ಬಾಲಿವುಡ್ ನಟಿ, ರೂಪದರ್ಶಿ, ಡ್ಯಾನ್ಸರ್ ಮಲೈಕಾ ಅರೋರಾ (Malaika Arora) ಅವರು ಪ್ರಸಿದ್ಧ ಸೆಲೆಬ್ರಿಟಿಗಳಲ್ಲಿ (Celebrity) ಒಬ್ಬರು. ಮಾಡೆಲ್ ಹಾಗೂ ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಈ ನಟಿ 90ರ ದಶಕದ ಜನರಿಂದ ಹಿಡಿದು ಇಂದಿಗೂ ತುಂಬಾ ಫೇಮಸ್. ಇನ್ನು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿಯರಲ್ಲಿ ಒಬ್ಬರು. ತಮ್ಮ ಯೋಗ ಕ್ಲಾಸ್ಗೆ (Yoga Class) ಬರುವಾಗ ಮಲೈಕಾ ತಪ್ಪದೆ ಕ್ಯಾಮೆರಾಗೆ (Camera) ಕಾಣಿಸಿಕೊಳ್ಳುತ್ತಾರೆ. ನಟಿ ಬಾಂದ್ರಾದಲ್ಲಿ ಹೊರಗಡೆ ಕಾಣಿಸಿಕೊಂಡಿದ್ದು ಆ ಸಂದರ್ಭ ನಟಿಯ ವಿಡಿಯೋ ಮಾಡಲಾಗಿದೆ. ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral) ಆಗಿದೆ.
ನಟಿ ಯಾವುದೋ ಒಂದು ಬಿಲ್ಡಿಂಗ್ನಲ್ಲಿ ಮೀಟಿಂಗ್ನಲ್ಲಿ ಭಾಗಿಯಾಗಲು ಬಂದ ಹಾಗಿತ್ತು. ಆ ಸಂದರ್ಭ ಆಟೋ ರಿಕ್ಷಾ ಚಾಲಕನೊಬ್ಬ ನಟಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಯಸಿದ್ದರು. ಎಲ್ಲರೂ ಸೆಲೆಬ್ರಿಟಿ ಜೊತೆ ಪೋಸ್ ಕೊಡುವಾಗ ಸ್ವಲ್ಪ ಚೆನ್ನಾಗಿ ಕಾಣಬೇಕೆಂದು ಬಯಸುತ್ತಾರೆ.
ಈ ಡ್ರೈವರ್ ಕೂಡಾ ಮಲೈಕಾ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಬಯಸಿದ್ದು ಸ್ವಲ್ಪ ಚೆನ್ನಾಗಿ ಕಾಣಬೇಕೆಂದು ಏನೋ ಸಿದ್ಧತೆ ಮಾಡಿಕೊಂಡಿದ್ದಾರೆ.ಆಡೋ ಡ್ರೈವರ್ ಸೆಲ್ಫಿಗೆ ಮೊದಲು ಕೂದಲು ಸರಿಪಡಿಸಿಕೊಳ್ಳಲು ಕೆಲವು ಸೆಕೆಂಡ್ಸ್ ಸಮಯ ತೆಗೆದುಕೊಂಡಿದ್ದಾನೆ. ಅಲ್ಲಿಯವರೆಗೂ ನಿಂತಿದ್ದ ಮಲೈಕಾ ಗಡಿಬಿಡಿಯಲ್ಲಿ ಫೋಟೋಗೆ ಪೋಸ್ ಕೊಡದೆ ಒಳಗೆ ಹೋದರು.
ನಟಿಯ ಈ ವರ್ತನೆಯನ್ನು ನೆಟ್ಟಿಗರು ಹಾಗೂ ಅಭಿಮಾನಿಗಳು ಇಷ್ಟಪಟ್ಟಿಲ್ಲ. ಇನ್ನೆರಡು ನಿಮಿಷ ಕಾಯುತ್ತಿದ್ದರೆ ಏನಾಗುತ್ತಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸಾಮಾನ್ಯ ಜನರಿಗೆ, ಬಾಲಿವುಡ್ ಅಭಿಮಾನಿಗಳಿಗೆ ಸೆಲೆಬ್ರಿಟಿಗಳ ಜೊತೆ ಒಂದು ಫೋಟೋ ಸಿಕ್ಕಿದರೆ ಅದು ಲೈಫ್ಟೈಮ್ ಮೆಮೊರಿ.
ಮಲೈಕಾ ಇನ್ನೊಂದು ನಿಮಿಷ ಕಾಯಬಹುದಿತ್ತು. ಎಲ್ಲರೂ ಸುಂದರವಾಗಿ ಕಾಣಲು ಬಯಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಿಂದಲೇ ಬಾಲಿವುಡ್ ಇರುವುದು. ಜನರಿಲ್ಲದೆ ಇದ್ದರೆ ಸೆಲೆಬ್ರಿಟಿಗಳೂ ಇಲ್ಲ. ಹಾಗಾಗಿ ಅವರು ಅಭಿಮಾನಿಗಳನ್ನು ಕೂಡಾ ಗೌರವಿಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: Samantha Ruth Prabhu: ಗಣಿತದಲ್ಲಿ ಸಮಂತಾ ಮಾರ್ಕ್ಸ್ ಎಷ್ಟು ಗೊತ್ತಾ?
ತೇರಾ ಕೀ ಕ್ಯಾಲ್ ಸಾಂಗ್ ಇವೆಂಟ್ನಲ್ಲಿ ಮಲೈಕಾ ಅವರು ಆಕರ್ಷಕವಾಗಿ ಡ್ರೆಸ್ ಮಾಡಿಕೊಂಡಿದ್ದರು. ನಟಿ ಮೆರೂನ್ ಬಣ್ಣದ ಸ್ಕಿನ್ಫಿಟ್ ಡ್ರೆಸ್ ಧರಿಸಿ ಸ್ಟೈಲಿಷ್ ಆಗಿ ರೆಡಿಯಾಗಿದ್ದರು. ಆದರೆ ಡ್ರೆಸ್ ಪಾರದರ್ಶಕವಾಗಿದ್ದ ಕಾರಣ ಟ್ರೋಲ್ ಆಗಿದ್ದಾರೆ.
ನಟಿ ಗುರು ರಾಂಧವ ಜೊತೆ ಕಾಣಿಸಿಕೊಂಡಿದ್ದು ಇವೆಂಟ್ನಲ್ಲಿ ಹಾಡಿಗೂ ಡ್ಯಾನ್ಸ್ ಮಾಡಿದ್ದಾರೆ. ನಟಿಯ ಸ್ಟೈಲಿಷ್ ಔಟ್ಫಿಟ್ ನೋಡಿ ನೆಟ್ಟಿಗರೆಲ್ಲ ಕಣ್ಣರಳಿಸಿದ್ದಾರೆ. ನಟಿ ಇವೆಂಟ್ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಈಕೆ ಚಡ್ಡಿ ಧರಿಸಿಕೊಂಡೇ ಎಲ್ಲಾ ಜಾಗದಲ್ಲಿಯೂ ಓಡಾಡುತ್ತಾರೆ. ಆಂಟಿ ಸ್ವಲ್ಪನಾದ್ರೂ ನಾಚಿಗೆ ಇಲ್ವೇ ಎಂದಿದ್ದಾರೆ. ಇನ್ನೂ ಕೆಲವರು ಗುರು ರಾಂಧವ ಬಗ್ಗೆ ಕಮೆಂಟ್ ಮಾಡಿ ನೀವಾದ್ರೂ ಫುಲ್ ಪ್ಯಾಂಟ್ ಧರಿಸೋದಲ್ವಾ ಎಂದು ಕೇಳಿದ್ದಾರೆ. ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಳಿಕ ಮಲೈಕಾ ಅರ್ಜುನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಯಾವುದೇ ಪಾರ್ಟಿಯಲ್ಲೂ ಮಲೈಕಾ ಜೊತೆ ಅರ್ಜುನ್ ಇರುತ್ತಾರೆ. ಇದೀಗ ಅರ್ಜುನ್ ಕಪೂರ್ ಜೊತೆ ನಟಿ ಮದುವೆ ಪ್ಲಾನ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ