಾರೆ


    ಈ ಕೆಲಸಕ್ಕಾಗಿ ಸಂದರ್ಶನಕ್ಕೆ ಬರುತ್ತಿದ್ದಾಗ ಅವರು ಬರುತ್ತಿದ್ದ ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು' ಎಂದು ತಮ್ಮ ನೋವನ್ನು ಹಂಚಿಕೊಂಡರು. ಆದರೀಗ ಹೊಸ ಕೆಲಸಕ್ಕೆ ಉನ್ನಿ ರಾಜನ್​ ಸೇರಕೊಳ್ಳಲಿದ್ದಾರೆ. ಇದರಿಂದ ಅವರ ಕುಟುಂಬದ ಹೊಟ್ಟೆ ತುಂಬುತ್ತದೆ. ಏಕೆಂದರೆ ಮನರಂಜನಾ ಲೋಕದಲ್ಲಿ ಸಮಯಕ್ಕೆ ಸರಿಯಾಗಿ ಹಣ ಸಿಗುವುದಿಲ್ಲ ಎಂಬುದು ಅವರ ಬೇಸರ.


    ಇದನ್ನೂ ಓದಿ: Samsung: 6G ಕಡೆಗೆ ಮುಖ ಮಾಡಿದ ಸ್ಯಾಮ್​ಸಂಗ್​! 5Gಗಿಂತ 50 ಪಟ್ಟು ವೇಗ ಹೆಚ್ಚು


    ಕಳೆದ ವರ್ಷ ಮೇ ತಿಂಗಳಲ್ಲಿ ಉನ್ನಿ ರಾಜನ್ ಅವರ ಪತ್ನಿ ಪ್ರಿಯಾಂಕಾ ನಿಧನರಾದರು. ಈ ಸಂಬಂಧ ನಟನನ್ನು ಸಹ ಬಂಧಿಸಲಾಯಿತು. ಅವರ ಪತ್ನಿ ಪ್ರಿಯಾಂಕಾ (26) ತಿರುವನಂತಪುರಂ ಸಮೀಪದ ವೆಂಬಯಂನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಒಂದು ದಿನ ಮೊದಲು, ಅವರ ಪತ್ನಿ ಪ್ರಿಯಾಂಕಾ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆಕೆ ಸ್ಥಳೀಯ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದಳು.

    Published by:Harshith AS
    First published: