40ರ ನಂತರ ಮಹಿಳೆಯರು ಗರ್ಭಿಣಿಯಾಗುವುದು (Pregnant), ಮಗುವನ್ನು (Baby) ಹೆರುವುದು ಸ್ವಲ್ಪ ಕಾಂಪ್ಲಿಕೇಟ್. ವೈದ್ಯರು ಇಂಥಹ ಸಂದರ್ಭಗಳಲ್ಲಿ ಸ್ವಲ್ಪ ಹೆಚ್ಚೇ ಕಾಳಜಿ (Caring) ವಹಿಸಬೇಕಾಗುತ್ತದೆ. ಇದು ಅಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಇದೀಗ ಸೌತ್ ನಟಿಯ (South Actress) ತಾಯಿಯೊಬ್ಬರು ತಮ್ಮ 47ನೇ ವಯಸ್ಸಿನಲ್ಲಿ ಎರಡನೇ ಹೆಣ್ಣು ಮಗುವನ್ನು (Baby Girl) ಸ್ವಾಗತಿಸಿದ್ದಾರೆ. ಬರೋಬ್ಬರಿ 23 ವರ್ಷಗಳ ನಂತರ ಎರಡನೇ ಹೆರಿಗೆಯಾಗಿದೆ. ಈ ಸುದ್ದಿ ಎಲ್ಲಾ ಕಡೆ ವೈರಲ್ (Viral) ಆಗಿದ್ದು ಮದುವೆ ವಯಸ್ಸಿನ ಮಗಳಿರುವ ಮಹಿಳೆಗೆ (Woman) ಮತ್ತೊಂದು ಮಗುವೇ (Baby) ಎಂದು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಕೆಲವರು ನಟಿಯನ್ನು ಟ್ರೋಲ್ (Troll) ಕೂಡಾ ಮಾಡಿದ್ದಾರೆ.
ಮಲಯಾಳಂನ ಫೇಮಸ್ ಶೋ ಚೆಂಬತ್ತುನಲ್ಲಿ ನಟಿಸಿದ ಆರ್ಯ ಪಾರ್ವತಿ ಅವರು ತಮ್ಮ ತಾಯಿ 47ನೇ ವಯಸ್ಸಿನಲ್ಲಿ ಅಮ್ಮನಾಗಿರುವ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ.
ಆರ್ಯ ಅವರ ತಾಯಿ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆರ್ಯ ಅವರು ತಮಗೆ ತಂಗಿ ಬಂದಿರುವ ಖುಷಿಯ ವಿಚಾರವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಸೀರಿಯಲ್ ನಟಿ ತಮ್ಮ ತಂಗಿಯಿಂದಾಗಿ ಈಗ ವೈರಲ್ ಆಗಿದ್ದಾರೆ.
ಅಕ್ಕನ ಸ್ಥಾನ ತುಂಬಲು ರೆಡಿ
ನಾನು ದೊಡ್ಡಕ್ಕನ ಸ್ಥಾನವನ್ನು ತೆಗೆದುಕೊಳ್ಳಲು ರೆಡಿಯಾಗಿದ್ದೇನೆ ಎಂದಿರುವ ಆರ್ಯ ತಂಗಿಯ ಆಗಮನದ ಸಂದರ್ಭ ಭಾವುಕವಾದ ಪೋಸ್ಟ್ ಶೇರ್ ಮಾಡಿದ್ದಾರೆ. 23 ವರ್ಷಗಳ ನಂತರ ನನಗೆ ಪುಟ್ಟ ತಂಗಿ ಬರುತ್ತಿದ್ದಾಳೆ. ಅವಳನ್ನು ಸ್ವಾಗತಿಸಲು ನಾನು ಖುಷಿಪಡುತ್ತಿದ್ದೇನೆ. ಅಕ್ಕ ಹಾಗೂ ಅಮ್ಮನ ಸ್ಥಾನ ತೆಗೆದುಕೊಳ್ಳಲು ರೆಡಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆರ್ಯ ಪಾರ್ವತಿ ಅವರ ತಾಯಿಯ ವಯಸ್ಸು 47.
ಇದನ್ನೂ ಓದಿ: Actress Ramya: ರಮ್ಯಾ-ರಕ್ಷಿತಾ ಮಧ್ಯೆ ಸ್ಪರ್ಧೆ ತಂದಿದ್ದು ಯಾರು? ಸ್ಯಾಂಡಲ್ವುಡ್ ಕ್ವೀನ್ ಹೇಳಿದ್ದಿಷ್ಟು
ಎರಡನೇ ಮಗುವಿನ ವಿಚಾರ ಮಗಳಿಂದ ಮುಚ್ಚಿಟ್ರು ಪೋಷಕರು
ತಾಯಿಯ ಅನಿರೀಕ್ಷಿತ ಗರ್ಭಧಾರಣೆ ಬಗ್ಗೆ ನಟಿ ಆರ್ಯ ಪಾರ್ವತಿ ಮುಕ್ತವಾಗಿ ಮಾತನಾಡಿದ್ದಾರೆ. ಅಮ್ಮ ಗರ್ಭಿಣಿ ಎನ್ನುವ ವಿಚಾರವನ್ನು ಅಪ್ಪ ಹೇಳಿದಾಗ ತನಗೆ ಹೇಗೆ ಶಾಕ್ ಆಯಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಮಗಳಿಗೆ ನಾಚಿಗೆ ಆಗಬಹುದೆಂದು ತನ್ನ ಪೋಷಕರು ಅಮ್ಮ ಗರ್ಭಿಣಿ ಎಂಬ ವಿಚಾರವನ್ನು ಹೇಗೆ ಮುಚ್ಚಿಟ್ಟರು ಎನ್ನುವುದನ್ನೂ ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ತನ್ನ ಪೋಷಕರು ಸಾಕಷ್ಟು ಟೀಕೆಗಳನ್ನೂ ಕೇಳಿದ್ದಾರೆ ಎಂದು ನಟಿ ರಿವೀಲ್ ಮಾಡಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ಈ ಬಗ್ಗೆ ನಟಿ ಆರ್ಯ ಪಾರ್ವತಿ ಮಾತನಾಡಿದ್ದಾರೆ. ಒಂದು ಫೋನ್ ಕಾಲ್ ನನ್ನ ಬದುಕು ಬದಲಾಯಿಸಿತು. ನಾನು ಮನೆಗೆ ರಜೆಗಾಗಿ ಹೋಗುವುದರಲ್ಲಿದೆ. ಅದಕ್ಕೂ ಕೆಲವೇ ದಿನ ಮೊದಲು ಅಪ್ಪನಿಂದ ಒಂದು ಕಾಲ್ ಬಂತು. ಅವರು ಸ್ವಲ್ಪ ಟೆನ್ಶನ್ನಲ್ಲಿದ್ದಂತೆ ಅನಿಸಿತು. ಸ್ವಲ್ಪ ನಿಮಿಷ ಕಳೆದು ಅಪ್ಪ ಅಮ್ಮ ಗರ್ಭಿಣಿ ಎಂದು ಹೇಳಿದರು. ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ.
ನೀವು 23 ವರ್ಷದವರಾಗಿದ್ದಾಗ ನಿಮ್ಮ ಪೋಷಕರು ಹೇಳುವ ವಿಚಾರ ಅಲ್ಲ ಇದು. ನಾನು ಶಾಕ್ ಆದೆ ಎಂದರೆ ಸಾಕಾಗಲ್ಲ. ಅಮ್ಮನಿಗೆ 47 ವರ್ಷ ವಯಸ್ಸಾಗಿದೆ. ಇದು ಸ್ವಲ್ಪ ವಿಚಿತ್ರ ಅನಿಸಿತು. ಆಗ ಅಪ್ಪ ಅಮ್ಮನಿಗೀಗ 8 ತಿಂಗಳು ಎಂದರು. ತಾನು ಗರ್ಭಿಣಿ ಎಂದು ಅಮ್ಮನಿಗೆ ಗೊತ್ತಾಗುವಾಗಲೇ 7 ತಿಂಗಳಾಗಿತ್ತು ಎಂದಿದ್ದಾರೆ.
ಅಪ್ಪ ಈ ಸುದ್ದಿ ಹೇಳಿದ ನಂತರ ತಾವು ಈ ವಿಚಾರ ಸೀಕ್ರೆಟ್ ಆಗಿಟ್ಟಿರುವುದಾಗಿ ಹೇಳಿದರು. ನಾನು ಹೇಗೆ ಪ್ರತಿಕ್ರಿಯಿಸುತ್ತೇನೆಂದು ಹೆದರಿ ಅವರು ನನಗೆ ಈ ವಿಚಾರ ಹೇಳಲಿಲ್ಲ. ಕೆಲವು ದಿನ ಕಳೆದು ನಾನು ಮನೆಗೆ ಹೋದಾಗ ಅಮ್ಮನ ಮಡಿಲಲ್ಲಿ ಮಲಗಿ ಅಳಲಾರಂಭಿಸಿದೆ. ನಾನ್ಯಾಕೆ ಮುಜುಗರ ಪಡಲಿ ಎಂದು ಕೇಳಿದೆ. ನನಗೆ ಇದು ಬಹಳ ಹಿಂದೆಯೇ ಬೇಕಿತ್ತು ಎಂದು ಹೇಳಿದೆ. ನಂತರ ನಿಧಾನವಾಗಿ ಈ ವಿಚಾರವನ್ನು ನಾವು ನಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಹೇಳಲಾರಂಭಿಸಿದೆವು. ಕೆಲವರು ಕಾಳಜಿ ವ್ಯಕ್ತಪಡಿಸಿದರು. ಕೆಲವರು ಟೀಕಿಸಿದರು. ಆದರೆ ನಾವು ಅದನ್ನು ಹೆಚ್ಚು ಕೇರ್ ಮಾಡಲಿಲ್ಲ. ಹಾಗಾಗಿ ನನ್ನಮ್ಮನ ಪ್ರೆಗ್ನೆನ್ಸಿ ಸ್ಮೂತ್ ಆಗಿ ಆಯಿತು. ಅಲ್ಲಿ ಒತ್ತಡವಿರಲಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ