HOME » NEWS » Entertainment » MALAYALAM ACTOR ANIL NEDUMANGAD DROWNS TO DEATH IN IDUKKI OF KERALA SNVS

Actor Anil Death – ಶೂಟಿಂಗ್ ಬಿಡುವಿನಲ್ಲಿ ಈಜಾಡಲು ಹೋಗಿ ನಟ ಅನಿಲ್ ದುರಂತ ಸಾವು

ಸಿನಿಮಾವೊಂದರ ಶೂಟಿಂಗ್ ವೇಳೆ ವಿರಾಮ ಸಿಕ್ಕಾಗ ಸ್ನಾನ ಮಾಡಲೆಂದು ಸ್ನೇಹಿತರ ಜೊತೆ ಮಲಂಕರಾ ಜಲಾಶಯದ ನೀರಿಗೆ ಇಳಿದಿದ್ದ ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಅವರು ನೀರಿನ ಸೆಳೆತಕ್ಕೆ ಸಿಕ್ಕು ಮುಳುಗಿ ಸಾವನ್ನಪ್ಪಿದ್ದಾರೆ.

news18
Updated:December 26, 2020, 8:58 AM IST
Actor Anil Death – ಶೂಟಿಂಗ್ ಬಿಡುವಿನಲ್ಲಿ ಈಜಾಡಲು ಹೋಗಿ ನಟ ಅನಿಲ್ ದುರಂತ ಸಾವು
ಅನಿಲ್ ಪಿ ನೆಡುಮಂಗಾಡ್
  • News18
  • Last Updated: December 26, 2020, 8:58 AM IST
  • Share this:
ತಿರುವನಂತಪುರಂ: ಅಯ್ಯಪನ್ನುಂ ಕೋಶಿಯುಂ ಸೇರಿದಂತೆ ಹಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಅನಿಲ್ ಪಿ ನೆಡುಮಂಗಾಡ್ ಅವರು ನಿನ್ನೆ ಸಂಜೆ ದುರಂತ ಸಾವನ್ನಪ್ಪಿದ್ದಾರೆ. ಇಡುಕ್ಕಿ ಜಿಲ್ಲೆಯ ತೋಡುಪುಳದ ಮಲಂಕರಾ ಜಲಾಶಯದ ಒಂದು ಸ್ಥಳದಲ್ಲಿ ಸ್ನಾನ ಮಾಡುವಾಗ 48 ವರ್ಷದ ನಟ ಅನಿಲ್ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವಪ್ಪಿದ್ದಾರೆ. ಕ್ರಿಸ್ಮಸ್ ಹಬ್ಬದ ದಿನ ಚಿತ್ರವೊಂದರ ಶೂಟಿಂಗ್ ವೇಳೆಯೇ ಸಂಜೆ 5:30ರಲ್ಲಿ ಈ ದುರಂತ ಘಟನೆ ಸಂಭವಿಸಿರುವುದು ತಿಳಿದುಬಂದಿದೆ.

ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು ಅನಿಲ್ ನೆಡುಮಂಗಾಡ್ ಹಾಗೂ ಅವರ ಕೆಲ ಸ್ನೇಹಿತರು ಜಲಾಶಯದ ಬಳಿ ಸ್ನಾನಕ್ಕೆ ಹೋಗಿದ್ದಾರೆ. ಅನಿಲ್ ಅವರು ಸ್ವಲ್ಪ ಆಳಕ್ಕೆ ಹೋದ ನಂತರ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದರು ಎಂದು ಇಡುಕ್ಕಿ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅನಿಲ್ ಅವರನ್ನು ಶೀಘ್ರದಲ್ಲೇ ನೀರಿನಿಂದ ಮೇಲೆತ್ತಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಯಲಿಲ್ಲ.

ಇದನ್ನೂ ಓದಿ: RIP Bharath: ಕೊರೋನಾ ಸೋಂಕಿನಿಂದ ಕಂಠಿ ಸಿನಿಮಾ ನಿರ್ದೇಶಕ ಭರತ್​ ನಿಧನ..!

ಕಿರುತೆರೆಯಲ್ಲಿ ಕಾರ್ಯಕ್ರಮ ನಿರೂಪಕ ಮತ್ತು ನಿರ್ಮಾಪಕರಾಗಿ ಕಿರುತೆರೆಯಲ್ಲಿ ಅಡಿ ಇಟ್ಟಿದ್ದ ಅನಿಲ್ ನೆಡುಮಂಗಾಡ್ ಅವರು 2014ರಲ್ಲಿ ನಾನ್ ಸ್ಟೀವ್ ಲೋಪೆಜ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಧುಮುಕಿದ್ದರು. ಅಯ್ಯಪ್ಪನುಮ್ ಕೋಶಿಯುಮ್, ಪಾವಡ, ಕಮ್ಮತ್ತಿ ಪಾಡಮ್, ಕಿಸ್ಮತ್, ಪರೋಲ್, ಪಾಪಮ್ ಚೇಯ್ಯತವರ್ ಕಲ್ಲೇರಿಯಾಟ್ಟೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದೇ ವೇಳೆ, ಅನಿಲ್ ಅವರ ಸಾವಿಗೆ ಮಲಯಾಳಂ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ಧಾರೆ. ಪೃಥ್ವಿರಾಜ್ ಸುಕುಮಾರನ್, ಸುರೇಶ್ ಗೋಪಿ, ಬಿಜು ಮೆನನ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
Published by: Vijayasarthy SN
First published: December 26, 2020, 8:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories