• Home
  • »
  • News
  • »
  • entertainment
  • »
  • Kunchacko Boban: ಮಲಯಾಳಂ ಚಿತ್ರನಟ ಕರ್ನಾಟಕದಲ್ಲಿ ಪೋಸ್ಟ್ ಮ್ಯಾನ್, ಸರ್ಕಾರಿ ಕೆಲಸ ಕೊನೆಗೂ ಸಿಕ್ತು ಎಂದ ಬೋಬನ್!

Kunchacko Boban: ಮಲಯಾಳಂ ಚಿತ್ರನಟ ಕರ್ನಾಟಕದಲ್ಲಿ ಪೋಸ್ಟ್ ಮ್ಯಾನ್, ಸರ್ಕಾರಿ ಕೆಲಸ ಕೊನೆಗೂ ಸಿಕ್ತು ಎಂದ ಬೋಬನ್!

ಪಠ್ಯ ಪುಸ್ತಕದಲ್ಲಿ ಮಲಯಾಳಂ ನಟ

ಪಠ್ಯ ಪುಸ್ತಕದಲ್ಲಿ ಮಲಯಾಳಂ ನಟ

Kunchacko Boban: ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ಬರೆದುಕೊಂಡ ಬೆನ್ನಲ್ಲೆ ಅವರ ಈ ಪೋಸ್ಟ್​ಗೆ ಅಭಿಮಾನಿಗಳು ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

  • Share this:

ಪಠ್ಯ ಪುಸ್ತಕಗಳಲ್ಲಿ (Text Book)  ನಟ ನಟಿಯರ ಚಿತ್ರಗಳನ್ನು ಬಳಸುವುದು ವಿರಳ, ಕೆಲವೊಂದು ಅನಿವಾರ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಆದರೆ ಕರ್ನಾಟಕದ (Karnataka) ಪಠ್ಯ ಪುಸ್ತಕವೊಂದರಲ್ಲಿ ಮಲಯಾಳಂ (Malayalam) ನಟನ ಚಿತ್ರ ಬಳಕೆಯಾಗಿದ್ದು, ಇದಕ್ಕೆ ನಟ ಮಾತ್ರ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಮಲಯಾಳಂ ನಟ ಕುಂಚಾಕೊ ಬೋಬನ್ (Kunchacko Boban) ಅವರು ಕರ್ನಾಟಕ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ (Post Man) ಆಗಿ ಕಾಣಿಸಿಕೊಂಡಿದ್ದಾರೆ.


ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಪ್ರತಿಕ್ರಿಯಿಸಿದ್ದು, ಅದರಲ್ಲಿ ಆ ಪಠ್ಯಪುಸ್ತಕದ ಚಿತ್ರವನ್ನು ಹಂಚಿಕೊಂಡಿರುವ ನಟ ಕುಂಚಾಕೊ ಬೋಬನ್ ಅಂತಿಮವಾಗಿ ನನಗೆ ಕರ್ನಾಟಕ ಸರ್ಕಾರದಿಂದ ಸರ್ಕಾರಿ ಕೆಲಸ ಸಿಕ್ಕಿತು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇನ್ನು ಕೆಲ ವರ್ಷಗಳ ಹಿಂದೆ ಅವರಿಗೆ ಉನ್ನತ ಸ್ಥಾನಕ್ಕೆ ಬರಲು ಸಹಾಯ ಮಾಡಿದ ಪೋಸ್ಟ್‌ಮ್ಯಾನ್‌ಗೆ ಕೃತಜ್ಞತೆಯನ್ನು ಸಲ್ಲಿಸಲು ಈ ಸಮಯದಲ್ಲಿ ಮರೆಯಲಿಲ್ಲ.


ಕೊನೆಗೂ ಸರ್ಕಾರಿ ಕೆಲಸ ಸಿಗ್ತು ಎಂದ ನಟ


ಕರ್ನಾಟಕ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕದಲ್ಲಿ ಪೋಸ್ಟ್‌ಮ್ಯಾನ್ ಆಗಿ ಕುಂಚಾಕೊ ಬೋಬನ್ ಅವರ ಫೋಟೋವನ್ನು ಮೂಲತಃ 'ಒರಿದಾತೊರು ಪೋಸ್ಟ್‌ಮ್ಯಾನ್' ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದೆ, ಅಲ್ಲಿ ಅವರು ರಘುನಂದನ್ ಎಂಬ ಪೋಸ್ಟ್‌ಮ್ಯಾನ್ ಪಾತ್ರವನ್ನು ನಿರ್ವಹಿಸಿದ್ದರು.


ಇದನ್ನೂ ಓದಿ: ಗಂಡಸರ ಟಾಯ್ಲೆಟ್​​ ಯೂಸ್​ ಮಾಡಿದ್ರಂತೆ ಈ ಸ್ಟಾರ್​ ನಟಿಯರು, ಕಾಲ ಕೆಟ್ಟೋಯ್ತು!


ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ಬರೆದುಕೊಂಡ ಬೆನ್ನಲ್ಲೆ ಅವರ ಈ ಪೋಸ್ಟ್​ಗೆ ಅಭಿಮಾನಿಗಳು ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನು ನಟ ಕುಂಚಾಕೊ ಬೋಬನ್ ಕೂಡ ಕೆಲವು ಕಾಮೆಂಟ್‌ಗಳಿಗೆ ತಮ್ಮ ಹಾಸ್ಯದ ಉತ್ತರವನ್ನು ನೀಡಿದ್ದು, ಅದನ್ನು ಸಹ ಹಂಚಿಕೊಂಡಿದ್ದಾರೆ.


ಪೋಸ್ಟ್​ಗೆ ಹಲವಾರ ಕಾಮೆಂಟ್​


ನಿರ್ದೇಶಕ ಮಿಧುನ್ ಮ್ಯಾನುಯೆಲ್ ಥಾಮಸ್ ಅವರು ತಮಾಷೆಯ ಈ ಕಾಮೆಂಟ್​ಗಳನ್ನು ಪೋಸ್ಟ್ ಮಾಡಿದ್ದು, ಜೊತೆಗೆ ಕುಂಚಾಕೊ ಬೋಬನ್ ಸರ್ಕಾರಿ ಕೆಲಸದಿಂದ ರಜೆ ಪಡೆಯಲು ಕಷ್ಟವಾದ್ದರಿಂದ, ಅವರು ತಮ್ಮ ಮುಂದಿನ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಮಾಡುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ. ನಟರಾದ ರಮೇಶ್ ಪಿಶಾರೋಡಿ, ವಿನಯ್ ಫೋರ್ಟ್ ಮತ್ತು ದಿವ್ಯ ಪ್ರಭಾ ಕೂಡ ಕುಂಚಾಕೊ ಬೋಬನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ  ತಮ್ಮ ತಮಾಷೆಯ  ಕಾಮೆಂಟ್‌ಗಳನ್ನು ಮಾಡಿದ್ದಾರೆ.


ಇದನ್ನೂ ಓದಿ: James ಸಿನಿಮಾ ರಿಲೀಸ್​ಗೆ 45 ದಿನಗಳು ಬಾಕಿ.. ಮಾರ್ಚ್​ 17ಕ್ಕೆ ಕರುನಾಡಲ್ಲಿ `ಅಪ್ಪು ಹಬ್ಬ’ ಫಿಕ್ಸ್​!


ಕೆಲಸದ ವಿಚಾರಕ್ಕೆ ಬಂದಾಗ, ನಟ ಕುಂಚಾಕೊ ಬೋಬನ್ ಅವರು '2403 ಅಡಿ', 'ಪದ್ಮಿನಿ', 'ರೆಂಡಗಂ', 'ಎಂಥಾದ ಸಾಜಿ', ಮತ್ತು 'ನೀಲವೆಳಿಚಂ' ಚಿತ್ರಗಳನ್ನು ಒಳಗೊಂಡಂತೆ ಹಲವಾರು ಹೆಚ್ಚು ನಿರೀಕ್ಷಿತ ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಅವರ ಮುಂಬರುವ ಚಿತ್ರ 'ಪದ' ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದ್ದು, ಅವರ ಅಭಿಮಾನಿಗಳು ಹೆಚ್ಚು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.


ಈ ಪೋಸ್ಟ್‌ಗೆ ಸಿನಿಮಾ ತಾರೆಯರು ಸೇರಿದಂತೆ ಹಲವರು ಕಮೆಂಟ್‌ಗಳನ್ನು ಮಾಡಿದ್ದಾರೆ. ಹಾಗಿದ್ದರೆ ನಟ ಆಂಟನಿ ವರ್ಗೀಸ್ ಸಹ ಪ್ರತಿಕ್ರಿಯಿಸಿದ್ದಾರೆ. ಕುಂಚಾಕೋ ಅಭಿನಯದ 'ಆರ್ಡರ್' ಚಿತ್ರದ ಫೋಟೋವನ್ನು ಯಾರೋ ಶೇರ್ ಮಾಡಿ 'ತೆಲಂಗಾಣದಲ್ಲಿ ಕಂಡಕ್ಟರ್' ಎಂದು ಕಮೆಂಟ್ ಮಾಡಿದ್ದಾರೆ. ಅದೇನೇ ಇರಲಿ, ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕುಂಚಾಕೊ ಅವರ ‘ಪೋಸ್ಟ್ ಮ್ಯಾನ್’ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published by:Sandhya M
First published: