ಕೊಚ್ಚಿ ಮಾಲ್​ನಲ್ಲಿ ಮಲಯಾಳಂನ ಪ್ರಖ್ಯಾತ ನಟಿ ಜೊತೆ ಅಸಭ್ಯ ವರ್ತನೆ

ಕೊಚ್ಚಿಯ ಮಾಲ್​ನಲ್ಲಿ ಕುಟುಂಬದೊಂದಿಗೆ ಶಾಪಿಂಗ್​ ಮಾಡುವ ವೇಳೆ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ದೌರ್ಜನ್ಯ ನಡೆಸಿರುವುದಾಗಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಲಯಾಳಂನ ಪ್ರಖ್ಯಾತ ನಟಿಯೊಬ್ಬರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಈ ಕುರಿತು ತಾವು ಅನುಭವಿಸಿದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಕೊಚ್ಚಿಯ ಮಾಲ್​ನಲ್ಲಿ ಕುಟುಂಬದೊಂದಿಗೆ ಶಾಪಿಂಗ್​ ಮಾಡುವ ವೇಳೆ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ದೌರ್ಜನ್ಯ ನಡೆಸಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಕುರಿತು ಬರೆದುಕೊಂಡಿರುವ ನಟಿ, ಇಂತಹ ದೌರ್ಜನ್ಯಗಳಾದಾಗ ಮಹಿಳೆಯರು ಇದನ್ನು ಖಂಡಿಸಿ ಪ್ರತಿಕ್ರಿಯಿಸಬೇಕು ಎಂದು ಕೂಡ ತಿಳಿಸಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ  ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಈ ರೀತಿ ನಟಿ ಬರೆದುಕೊಂಡಿದ್ದಾರೆ. 'ಮಾಲ್​ನಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಹಿಂಬಾಲಿಸುತ್ತಿದ್ದರು. ಜನಸಂದಣಿಯ ಈ ಪ್ರದೇಶದಲ್ಲಿ ಒಬ್ಬಾತ ನನ್ನ ಮುಂದೆ ಹೋಗುವಾಗ ನನ್ನ ಹಿಂಬದಿಗೆ ಕೈ ಹಾಕಿದ. ಈ ವೇಳೆ ಏನೋ ಸರಿಯಿಲ್ಲ ಎಂಬುದು ನನಗೆ ಕಂಡು ಬಂದಿತು. ನಾನು ಇದಕ್ಕೆ ಪ್ರತಿಕ್ರಿಯಿಸಲು ಬಯಸಿದೆನಾದರೂ, ಇದು ಸರಿಯಾದ ಸಮಯವಲ್ಲ ಎಂದು ಸುಮ್ಮನಾದೆ. ಈ ವೇಳೆ ಕೊಂಚ ದೂರದಲ್ಲಿದ್ದ ನನ್ನ ಸಹೋದರಿ ತಕ್ಷಣಕ್ಕೆ ಬಂದು ನಾನು ಸುರಕ್ಷಿತವಾಗಿದ್ದೇನೆಯೆ ಎಂದು ಪ್ರಶ್ನಿಸಿದಳು. ಆದರೆ, ಸರಿಯಿಲ್ಲ ಎಂದೆ'.

  ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ  ಎಂಬುದನ್ನು ತಿಳಿಸಿದೆ. ಆ ಒಂದು ಕ್ಷಣ ಏನಾಯಿತು ಎಂದು ಹೇಳಲು ಅಸಾಧ್ಯ. ಅವರು ದುರುದ್ದೇಶದಿಂಧ ನನ್ನ ಜೊತೆ ಅಸಭ್ಯ ವರ್ತನೆ ತೋರಿದರು ಎಂಬುದು ನನಗೆ ತಿಳಿಯಿತು ಎಂದು ಅರಿವಾದ ತಕ್ಷಣ  ಇಬ್ಬರು ಜಾಗ ಕದಲಿಸಿದರು. ಈ ಬಗ್ಗೆ ಅವರಿಗೆ ಏನನ್ನು ಹೇಳಲಾಗಿಲ್ಲ ಎಂಬ ಕೋಪ ನನಗೆ ಇನ್ನು ಇದೆ.

  ಇದನ್ನು ಓದಿ: ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾದ ರಾಕಿಂಗ್​ ಜೋಡಿ; ನಾಲ್ಕು ವರ್ಷದ ಬಳಿಕ ಒಂದಾದ ಸಂಭ್ರಮದಲ್ಲಿ ರಾಧಿಕಾ

  ಬಳಿಕ ನಾನು ನನ್ನ ಸಹೋದರಿ ನಮ್ಮ ತಾಯಿ ಬಳಿ ಹತ್ತಿರ ನಡೆದೆವು. ಈ ವೇಳೆ ಬಿಲ್ಲಿಂಗ್​ ಸಮಯದಲ್ಲಿ ಕೂಡ ಆ ವ್ಯಕ್ತಿಗಳು ಹತ್ತಿರ ಬಂದು ನನ್ನ ಸಿನಿಮಾ ಕುರಿತು ಮಾತನಾಡುವ ಪ್ರಯತ್ನ ನಡೆಸಿದರು. ಆಗ ಎಚ್ಚೆತ್ತ ನಾನು, ನಿಮ್ಮ ಕೆಲಸ ನೋಡಿಕೊಂಡು ಹೋಗುವಂತೆ ಹೇಳುತ್ತಿದ್ದಂತೆ, ನಮ್ಮ ಅಮ್ಮ ಬಂದರು. ಆಗ ಅವರು ಸ್ಥಳದಿಂದ ಕಾಲ್ಕಿತ್ತರು.

  ತನ್ನ ವಿರುದ್ಧ ನಡೆದ ಘಟನೆ ಕುರಿತು ಬೇಸರ ವ್ಯಕ್ತಪಡಿಸಿರುವ ನಟಿ ಮಹಿಳೆಯಾಗಿರುವುದು ಕಷ್ಟವೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಹಿಳೆಯರಿಗೆ ಧೈರ್ಯ ತುಂಬಿ ಮಾತನಾಡಿದ ಅವರು, ಮನೆಯಿಂದ ಹೊರಬಂದಾಗ ಪ್ರತಿಕ್ಷಣ ಜಾಗುರಾಗಿರುವಂತೆ ಸಲಹೆ ನೀಡಿದ್ದಾರೆ. ಒಂದು ವೇಳೆ ಇದೇ ರೀತಿ ನಿಮಗೆ ಕಹಿ ಅನುಭವವಾದರೆ, ಅವರ ಮುಖಕ್ಕೆ ಸರಿಯಾಗಿ ಬಾರಿಸಿ. ನನಗೆ ಇಲ್ಲದ ಧೈರ್ಯ ನಿಮಗೆ ಇದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ
  Published by:Seema R
  First published: