ತನಗಿಂತ 11 ವರ್ಷದ ಕಿರಿಯ ನಟನೊಂದಿಗೆ ವಿವಾಹವಾಗಲು ಹೊರಟ ಬಾಲಿವುಡ್​​​ ನಟಿ!

11 ವರ್ಷ ಕಿರಿಯವರಾದ ಅರ್ಜುನ್​​ರನ್ನು ಮಲೈಕಾ ಮದುವೆಯಾಗುತ್ತಿದ್ದಾರೆ. ಆದರೆ ಇವರಿಬ್ಬರ ವಯಸ್ಸಿನ ಅಂತರವಿದ್ದು, ಡೇಟಿಂಗ್​ ಬಗ್ಗೆ ಹಲವರು ಆಕ್ಷೇಪವನ್ನು ಹೊರಹಾಕಿದ್ದಾರೆ. ಅರ್ಜುನ್​ ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಬಗ್ಗೆಯೂ ಕಾಮೆಂಟ್​ ಮಾಡುತ್ತಿದ್ದಾರೆ.

news18
Updated:August 25, 2019, 3:05 PM IST
ತನಗಿಂತ 11 ವರ್ಷದ ಕಿರಿಯ ನಟನೊಂದಿಗೆ ವಿವಾಹವಾಗಲು ಹೊರಟ ಬಾಲಿವುಡ್​​​ ನಟಿ!
ಮಲೈಕಾ ಅರೋರಾ
  • News18
  • Last Updated: August 25, 2019, 3:05 PM IST
  • Share this:
ಪ್ರೀತಿಗೆ ಕಣ್ಣಿಲ್ಲ. ಪ್ರೀತಿಯ ಮುಂದೆ ವಯಸ್ಸು ದೊಡ್ಡದಲ್ಲ ಎಂಬುದಕ್ಕೆ ಬಾಲಿವುಡ್​​ನ​ ಅನೇಕ ಸ್ಟಾರ್​ ನಟರ ಉದಾಹರಣೆಗಳು ಕಣ್ಣೆದುರಿಗೆ ಬಹಳಷ್ಟಿವೆ. ನಟಿ ಪ್ರೀಯಾಂಕಾ ಚೋಪ್ರಾ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ನಿಕ್​ ಜೋನ್ಸ್​ರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಇದೀಗ ಬಾಲಿವುಡ್​ನ ಮತ್ತೊರ್ವ ನಟಿ ತನಗಿಂದ 11 ವರ್ಷದ ಕಿರಿಯ ನಟನನ್ನು ಪ್ರೀತಿಸಿ ಹಸೆಮಣೆ ಏರಲು ಸಿದ್ಧತೆಯಲ್ಲಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಡೇಟಿಂಗ್​ ಮೂಲಕ ಸುದ್ದಿಯಾಗುತ್ತಿರುವ ನಟಿ ಮಲೈಕಾ ಅರೋರಾ. ನಟ ಅರ್ಜುನ್​ ಕಪೂರ್​ ಜೊತೆ ಒಡನಾಟ ಹೊಂದಿರುವುದು ಎಲ್ಲರಿಗೂ ಗೊತ್ತೇಯಿದೆ.  ಇವರಿಬ್ಬರ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇದೆ. ಈ ಕುರಿತಂತೆ ಇವರಿಬ್ಬರು ಮಾಧ್ಯಮಗಳ ಮುಂದೆ ಸ್ಪಷ್ಟನೆಯನ್ನು ನೀಡಿದ್ದಾರೆ. ‘ಕಾಫಿ ವಿತ್​ ಕರಣ್‘​ ಕಾರ್ಯಕ್ರಮದಲ್ಲಿ ಇವರಿಬ್ಬರ ರಿಲೇಷನ್​ಶಿಪ್​​ ಬಯಲಾಗಿತ್ತು.

ಇತ್ತೀಚೆಗೆ ಮಲೈಕಾ, ನಟ ಅರ್ಜುನ್​ ಫೋಟೋವನ್ನು ಹಂಚಿಕೊಳ್ಳುವ ಮೂಲಕ ‘ಇವ ನನ್ನವ‘ ಎಂದು ಪೋಸ್ಟ್​ವೊಂದನ್ನು ಹಾಕಿದ್ದರು. ಈ ಕುರಿತಂತೆ ಶೀಘ್ರದಲ್ಲೇ ಇವರಿಬ್ಬರ ವಿವಾಹ ನಡೆಯಲಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಆದರೆ ವಿವಾಹ ಯಾವಾಗ? ಏನು ಎಂಬ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಇದನ್ನೂ ಓದಿ: ನೆರೆಪೀಡಿತ ಪ್ರದೇಶಗಳಲ್ಲಿ ನಾಳೆಯಿಂದ ಕೇಂದ್ರ ತಂಡದಿಂದ ಪರಿಶೀಲನೆ; ಸಿಎಂ ಯಡಿಯೂರಪ್ಪ

11 ವರ್ಷ ಕಿರಿಯವರಾದ ಅರ್ಜುನ್​​ರನ್ನು ಮಲೈಕಾ ಮದುವೆಯಾಗುತ್ತಿದ್ದಾರೆ. ಆದರೆ ಇವರಿಬ್ಬರ ವಯಸ್ಸಿನ ಅಂತರವಿದ್ದು, ಡೇಟಿಂಗ್​ ಬಗ್ಗೆ ಹಲವರು ಆಕ್ಷೇಪವನ್ನು ಹೊರಹಾಕಿದ್ದಾರೆ. ಅರ್ಜುನ್​ ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಬಗ್ಗೆಯೂ ಕಾಮೆಂಟ್​ ಮಾಡುತ್ತಿದ್ದಾರೆ. ಈ ಕುರಿತಂತೆ ಮಾಧ್ಯಮಗಳು ಕೂಡ ಮಲೈಕಾರನ್ನು ಪ್ರಶ್ನಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಲೈಕಾ ‘ಜನ ಇತರರ ಪ್ರತಿ ಕೆಲಸವನ್ನೂ ಪರಿಶೀಲಿಸುತ್ತಿರುತ್ತಾರೆ ಟೀಕಿಸುತ್ತಾರೆ. ಪ್ರತಿಯೊಬ್ಬ ಸೆಲೆಬ್ರಿಟಿಗೂ ಈ ಪರಿಸ್ಥಿತಿ ಬರುತ್ತದೆ. ಟೀಕೆಯನ್ನು ನಾವು ತಡೆಯಲು ಸಾಧ್ಯವಿಲ್ಲ. ಅವೆಲ್ಲಾ ಅವರ ವ್ಯಯಕ್ತಿಕ ಅಭಿಪ್ರಾಯಗಳು‘ ಎಂದಿದ್ದಾರೆ​. ಅಂತೆಯೇ, ತನಗಿಂತ ಕಿರಿಯನಾದರೂ ಪ್ರೀತಿ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ಮುನ್ನಿ ಬದ್ನಾಮ್​ ಹುಯೆ, ಛಯ್ಯಾ ಛಯ್ಯಾ, ಅನಾರ್ಕಲಿ, ಹಾಡುಗಳೊಂದಿಗೆ ಗರುತಿಸಿಕೊಂಡ ಮಲೈಕಾ 19 ವರ್ಷಗಳಿಂದ ಒಂದೇ ಒಂದು ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ನಟಿಸಲ್ಲ. ಈ ಬಗ್ಗೆಯೂ ಪ್ರತಿಕ್ರಿಸಿದ್ದು, ‘ಈ ವಿಚಾರಕ್ಕೆ ನಾನೆಂದು ನೊಂದಿಲ್ಲ. ನನಗೆ ಆಸಕ್ತಿ ಸಹ ಇಲ್ಲ‘ ಎಂದಿದ್ದಾರೆ.
First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ