Anil Murali Passes Away: ಮಲಯಾಳಂನ ಖ್ಯಾತ ನಟ ಅನಿಲ್ ಮುರಳಿ ನಿಧನ

Malayalam Actor Anil Murali: ಅನಿಲ್ ಮುರಳಿ​ ಸಾವಿಗೆ ಇಸಂಪೂರ್ಣ ಮಲಯಾಳಂ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ. ಪೃಥ್ವಿರಾಜ್​ ಸೇರಿದಂತೆ ಅನೇಕ ಕಲಾವಿದರು ಅನಿಲ್​ ಮುರುಳಿ​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಅನಿಲ್​ ಮುರುಳಿ​

ಅನಿಲ್​ ಮುರುಳಿ​

 • Share this:
  ಬೆಂಗಳೂರು (ಜು.30): ಮಲಯಾಳಂನ ಖ್ಯಾತ ನಟ ಅನಿಲ್ ಮುರಳಿ ಅವರು ಇಂದು ಕೊಚ್ಚಿಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಅನಿಲ್​ ಅವರು ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಮುರಳಿ​ ಇಂದು ಮೃತಪಟ್ಟಿದ್ದಾರೆ. ಅನಿಲ್​ ಅವರು ಹೆಂಡತಿ ಸುಮಾ, ಮಗ ಆದಿತ್ಯ ಹಾಗೂ ಮಗಳು ಅರುಂಧಿತಿಯನ್ನು ಅಗಲಿದ್ದಾರೆ.

  1993ರಲ್ಲಿ ತೆರೆಕಂಡ ಕನ್ಯಾಕುಮಾರಿಯಿಲ್​ ಒರು ಕವಿತಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅನಿಲ್ ಮುರಳಿ ಕಾಲಿಟ್ಟಿದ್ದರು. ಮಾಲಿವುಡ್​ನಲ್ಲಿ ತಮ್ಮ ನೆಗೆಟಿವ್​ ಪಾತ್ರಗಳ ಮೂಲಕವೇ ಅವರು ಹೆಸರು ಮಾಡಿದ್ದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಖ್ಯಾತಿ ಇವರಿಗಿದೆ.

  ಅನಿಲ್ ಮುರಳಿ​ ಸಾವಿಗೆ ಇಸಂಪೂರ್ಣ ಮಲಯಾಳಂ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ. ಪೃಥ್ವಿರಾಜ್​ ಸೇರಿದಂತೆ ಅನೇಕ ಕಲಾವಿದರು ಅನಿಲ್​ ಮುರುಳಿ​ ಆತ್ಮಕ್ಕೆ ಶಾಂತಿ ಕೋರಿದ್ದಾರೆ. . ನೆರರಿಯನ್​ ಸಿಬಿಐ, ಲಯನ್, ಕ್ಲಾಸ್​ ಮೇಟ್ಸ್​, ರನ್​ ಬೇಬಿ ರನ್​, ಅಯಾಲುಮ್​ ಇವರ ಕೆಲ ಪ್ರಮುಖ ಚಿತ್ರಗಳು.
  Published by:Rajesh Duggumane
  First published: