'ಮಲಾಲ' ಜೀವನಾಧಾರಿತ 'ಗುಲ್ ಮಕೈ' ಚಿತ್ರದ ಫಸ್ಟ್​ ಲುಕ್ ಬಿಡುಗಡೆ

news18
Updated:July 4, 2018, 10:53 PM IST
'ಮಲಾಲ' ಜೀವನಾಧಾರಿತ 'ಗುಲ್ ಮಕೈ' ಚಿತ್ರದ ಫಸ್ಟ್​ ಲುಕ್ ಬಿಡುಗಡೆ
news18
Updated: July 4, 2018, 10:53 PM IST
-ನ್ಯೂಸ್ 18 ಕನ್ನಡ

ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸಫ್​ಜೈ ಅವರ ಜೀವನಾಧಾರಿತ 'ಗುಲ್ ಮಕೈ' ಸಿನಿಮಾದ ಫಸ್ಟ್​ ಲುಕ್ ಟೀಸರ್ ಬಿಡುಗಡೆಯಾಗಿದೆ. ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ನಿಂತಿರುವ ಮಲಾಲ ಪಾತ್ರಧಾರಿ ರೀಮಾ ಶೇಖ್​ ಅವರ ಅರ್ಧ ಭಾಗ ಸ್ಪೋಟಗೊಂಡಿರುವಂತೆ ಪೋಸ್ಟರ್​ನಲ್ಲಿ ಬಳಸಿರುವುದು ಅರ್ಥಗರ್ಭಿತವಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ತಾಲಿಬಾನ್ ನಡೆಸುತ್ತಿರುವ ಕೌರ್ಯವನ್ನು ಮತ್ತು ಶಿಕ್ಷಣ ವಂಚಿತ ಸಮಾಜವನ್ನು ಈ ಪೋಸ್ಟರ್​ ಪ್ರತಿನಿಧಿಸುವಂತಿದೆ.

ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಧ್ವನಿಯೆತ್ತಿದ ಕಾರಣಕ್ಕಾಗಿ ತಾಲಿಬಾನ್ ಉಗ್ರಗಾಮಿಗಳ ಗುಂಡೇಟಿನಿಂದ ಗಾಯಗೊಂಡ ಮಲಾಲ ಯೂಸಫ್ ಅವರ ಕಥೆಯನ್ನು ಈ ಚಿತ್ರದ ಮೂಲಕ ತಿಳಿಸಲಾಗುತ್ತದೆ. ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ಅಮ್ಜದ್ ಖಾನ್ ನಿರ್ದೇಶಿಸುತ್ತಿದ್ದಾರೆ. 'ಗುಲ್​ ಮಕೈ' ಎಂದರೆ ತಾಲಿಬಾನ್ ಮೂಲದ ಜನಪದ ಕಥೆಯೊಂದರ ನಾಯಕಿಯಾಗಿದ್ದು, ಇದನ್ನೇ ಶೀರ್ಷಿಕೆಯನ್ನಾಗಿಸಿ ನೊಬೆಲ್ ಪುರಸ್ಕೃತ ಮಲಾಲ ಅವರ ಜೀವನವನ್ನು ಬೆಳ್ಳಿಪರದೆಯಲ್ಲಿ ಮೂಡಿಸುವ ಪ್ರಯತ್ನದಲ್ಲಿದೆ ಚಿತ್ರತಂಡ.

'ವೀರ್ ಜಾರಾ', 'ಪಿಂಜರ್', 'ಬಾಗ್ ಮಿಲ್ಖಾ ಬಾಗ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ದಿವ್ಯ ದತ್ತಾ ಕೂಡ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತುಲ್ ಕುಲಕರ್ಣಿ, ಪಂಕಜ್ ತ್ರಿಪಾಠಿ ಮತ್ತು ಮುಖೇಶ್ ರಿಷಿ ಸೇರಿದಂತೆ ಹಲವು ಪ್ರತಿಭಾವಂತ ನಟರು 'ಗುಲ್ ಮಕೈ'ಯಲ್ಲಿ ಬಣ್ಣ ಹಚ್ಚಲಿದ್ದಾರೆ.

ಬಾಲಿವುಡ್​ನಲ್ಲಿ ಇತ್ತೀಚೆಗೆ ಜೀವನಾಧಾರಿತ ಚಿತ್ರಗಳ ಟ್ರೆಂಡ್ ಶುರುವಾಗಿದ್ದು, ಈ ಸಾಲಿಗೆ ಹೊಸ ಸೇರ್ಪಡೆ ಮಲಾಲ ಅವರ 'ಗುಲ್ ಮಕೈ'. ಸಂಜಯ್ ದತ್ ಜೀವನ ಚರಿತ್ರೆಯನ್ನು ತಿಳಿಸುವ 'ಸಂಜು' ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದರ ಬೆನ್ನಲ್ಲೇ 'ಸೂರ್ಮ','ಮನಿಕರ್ನಿಕ' ಮತ್ತು 'ಗೋಲ್ಡ್' ಬಯೋಪಿಕ್​ ಚಿತ್ರಗಳು ತೆರೆಗೆ ಬರಲು ಸನ್ನದ್ದವಾಗಿದೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...