ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಮತ್ತು ಹೊಂಬಾಳೆ ಫಿಲ್ಮ್ಸ್ (Hombale Films) ಮೊದಲ ಕಾಂಬಿನೇಷನ್ನಲ್ಲಿ ಮೂಡಿ ಬರ್ತಿರುವ ಬಘೀರ ಸಿನಿಮಾ ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಶ್ರೀಮುರಳಿ ಅಭಿಮಾನಿಗಳು ಈ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಪೊಲೀಸ್ ಅಧಿಕಾರಿಯ ಅವತಾರದ ಶ್ರೀಮುರಳಿ ಕಾಣಿಸಿದ್ದು, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು ಎಲ್ಲರ ಗಮನಸೆಳೆದಿದೆ. ಸದ್ಯ ಬಘೀರ ಸಿನಿಮಾ 2 ಹಂತದ ಶೂಟಿಂಗ್ ಮುಗಿಸಿದ್ದು ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಬಘೀರ ಚಿತ್ರತಂಡಕ್ಕೆ ಸ್ಟಾರ್ ನಟರ ಎಂಟ್ರಿಯಾಗಲಿದೆಯಂತೆ.
ಬಘೀರ ಸಿನಿಮಾದಲ್ಲಿ ಫಹಾದ್ ಫಾಸಿಲ್
ಸೂರಿ ನಿರ್ದೇಶನದ ಬಘೀರ ಸಿನಿಮಾ ಪಕ್ಕಾ ಮಾಸ್ ಮತ್ತು ಆಕ್ಷನ್ ಕಥಾಹಂದರವುಳ್ಳ ಸಿನಿಮಾ ಆಗಿದೆ. ಬಘೀರ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಚಿತ್ರತಂಡ ಸೇರುತ್ತಿದ್ದಾರೆ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಹೊಂಬಾಳೆ ಫಿಲಂಸ್ ಈ ಸುದ್ದಿಯನ್ನು ಖಚಿತಪಡಿಸಲಿದೆ.
ಸಿಬಿಐ ಆಫೀಸ್ ಫಹಾದ್ ಫಾಸಿಲ್
ನಟ ಫಹಾದ್ ಫಾಸಿಲ್ ಕಳೆದ ವರ್ಷ ಪುಷ್ಪ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಪುಷ್ಪ 2 ಸಿನಿಮಾದಲ್ಲಿ ಸಖತ್ ಆಗಿ ನಟಿಸಿ ಮೆಚ್ಚುಗೆ ಗಳಿಸಿದ್ರು. ಇದೀಗ ಬಘೀರ ಚಿತ್ರದಲ್ಲಿಯೂ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಘೀರ ಸಿನಿಮಾಕ್ಕೆ ಫಾಹದ್ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಲಿದೆ.
ಶೀಘ್ರವೇ ಚಿತ್ರತಂಡ ಸೇರಲಿದ್ದಾರೆ ಫಹಾದ್
ಸದ್ಯ ಶೂಟಿಂಗ್ ವೇಳೆ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೀಮುರಳಿ, ಇನ್ನೇನು ಕೆಲ ದಿನಗಳ ಬಳಿಕ ಶೂಟಿಂಗ್‌ಗೆ ಹಾಜರಾಗಲಿದ್ದಾರೆ. ಆಗ ಫಹಾದ್ ಕೂ ಚಿತ್ರತಂಡ ಸೇರಿಕೊಳ್ತಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಮಲಯಾಳಂನ ಧೂಮಂ ಸಿನಿಮಾದಲ್ಲಿ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡದ ಪವನ್ ಕುಮಾರ್ ನಿರ್ದೇಶನ ಮಾಡಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಈ ವಿಚಾರವನ್ನು ಸ್ವತಃ ಪವನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ವಿಚಾರವನ್ನು ಹಂಚಿಕೊಂಡಿದ್ದರು.
ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀಮುರಳಿ
'ಬಘೀರ' ಚಿತ್ರವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕಥೆ ಬರೆದಿದ್ದು ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. 'ಮಫ್ತಿ' ನಂತರ ಶ್ರೀಮುರಳಿ ಈ ಚಿತ್ರದಲ್ಲಿ ಮತ್ತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಶ್ರೀ ಮುರಳಿ ಜೊತೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಚೇರಿಸಿಕೊಳ್ತಿದ್ದಾರೆ ನಟ ಶ್ರೀಮುರಳಿ
ಜನವರಿ 16ರಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಮುರಳಿಗೆ ಡಾ. ಶಂಕರ್ ಮತ್ತು ಇತರ ವೈದ್ಯರ ತಂಡ ಯಶಸ್ಸಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಎರಡು ದಿನಗಳ ಕಾಲ ಮುರಳಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು ನಂತರ ಡಿಸ್ಚಾರ್ಜ್ ಆಗಲಿದ್ದಾರೆ. 3 ತಿಂಗಳ ಕಾಲ ಡ್ಯಾನ್ಸ್ ಹಾಗೂ ಫೈಟ್ ಸೇರಿದಂತೆ ಯಾವುದೇ ರಿಸ್ಕ್ ಎನಿಸುವಂತ ದೃಶ್ಯಗಳ ಶೂಟಿಂಗ್ ಮಾಡಬಾರದು ಎಂದು ವೈದ್ಯರು ಮುರಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ. ಶ್ರೀ ಮುರಳಿಗೆ ಆಪರೇಷನ್ ಆಗಿರುವ ವಿಚಾರ ತಿಳಿದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ