• Home
  • »
  • News
  • »
  • entertainment
  • »
  • Actor Death: ಚಿತ್ರರಂಗಕ್ಕೆ ಮತ್ತೊಂದು ಶಾಕ್, 37ನೇ ವಯಸ್ಸಲ್ಲೇ ಯುವನಟ ಸಾವು! ಕಾರಣ ಮಾತ್ರ ನಿಗೂಢ

Actor Death: ಚಿತ್ರರಂಗಕ್ಕೆ ಮತ್ತೊಂದು ಶಾಕ್, 37ನೇ ವಯಸ್ಸಲ್ಲೇ ಯುವನಟ ಸಾವು! ಕಾರಣ ಮಾತ್ರ ನಿಗೂಢ

ನಟ ಶರತ್ ಚಂದ್ರನ್

ನಟ ಶರತ್ ಚಂದ್ರನ್

ಮಲಯಾಳಂ ಚಿತ್ರರಂಗದ ಖ್ಯಾತ ಯುವನಟ ಶರತ್ ಚಂದ್ರನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಶರತ್ ಚಂದ್ರನ್ ಮೃತಪಟ್ಟಿದ್ದಾಗಿ ಮಲಯಾಳಂ ಚಿತ್ರರಂಗದ ಮೂಲಗಳು ತಿಳಿಸಿವೆ.

  • Share this:

ಕೇರಳ: ಕಳೆದ 2 ವರ್ಷಗಳಿಂದ ಘಟಾನುಘಟಿ ಕಲಾವಿದರು, ಪ್ರತಿಭಾನ್ವಿತ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ನಟಿಯರು, ಕಲಾವಿದೆಯರನ್ನು ಕಳೆದುಕೊಂಡಿರುವ ಭಾರತೀಯ ಚಿತ್ರರಂಗಕ್ಕೆ (Indian film industry) ಮತ್ತೊಂದು ಆಘಾತ (Shock) ಎದುರಾಗಿದೆ. ಕೇರಳದ (Kerala) ಜನಪ್ರಿಯ ಯುವನಟ (popular young actor) ಶರತ್ ಚಂದ್ರನ್ (Sarath Chandran) ಸಾವನ್ನಪ್ಪಿದ್ದಾರೆ. ಮಲಯಾಳಂ ಚಿತ್ರರಂಗದ (Malayalam film industry) ಪ್ರತಿಭಾನ್ವಿತ ನಟ ಶರತ್ ಚಂದ್ರನ್ ಕೇವಲ 37ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ರಾತ್ರಿ ಶರತ್ ಚಂದ್ರನ್ ನಿಗೂಢವಾಗಿ (mysteriously) ಮೃತಪಟ್ಟಿದ್ದಾರೆ ಅಂತ ಕೇರಳ ಚಿತ್ರರಂಗದ ಮೂಲಗಳು ತಿಳಿಸಿವೆ.


ಶವವಾಗಿ ಪತ್ತೆಯಾದ ಶರತ್ ಚಂದ್ರನ್


ಮಲಯಾಳಂ ಚಿತ್ರರಂಗದ ಖ್ಯಾತ ಯುವನಟ ಶರತ್ ಚಂದ್ರನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಶರತ್ ಚಂದ್ರನ್ ಮೃತಪಟ್ಟಿದ್ದಾಗಿ ಮಲಯಾಳಂ ಚಿತ್ರರಂಗದ ಮೂಲಗಳು ತಿಳಿಸಿವೆ.


ತಂದೆ, ತಾಯಿ, ತಮ್ಮನನ್ನು ಅಗಲಿದ ನಟ


37 ವರ್ಷದ ಯುವನಟ ಶರತ್ ಚಂದ್ರನ್ ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಇದೀಗ 37ನೇ ವಯಸ್ಸಿನಲ್ಲೇ ಅಗಲಿ ಮಲಯಾಳಂ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಶರತ್ ಚಂದ್ರನ್ ಅವರು ತಂದೆ ಚಂದ್ರನ್, ತಾಯಿ ಲೀಲಾ ಮತ್ತು ಸಹೋದರ ಶ್ಯಾಮ್ ಅವರನ್ನು ಅಗಲಿದ್ದಾರೆ.


ಇದನ್ನೂ ಓದಿ: Film Set Catches Fire: ಏಕಾಏಕಿ ಹೊತ್ತಿ ಉರಿದ ರಣಬೀರ್ ಕಪೂರ್ ಸಿನಿಮಾದ ಸೆಟ್, ದಟ್ಟ ಹೊಗೆ


ನಿಗೂಢವಾಗಿ ಸಾವನ್ನಪ್ಪಿದ ಶರತ್ ಚಂದ್ರನ್


ನಟ ಶರತ್ ಚಂದ್ರನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗುತ್ತಿದೆ. ನಿನ್ನೆ ರಾತ್ರಿ  ಅವರು ಮೃತಪಟ್ಟಿದ್ದು ಇದುವರೆಗೂ ಸಾವಿಗೆ ಏನು ಕಾರಣ ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ಯುವ ನಟನ ಸಾವು ತೀವ್ರ ಆಘಾತ ಹಾಗೂ ಕುತೂಹಲ ಮೂಡಿಸಿದೆ. ಇನ್ನು ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ನಟನ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.


ಡಬ್ಬಿಂಗ್ ಕಲಾವಿದನಾಗಿ ಚಿತ್ರರಂಗ ಪ್ರವೇಶ


ಕೊಚ್ಚಿ ಮೂಲದ ಶರತ್ ಚಂದ್ರನ್ ಮೊದಲು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಣ್ಣದ ಬದುಕಿಗೆ ಆಕರ್ಷಿತರಾದ ಶರತ್ ಚಂದ್ರನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಡಬ್ಬಿಂಗ್ ಆರ್ಟಿಸ್ಟ್ ಆಗಿ. ನಂತರ ನಟನೆಯ ಅವಕಾಶವೂ ಶರತ್ ಚಂದ್ರನ್ ಅವರನ್ನು ಕೈಬೀಸಿ ಕರೆಯಿತು. ಡಬ್ಬಿಂಗ್ ಕಲಾವಿದರಾಗಿಯೇ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ, ನೇಮ್ ಫೇಮ್ ಪಡೆದರು.


‘ಅಂಗಮಾಲಿ ಡೈರೀಸ್’ ಸಿನಿಮಾ ಮೂಲಕ ಜನಪ್ರಿಯತೆ


2017ರಲ್ಲಿ ರಿಲೀಸ್ ಆಗಿದ್ದ ‘ಅಂಗಮಾಲಿ ಡೈರೀಸ್’ ಸಿನಿಮಾ ಶರತ್ ಚಂದ್ರನ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತು. ‘ಅಂಗಮಾಲಿ ಡೈರೀಸ್’ ಚಿತ್ರದಲ್ಲಿ ಆಂಥೋನಿ ವರ್ಗೀಸ್, ರೇಶ್ಮಾ ರಾಜನ್, ಬಿನ್ನಿ ರಿಂಕಿ ಬೆಂಜಾಮಿನ್ ಮುಂತಾದವರು ಅಭಿನಯಿಸಿದ್ದರು. ಈ ಚಿತ್ರವನ್ನು ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಮೂಲಕವೇ ಶರತ್ ಚಂದ್ರನ್ ಮಲಯಾಳಂ ಚಿತ್ರರಂಗದಲ್ಲಿ ನೆಲೆ ಪಡೆದರು. ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದವರು ನಟನಾಗಿಯೂ ಗುರುತಿಸಿಕೊಂಡರು.


ಹಲವಾರು ಸಿನಿಮಾಗಳಲ್ಲಿ ಶರತ್ ಚಂದ್ರನ್ ನಟನೆ


ಬಳಿಕ 2017ರಲ್ಲಿ ತೆರೆಗೆ ಬಂದಿದ್ದ ‘ಒರು ಮೆಕ್ಸಿಕನ್ ಅಪರಾಥ’, 2017ರಲ್ಲಿ ರಿಲೀಸ್ ಆಗಿದ್ದ ‘ಸಿಐಎ: ಕಾಮ್ರೇಡ್ ಇನ್ ಅಮೆರಿಕಾ’, ಕೂಡೆ (2018), ಮತ್ತು ಹಾಗೂ 2021ರಲ್ಲಿ ರಿಲೀಸ್ ಆಗಿದ್ದ ಹಾಸ್ಯ ಚಿತ್ರ ಒರು ತಾತ್ವಿಕ ಅವಲೋಕನಂ ಮುಂತಾದ ಚಿತ್ರಗಳಲ್ಲಿ ಶರತ್ ಚಂದ್ರನ್ ಅಭಿನಯಿಸಿದ್ದರು.


ಇದನ್ನೂ ಓದಿ: Ramachari Serial: ಸಿಇಓ ಪೋಸ್ಟ್ ಆಸೆಗೆ ರಾಮಾಚಾರಿ ತಾಳಕ್ಕೆ ‌ಕುಣಿಯುತ್ತಿದ್ದಾಳಾ ಚಾರು?


ನಟ ಅಂಟೋನಿ ವರ್ಗೀಸ್ ಕಂಬನಿ


ಅಂಗಮಾಲಿ ಡೈರೀಸ್’ ಚಿತ್ರದಲ್ಲಿ ಶರತ್ ಚಂದ್ರನ್ ಜೊತೆಗೆ ಆಂಥೋನಿ ವರ್ಗೀಸ್ ಕೂಡ ಅಭಿನಯಿಸಿದ್ದರು. ಇದೀಗ ಶರತ್ ಚಂದ್ರನ್ ಅವರ ಚಿತ್ರವನ್ನು ನಟ ಆಂಟೋನಿ ವರ್ಗೀಸ್ ಅವರು ಹಂಚಿಕೊಂಡಿದ್ದು ಸಂತಾಪ ಸೂಚಿಸಿದ್ದಾರೆ. ಅವರು RIP ಬ್ರದರ್ ಎಂದು ಬರೆದಿದ್ದಾರೆ. ಇನ್ನು ಯುವನಟನ ಸಾವಿಗೆ ಮಲಯಾಂಳ ಚಿತ್ರರಂಗದ ಗಣ್ಯರು ಹಾಗೂ ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು