ಸೂಪರ್ ಸ್ಟಾರ್ ರಜಿನಿಕಾಂತ್ (Super Star Rajinikanth) ಅಭಿನಯದ ಜೈಲರ್ (Jailer) ಚಿತ್ರ ತಂಡದಿಂದ ಈಗ ಇನ್ನೂ ಒಂದು ಸುದ್ದಿ ಹೊರ ಬಿದ್ದಿದೆ. ಈ ಚಿತ್ರದ ಮೂಲಕ ದಕ್ಷಿಣ ಭಾರತದ ಮೂವರು ಸೂಪರ್ ಸ್ಟಾರ್ಗಳು ಒಟ್ಟಿಗೆ ಬರ್ತಿದ್ದಾರೆ ಅನ್ನೋದೇ ಈಗೀನ ಈ ಚಿತ್ರದ ತಿರುಳು. ಹೌದು, ಈ ಚಿತ್ರದ (Mohanlal in Jailer Cinema) ಮೂಲಕ ದಕ್ಷಿಣದ ಮೂರು ಭಾಷೆಯ ಸೂಪರ್ ಸ್ಟಾರ್ ನಟರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಆ ನಾಯಕರು ಯಾರು? ಏನ್ ಈಗೀನ ಅಪ್ಡೇಟ್ಸ್? ದಕ್ಷಿಣದ ಆ ಇನ್ನಿಬ್ಬರು ನಾಯಕ ನಟರ ಪಾತ್ರವೇನು? ಈ ನಾಯಕ ನಟರ ಭಾಗದ ಚಿತ್ರೀಕರಣ ಆಗಿದೆಯೇ? ಈ ಎಲ್ಲ ಮಾಹಿತಿಯ ಸ್ಟೋರಿ ಇಲ್ಲಿದೆ ಓದಿ.
ಸೂಪರ್ ಸ್ಟಾರ್ ರಜಿನಿಯ ಜೈಲರ್ ಚಿತ್ರದಲ್ಲಿ ತ್ರಿಮೂರ್ತಿಗಳು
ಸೂಪರ್ ಸ್ಟಾರ್ ರಜಿನಿಕಾಂತ್ ಜೈಲರ್ ಚಿತ್ರದಿಂದ ಹೊಸ ಅಪ್ ಡೇಟ್ಸ್ ಹೊರ ಬಿದ್ದಿದೆ. ಈ ಚಿತ್ರದ ಮೂಲಕವೇ ಮೂವರು ಸ್ಟಾರ್ ನಟರ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ದಕ್ಷಿಣದ ಮೂವರು ಸೂಪರ್ ಸ್ಟಾರ್ ತೆರೆ ಹಂಚಿಕೊಳ್ತಿರೋದು ಈ ಚಿತ್ರದ ವಿಶೇಷತೆಗಳಲ್ಲಿ ಒಂದಾಗಿದೆ.
ರಜಿನಿಕಾಂತ್ ಅಭಿನಯದ ಜೈಲರ್ ಚಿತ್ರ ಚಿತ್ರೀಕರಣ ಭರದಿಂದಲೇ ಸಾಗಿದೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಹೆಚ್ಚು ಕಡಿಮೆ ಶೇಕಡ 50 ರಷ್ಟು ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಅಷ್ಟರಲ್ಲಿಯೇ ಚಿತ್ರದ ಹೊಸ ನ್ಯೂಸ್ ಹೊರ ಬಿದ್ದಿದೆ.
ಜೈಲರ್ ಚಿತ್ರದಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ಅಭಿನಯ
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಈ ಚಿತ್ರದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಚೆನ್ನೈನಲ್ಲಿ ನಡೆದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ತಮ್ಮ ಪಾತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ.
ಆದರೆ ಇದೇ ಚಿತ್ರದಲ್ಲಿ ಇನ್ನೂ ಒಂದು ಪಾತ್ರವೂ ಇದೆ. ಈ ಪಾತ್ರವನ್ನ ಮಲೆಯಾಳಂ ಸೂಪರ್ ಸ್ಟಾರ್ ನಿಭಾಯಿಸುತ್ತಿದ್ದಾರೆ. ಇದರ ಬಗೆಗಿನ ಮಾಹಿತಿನೇ ಈಗ ಹೊರ ಬಿದ್ದಿದೆ.
ಜೈಲರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್
ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಈಗ ಜೈಲರ್ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ರಜಿನಿಕಾಂತ್ ಜೊತೆಗೆ ಅಭಿನಯಿಸೋದು ಅಂದ್ರೆ ಯಾರು ಒಪ್ಪಿಕೊಳ್ಳೋದಿಲ್ಲ ಹೇಳಿ? ಅದೇ ರೀತಿ ರಜಿನಿಯ ಈ ಜೈಲರ್ ಚಿತ್ರದಲ್ಲಿ ಒಂದು ವಿಶೇಷ ಪಾತ್ರ ಮಾಡೋಕೆ ಮೋಹಲ್ ಲಾಲ್ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ.
ಸೂಪರ್ ಸ್ಟಾರ್ ಮೋಹನ್ ಲಾಲ್, ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ಈ ಮೂಲಕ ಮೋಹನ್ ಲಾಲ್, ರಜಿನಿಕಾಂತ್, ಶಿವರಾಜ್ ಕುಮಾರ್ ಹೀಗೆ ಒಂದೇ ಚಿತ್ರದಲ್ಲಿ ಮೂರು ಭಾಷೆಯ ನಟರು ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದೇ ಜ-08 ರಿಂದ ಮೋಹನ್ ಲಾಲ್ ಪಾತ್ರದ ಶೂಟಿಂಗ್
ಜನವರಿ-08 ರಿಂದ ಮೋಹನ್ ಲಾಲ್ ಪಾತ್ರದ ಚಿತ್ರೀಕರಣ ಶುರು ಆಗುತ್ತಿದೆ. ಈಗಾಗಲೇ ಈ ವಿಷಯ ಕೂಡ ರಿವೀಲ್ ಆಗಿದೆ. ರಜಿನಿಕಾಂತ್ ಅಭಿನಯದ ಸಿನಿಮಾ ಅಂದ್ಮೇಲೆ ಅಲ್ಲೊಂದು ವೈಬ್ರೇಷನ್ ಇರುತ್ತದೆ. ಚಿತ್ರದಲ್ಲಿರೋ ಪಾತ್ರಗಳಿಗೂ ಒಂದು ಮಹತ್ವ ಇದ್ದೇ ಇರುತ್ತದೆ.
ಜೈಲರ್ ಚಿತ್ರಕ್ಕೆ ನಾಲ್ಕು ದಿನ ಮೋಹನ್ ಲಾಲ್ ಡೇಟ್ಸ್
ಅದೇ ರೀತಿನೇ ಮೋಹನ್ ಲಾಲ್ ನಿರ್ವಹಿಸ್ತಿರೋ ಪಾತ್ರವೂ ಮಹತ್ವದ್ದೇ ಆಗಿದೆ. ಅದಕ್ಕಾಗಿಯೇ ಮೋಹನ್ ಲಾಲ್ ರೆಡಿ ಆಗಿದ್ದಾರೆ. ಗೆಸ್ಟ್ ರೋಲ್ ಇದಾಗಿದೆ. ಆದರೂ ಮೋಹನ್ ಲಾಲ್, ಮೂರರಿಂದ ನಾಲ್ಕು ದಿನದ ಡೇಟ್ಸ್ ಕೊಟ್ಟಿದ್ದಾರೆ.
ಜನವರಿ-8 ರಿಂದಲೇ ಮೋಹನ್ ಲಾಲ್ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಈ ಮೂಲಕ ಹೆಚ್ಚು ಕಡಿಮೆ ಮೂರ್ನಾಲ್ಕು ದಿನ ಮೋಹನ್ ಲಾಲ್, ಜೈಲರ್ ಸಿನಿಮಾ ತಂಡದೊಂದಿಗೇನೆ ಇರುತ್ತಾರೆ.
ಇನ್ನುಳಿದಂತೆ ಜೈಲರ್ ಸಿನಿಮಾ ಭಾರೀ ಕ್ರೇಜ್ ಹುಟ್ಟುಹಾಕಿದೆ. ನೆಲ್ಸನ್ ದಿಲೀಪ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ರಜಿನಿ ಚಿತ್ರ ಜೀವನದಲ್ಲಿ ಈ ಚಿತ್ರವೂ ವಿಶೇಷವಾಗಿಯೇ ಇದೆ. ರಜಿನಿಯ ಇಲ್ಲಿವರೆಗಿನ ಚಿತ್ರಗಳ ಲೆಕ್ಕ ಹಿಡಿದರೆ, ಇದು ರಜಿನಿಯ 169 ನೇ ಚಿತ್ರವೇ ಆಗಿದೆ.
ಇದನ್ನೂ ಓದಿ: B Saroja Devi: ಹಿರಿಯ ನಟಿ ಸರೋಜಾ ದೇವಿ ಬರ್ತ್ಡೇ! ಸಿನಿ ಸ್ಟಾರ್ಸ್ ಜೊತೆಗಿನ ಫೋಟೋಸ್ ಇಲ್ಲಿವೆ
ರಜಿನಿಯ ಈ ಚಿತ್ರದಲ್ಲಿ ಪ್ರಿಯಾಂಕಾ ಅರುಳ್ ಮೋಹನ್, ರಮ್ಯ ಕೃಷ್ಣ, ಮೋಹನ್ ಲಾಲ್, ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಈ ಒಂದು ಚಿತ್ರದ ಮುಖಾಂತರ ಕನ್ನಡ, ತಮಿಳು, ಮಲೆಯಾಳಂ ಭಾಷೆಯ ನಟರು ಒಂದೇ ಸಿನಿಮಾದಲ್ಲಿ ಬಂದಂತೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ