ಮಲಯಾಳಂ (Malayalam )ನಟ ಶ್ರೀಜಿತ್ ರವಿ (Sreejith Ravi) ಅವರನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ. ಹೌದು, ತಮ್ಮ ದೇಹದ ಖಾಸಗಿ ಭಾಗವನ್ನು ಅಪ್ರಾಪ್ತರ ಎದುರು ಪ್ರದಶರ್ಸಿಸಿದ ಕಾರಣ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ರಕ್ಷಣೆ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ಲೈಂಗಿಕ ಅಪರಾಧಗಳ ಆಧಾರದ ಮೇಲೆ ನಟ ಶ್ರೀಜಿತ್ ರವಿ ಬಂಧಿಸಲಾಗಿದೆ. ಇನ್ನು, ಜುಲೈ 4ರಂದು ತ್ರಿಶೂರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಇಬ್ಬರು ಅಪ್ರಾಪ್ತರು ಶ್ರೀಜಿತ್ ಕಾರಿನ ಬಳಿ ಬಂದಾಗ ಅವರು ಕಾರಿನಿಂದ ಇಳಿದು ತಮ್ಮ ದೇಹದ ಖಾಸಗಿ ಅಂಗಾಂಗಗಳನ್ನು ಪ್ರದರ್ಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?:
ಮಲಯಾಳಂ ನಟ ಶ್ರೀಜಿತ್ ರವಿ ಅವರು ಸಾರ್ವಜನಿಕ ಒಲಯದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಜುಲೈ 4 ರಂದು ಈ ಸಂಬಂಧ 14 ಹಾಗೂ 9 ವರ್ಷದ ಅಪ್ರಾಪ್ತ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಟ ಶ್ರೀಜಿತ್ ತ್ರಿಶೂರು ಪಾರ್ಕ್‌ಗೆ ಬಂದಿದ್ದರು. ಈ ಸಮಯದಲ್ಲಿ ಕಾರಿನ ಬಳಿ ಬಂದಿದ್ದ ಇಬ್ಬರು ಅಪ್ರಾಪ್ತ ಮಕ್ಕಳ ಎದುರು ನಟ ಕಾರಿನಿಂದ ಇಳಿದ ತಮ್ಮ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವಿ ಪರಿಶೀಲಿಸಿದಾಗ ವಿಡಿಯೋದಲ್ಲಿ ಇರುವುದು ನಟ ಶ್ರೀಜಿತ್ ಎಂದು ತಿಳಿದುಬಂದಿದೆ. ಇದರ ಆಧಾರದ ಮೇಲೆ ನಟನನ್ನು ಪೊಲೀಸರು ಬಂಧಿಸಿದ್ದಾರೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ನಟ:
ಇನ್ನು, ಬಂಧಿತರಾಗಿರುವ ಮಲೆಯಾಳಂ ನಟ ಶ್ರೀಜಿತ್ ರವಿ ಅವರು ತಮ್ಮ ತಪ್ಪನ್ನು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮಗೆ ಮಾನಸಿಕ ಕಾಯಿಲೆ ಇರುವುದಾಗಿ ತಿಳಿಸಿದ್ದಾರೆ ಎಂದು ಆನ್‌ಮನೋರಮ ವರದಿ ಮಾಡಿದೆ. ಇದಲ್ಲದೇ ತಮ್ಮ ಮಾನಸಿಕ ಸಮಸ್ಯೆಗೆ ತಾವು ಚಿಕಿತ್ಸೆಯನ್ನು ಪಡೆಯುತ್ತಿರುವುದಾಗಿ ನಟ ಹೇಳಿಕೊಂಡಿದ್ದಾರಂತೆ. ಸದ್ಯ ಪೊಲೀಸರು ಶ್ರೀಜಿತ್ ರವಿ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ಲೈಂಗಿಕ ಅಪರಾಧ ಆಧಾರದ ಮೇಲೆ ಬಂಧಿಸಿದೆ.
ಇದನ್ನೂ ಓದಿ: Leena Manimekalai: ಶಿವ-ಪಾರ್ವತಿ ಫೋಟೋ ಹಂಚಿಕೊಂಡ ಲೀನಾ, ಮತ್ತೆ ವಿವಾದಾತ್ಮಕ ಟ್ವೀಟ್ ಮಾಡಿದ ನಿರ್ದೇಶಕಿ
ಹಿಂದೆಯೂ ಇದೇ ರೀತಿ ನಡೆದುಕೊಂಡಿದ್ದ ನಟ:
ನಟ ಶ್ರೀಜಿತ್ ರವಿ ಇದೇ ಮೊದಲ ಬಾರಿಗೆ ಈ ರೀತಿ ನಡೆದುಕೊಂಡಿಲ್ಲ. ಹಿಂದೆಯೂ ಒಮ್ಮೆ ಇದೇ ರೀತಿ ನಡೆದುಕೊಂಡ ಉದಾಹರಣೆ ಇದೆ. ಹೌದು, 6 ವರ್ಷಗಳ ಹಿಂದೆ ಶ್ರೀಜಿತ್ ರವಿ ಇದೇ ರೀತಿಯಲ್ಲಿ ಸಾವರ್ಜನಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದರು. 2016ರಲ್ಲಿ ನಟ ಶ್ರೀಜಿತ್ ಕೇರಳದ ಪಾಲಕ್ಕಡ್‌ನಲ್ಲಿ 14 ಮಂದಿ ಶಾಲಾ ಬಾಲಕಿಯರ ಪೋಷಕರು ನಟನ ವಿರುದ್ಧ ದೂರು ದಾಖಲಿಸಿದ್ದರು. ದೂರಿನಲ್ಲಿ ಶ್ರೀಜಿತ್ ರವಿ ಸಾರ್ವಜನಿಕವಾಗಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು ಎಂದು ತಿಳಿಸಲಾಗಿತ್ತು. ಆ ವೇಳೆಯಲ್ಲಿಯೂ ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: Shiva Rajkumar: ಶಿವಣ್ಣನ ಅಸಲಿ ಹೆಸರು ಶಿವರಾಜ್ಕುಮಾರ್ ಅಲ್ವಂತೆ! ನಿಜವಾದ ಹೆಸರು ರಿವೀಲ್ ಮಾಡಿದ ಹ್ಯಾಟ್ರಿಕ್ ಹೀರೋ
ಮಲೆಯಾಳಂ ಚಿತ್ರರಂಗದ ಹಿರಿಯ ನಟ ಶ್ರೀಜಿತ್:
ಹೌದು, ಮಲೆಯಾಳಂ ಚಿತ್ರರಂಗದಲ್ಲಿ ಶ್ರೀಜಿತ್ ಓರ್ವ ಹಿರಿಯ ನಟರಾಗಿದ್ದಾರೆ. 2005ರಲ್ಲಿ ಶ್ರೀಜಿತ್ 'ಮಯೂಖಂ' ಸಿನಿಮಾ ಮೂಲಕ ಬಣ್ಣದ ಲೋಕ್ಕಕೆ ಕಾಲಿಟ್ಟರು. ಇದರ ಯಶಸ್ಸಿನ ನಂತರ ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್ಗಳು ಬರಲಾರಂಭಿಸಿದವು. ಅದರಲ್ಲಿಯೂ ಛಂತುಪೊಟ್ಟು ಸಿನಿಮಾ ಅವರ ಸಿನಿ ಜರ್ನಿಯಲ್ಲಿ ಭರ್ಜರಿ ಪ್ರದರ್ಶನ ಕಂಡ ಸಿನಿಮಾವಾಗಿದೆ. ಶ್ರೀಜಿತ್ ಅವರು, ಪುಣ್ಯಲನ್ ಅಗರ್‌ಬತ್ತೀಸ್, ಮಧ ಯಾನೈ ಕೂಟ್ಟಂ, ಕಥಕಲಿ, ಅಸುರವಧಂ, ವೇಟ್ಟೈ, ಕುಂಕಿ, ಮಿಷನ್ 90 ಡೇಸ್, ಪುಣ್ಯಲನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಸುಮಾರು 70ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ