ಮಹಿಳೆಯೊಂದಿಗೆ ಅನುಚಿತ ವರ್ತನೆ: ಖ್ಯಾತ ನಟನ ಮೇಲೆ ದಾಖಲಾಯ್ತು ದೂರು..!

ವಿನಾಯಕನ್ ಮಾಲಿವುಡ್​ನ ಸೂಪರ್ ಸ್ಟಾರ್​ಗಳಾದ ಮಮ್ಮುಟ್ಟಿ, ಮೋಹನ್ ಲಾಲ್​ ಸೇರಿದಂತೆ ಅನೇಕ ಯುವ ನಟರುಗಳ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಅದರಲ್ಲೂ ದುಲ್ಖರ್ ಸಲ್ಮಾನ್ ಜೊತೆಗಿನ ಕಮ್ಮಟ್ಟಿಪಾಡಂ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಒಲಿದಿತ್ತು.

zahir | news18
Updated:June 17, 2019, 8:41 PM IST
ಮಹಿಳೆಯೊಂದಿಗೆ ಅನುಚಿತ ವರ್ತನೆ: ಖ್ಯಾತ ನಟನ ಮೇಲೆ ದಾಖಲಾಯ್ತು ದೂರು..!
vinayakan
zahir | news18
Updated: June 17, 2019, 8:41 PM IST
ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿನಾಯಕನ್ ವಿರುದ್ಧ ಕೇರಳದ ಕಲ್ಪೆಟ್ಟದಲ್ಲಿ ದೂರು ದಾಖಲಾಗಿದೆ. ತನ್ನ ವಿಶೇಷ ಮ್ಯಾನರಿಸಂ ಮೂಲಕವೇ ಸಿನಿರಂಗದಲ್ಲಿ ಮನೆಮಾತಾಗಿದ್ದ ನಟನ ವಿರುದ್ದ ಮಹಿಳಾ ನಿಂದನೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ಮಹಿಳಾ ಕಾರ್ಯಕರ್ತೆಯೊಬ್ಬರು ನಟನಿಗೆ ಕರೆ ಮಾಡಿ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದರು. ಈ ವೇಳೆ ತನ್ನನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕೊಟ್ಟಾಯಂ ಜಿಲ್ಲೆಯ ಮಹಿಳೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಟನ ಫೋನ್ ಸಂಭಾಷಣೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ವಿನಾಯಕನ್ ಮಾಲಿವುಡ್​ನ ಸೂಪರ್ ಸ್ಟಾರ್​ಗಳಾದ ಮಮ್ಮುಟ್ಟಿ, ಮೋಹನ್ ಲಾಲ್​ ಸೇರಿದಂತೆ ಅನೇಕ ಯುವ ನಟರುಗಳ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಅದರಲ್ಲೂ ದುಲ್ಖರ್ ಸಲ್ಮಾನ್ ಜೊತೆಗಿನ 'ಕಮ್ಮಟ್ಟಿಪಾಡಂ' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಒಲಿದಿತ್ತು. ಹಾಗೆಯೇ 'ಕಲಿ' ಚಿತ್ರದಲ್ಲಿ ವಿಲನ್ ರೋಲ್​ನಲ್ಲಿ ಅಬ್ಬರಿಸಿದ್ದರು. ಮಲಯಾಳಂ ಅಲ್ಲದೆ ತಮಿಳು ಚಿತ್ರರಂಗದಲ್ಲೂ​ ತೊಡಗಿಸಿಕೊಂಡಿರುವ ವಿನಾಯಕನ್ ಸದ್ಯ ಚಿಯಾನ್ ವಿಕ್ರಂ ಅಭಿನಯದ 'ಧ್ರುವ ನಚಿತ್ರಂ' ಚಿತ್ರದಲ್ಲಿ ಖಳನಾಗಿ ನಟಿಸುತ್ತಿದ್ದಾರೆ.ಅಲ್ಲದೆ ಇತ್ತೀಚೆಗೆ ನಾಯಕನಾಗಿ ಭಡ್ತಿ ಪಡೆದ ವಿನಾಯಕನ್ 'ತೊಟ್ಟಪ್ಪನ್' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಉತ್ತಮ ವಿಮರ್ಶೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ನಟನ ಮೇಲೆ ಅನುಚಿತ ವರ್ತನೆ ದೂರು ಕೇಳಿ ಬಂದಿರುವುದು ಮಾತ್ರ ವಿಪರ್ಯಾಸ.

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...