ಮೋಹನ್‍ಲಾಲ್ (Mohanlal) ಅತ್ಯಂತ ಖ್ಯಾತ ಭಾರತೀಯ ನಟ (Indian Actor), ಚಲನಚಿತ್ರ ನಿರ್ಮಾಪಕ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ ಮತ್ತು ಚಲನಚಿತ್ರ ವಿತರಕ ಅವರು ಪ್ರಧಾನವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ (Kannada) ಭಾಷೆಯ ಚಲನಚಿತ್ರಗಳಲ್ಲಿ ವಿರಳವಾಗಿ ಕಾಣಿಸಿಕೊಂಡಿದ್ದಾರೆ. ಮೋಹನ್‍ಲಾಲ್ ಅವರು ನಾಲ್ಕು ದಶಕಗಳ ಕಾಲ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರೊಂದು ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶೇಷವೆಂದರೆ, ಆ ಸಿನಿಮಾಗೆ ಕನ್ನಡದ ನಿರ್ದೇಶಕರೊಬ್ಬರು (Kannada Director) ಡೈರೆಕ್ಷನ್ ಮಾಡಲಿದ್ದಾರೆ. ಹೌದು ನಿರ್ದೇಶಕ ನಂದಕಿಶೋರ್ (Nanda Kishore) ಮೋಹನ್‍ಲಾಲ್ ಅವರಿಗೆ ನಿರ್ದೇಶನ ಮಾಡ್ತಾ ಇದ್ದಾರೆ.
'ವೃಷಭ' ಚಿತ್ರದಲ್ಲಿ ಮೋಹನ್‍ಲಾಲ್
ನಿರ್ದೇಶಕ ನಂದಕಿಶೋರ್ ಅವರು ಮೋಹನ್‍ಲಾಲ್ ಅವರಿಗೆ ಸಿನಿಮಾ ನಿರ್ದೇಶನ ಮಾಡ್ತಾ ಇದ್ದಾರೆ. ಈ ಸಿನಿಮಾಗೆ 'ವೃಷಭ' ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಒಂದು ಮುಖ್ಯ ಪಾತ್ರಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟರೊಬ್ಬರು ಬರುತ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅವರು ಯಾರು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ. 2023ರ ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭಿಸುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಶೂಟಿಂಗ್ ಆರಂಭವಾದ ಮೇಲೆ ಇನ್ನಷ್ಟು ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆಯಂತೆ.
ಮೋಹನ್‍ಲಾಲ್ ಅವರು ಹೇಳಿದೇನು?
ಇನ್ನು, ಈ ಸಿನಿಮಾದ ಬಗ್ಗೆ ಈಚೆಗಷ್ಟೇ ಮೋಹನ್‍ಲಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. 'ಎವಿಸ್ ಸ್ಟುಡಿಯೋಸ್‍ನ 'ವೃಷಭ' ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ನಂದಕಿಶೋರ್ ಇದರ ನಿರ್ದೇಶನ ಮಾಡಲಿದ್ದಾರೆ. ಅಭಿಷೇಕ್ ವ್ಯಾಸ್, ಪ್ರವೀರ್ ಸಿಂಗ್, ಶ್ಯಾಮ್ ಸುಂದರ್ ಇದರ ನಿರ್ಮಾಣ ಮಾಡಲಿದ್ದಾರೆ.
ಇದನ್ನೂ ಓದಿ: Divya Uruduga: ಅಮ್ಮನ ಬರ್ತ್ ಡೇಗೆ ದಿವ್ಯಾ ಉರುಡುಗ ವಿಶ್ ಮಾಡಿದ್ದು ಹೀಗೆ, ಫ್ಯಾನ್ಸ್ ಫಿದಾ
ಈ ಪ್ರಾಜೆಕ್ಟ್ ನ ಭಾಗವಾಗಿರುವುದಕ್ಕೆ ನಾನಂತೂ ತುಂಬ ಎಕ್ಸೈಟ್ ಆಗಿದ್ದೇನೆ. ಇದೊಂದು ಬಹುಭಾಷಾ ಸಿನಿಮಾವಾಗಿದ್ದು, ಆಕ್ಷನ್, ಎಮೋಷನ್ ಎಲ್ಲವೂ ಮಿಕ್ಸ್ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು' ಎಂದು ಬರೆದುಕೊಂಡಿದ್ದರು.
ಮೋಹನ್ ಲಾಲ್ ಅವರಿಗೆ ದೊರೆತ ಪ್ರಶಸ್ತಿಗಳು
ಭಾರತ ಸರ್ಕಾರವು ಅವರಿಗೆ 2001 ರಲ್ಲಿ ಪದ್ಮಶ್ರೀ, ಮತ್ತು 2019 ರಲ್ಲಿ ಪದ್ಮಭೂಷಣ, ಭಾರತದ ನಾಲ್ಕನೇ ಮತ್ತು ಮೂರನೇ ಅತ್ಯುನ್ನತ ನಾಗರಿಕ ಗೌರವಗಳು, ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಗಳಿಗಾಗಿ ಗೌರವಿಸಿತು. 2009 ರಲ್ಲಿ, ಅವರು ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ಪಡೆದ ಭಾರತದ ಮೊದಲ ನಟರಾದರು.
ಇದನ್ನೂ ಓದಿ: Ranjani Raghavan: ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡಿ; ಇದು ಕನ್ನಡತಿಯ ಕರೆ!
ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಂದಕಿಶೋರ್
ಹೌದು, ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ಅಧ್ಯಕ್ಷ, ರನ್ನ, ವಿಕ್ಟರಿ, ಪೊಗರು ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ನಂದಕಿಶೋರ್ ಈಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೋಹನ್‍ಲಾಲ್ ಸಿನಿಮಾಗೆ ನಿರ್ದೇಶನ ಮಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. 'ಹೌದು, ನಾನು ಮಲಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಅವರ ಸಿನಿಮಾವನ್ನು ನಾನು ನಿರ್ದೇಶನ ಮಾಡುತ್ತಿದ್ದೇನೆ. ಇದೊಂದು ಪಕ್ಕಾ ಕಮರ್ಷಿಯಲ್ ಕಥೆ ಇರುವ ಸಿನಿಮಾ. ಮೋಹನ್‍ಲಾಲ್ ಅವರ ಪಾತ್ರಕ್ಕೆ ಸಾಕಷ್ಟು ಆಯಾಮಗಳಿರುತ್ತವೆ' ಎಂದು ನಂದಕಿಶೋರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ