Malaika Arora: ಕೊರೋನಾ ಲಸಿಕೆ ಪಡೆದ ನಟಿ ಮಲೈಕಾ ಅರೋರಾ ಜನತೆಗೆ ನೀಡಿದ ಸಂದೇಶ ಏನು ಗೊತ್ತಾ?

ಟಿವಿ ನಿರೂಪಕ ಹಾಗೂ ನಟ ಮನೀಶ್‌ ಪೌಲ್‌ ಹಾಗೂ ಸೊಹೇಲ್‌ ಖಾನ್ ಪತ್ನಿ ಸೀಮಾ ಖಾನ್ ಇವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಲೈಕಾ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. 15 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದರು.

ಕೊರೋನಾ ಲಸಿಕೆ ಪಡೆದ ನಟಿ ಮಲೈಕಾ ಅರೋರಾ

ಕೊರೋನಾ ಲಸಿಕೆ ಪಡೆದ ನಟಿ ಮಲೈಕಾ ಅರೋರಾ

 • Share this:
  ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ನಟಿ ಮಲೈಕಾ ಅರೋರಾ ಬಾಲಿವುಡ್‍ನ ಹಾಟ್ ಸುಂದರಿ. ಚೈಯ್ಯಾ ಚೈಯ್ಯಾ ಹಾಡಿಗೆ ಸೊಂಟ ಬಳುಕಿಸಿ ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ಮಲೈಕಾ ಮಾಡೆಲ್ ಕೂಡ ಹೌದು. ಇವರು ಶುಕ್ರವಾರ ಮೊದಲ ಕೋವಿಡ್ ಲಸಿಕೆ ಪಡೆದು ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಸಂದೇಶ ರವಾನಿಸಿದ್ದಾರೆ.

  ಈ ಕುರಿತು ಸ್ವತಃ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಜೀವವನ್ನು ಲೆಕ್ಕಿಸದೆ ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಮೊದಲು ಲಸಿಕೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ಸರ್ಕಾರ 45-59 ವರ್ಷದೊಳಗಿನವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಘೊಷಣೆ ಮಾಡಿರುವ ಕಾರಣ 47 ವರ್ಷದ ಮಲೈಕಾ ಕೋವಿಡ್ ಲಸಿಕೆ ಪಡೆಯುವ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

  ‘ನಾನು ಕೋವಿಡ್ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡೆ. ಕೊರೋನಾ ವಾರಿಯರ್ಸ್ ಲಸಿಕೆ ಪಡೆದುಕೊಳ್ಳಿ, ಕೊರೋನಾ ವೈರಸ್ ಜೊತೆಗಿನ ನಮ್ಮ ಹೋರಾಟವನ್ನು ಜಯಿಸೋಣ. ಲಸಿಕೆ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ. ನಗುಮೊಗದಿಂದಲೇ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‍ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾನು ಕೂಡ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಸಮರ್ಥಳು ಎಂದು ಬರೆದು ಕೊರೋನಾ ವಾರಿಯರ್ಸ್ ಮೇಲೆ ಅವರಿಗಿರುವ ಕಾಳಜಿಯನ್ನು ಪೋಸ್ಟ್ ಮೂಲಕ ಬಿಂಬಿಸಿದ್ದಾರೆ.

  Yuvarathnaa Movie: ಹುಬ್ಬಳ್ಳಿಯಲ್ಲಿ ಯುವರತ್ನ ಸಿನಿಮಾಗೆ ವಿಭಿನ್ನ ಸ್ವಾಗತ; ವಿಕಲಚೇತನರಿಗೆ ಕೃತಕ ಕಾಲು ಜೋಡಿಸಿ, ಉಚಿತ ಟಿಕೆಟ್ ವಿತರಣೆ

  ಟಿವಿ ನಿರೂಪಕ ಹಾಗೂ ನಟ ಮನೀಶ್‌ ಪೌಲ್‌ ಹಾಗೂ ಸೊಹೇಲ್‌ ಖಾನ್ ಪತ್ನಿ ಸೀಮಾ ಖಾನ್ ಇವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಲೈಕಾ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. 15 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದರು. ಇನ್ನು ಕೆಲವು ದಿನಗಳ ಬಳಿಕ ಮಲೈಕಾ ಅವರ ಬಾಯ್‍ಫ್ರೆಂಡ್ ಹಾಗೂ ನಟ ಅರ್ಜುನ್ ಕಪೂರ್‌ಗೆ ಕೂಡ ಕೋವಿಡ್ ಕಾಣಿಸಿಕೊಂಡಿತ್ತು. ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಮಲೈಕಾ ರೀತಿ ಹಲವು ಸೆಲೆಬ್ರೆಟಿಗಳು ಕೋ ವ್ಯಾಕ್ಸಿನ್ ಪಡೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ತುಂಬಾ ಸಂತೋಷಕರ ವಿಚಾರ.

  ತಮ್ಮ ಫಿಟ್‍ನೆಸ್ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುವ ಮಲೈಕಾ ಯೋಗದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಫಿಟ್‍ನೆಸ್ ಕಾಯ್ದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಇನ್ನು ಅಡುಗೆಯಲ್ಲೂ ತುಂಬಾ ಚ್ಯೂಸಿಯಾಗಿರುವ ಇವರು ವಿವಿಧ ರೀತಿಯ ಅಡುಗೆಯ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ 50 ಸಾವಿರದ ಕ್ರಾಪ್ ಟಾಪ್ ತೊಟ್ಟು ಫೋಟೋಗೆ ಪೋಸ್ ಕೊಟ್ಟು ಸುದ್ದಿಯಾಗಿದ್ದರು ಮಲೈಕಾ.

  ಮಹಾರಾಷ್ಟ್ರ ಮೂಲದವರಾದ ಮಲೈಕಾ ನಾಚ್ ಬಲಿಯೇ ಎಂಬ ಟಿವಿ ಶೋದಲ್ಲೂ ತಿರ್ಪುಗಾರರಾಗಿ ಮಿಂಚಿದ್ದರು. 1998ರಲ್ಲಿ ಅರ್ಬಜ್ ಖಾನ್ ಅವರನ್ನು ಮದುವೆಯಾಗಿದ್ದ ಇವರು 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ದಬಾಂಗ್, ಇಎಂಐ, ಹ್ಯಾಪಿ ನ್ಯೂ ಇಯರ್, ಕಾಂತೆ, ಮಾ ತುಜೆ ಸಲಾಂ, ಹೌಸ್‍ಫುಲ್, ಗಬ್ಬರ್ ಸಿಂಗ್ ಹೀಗೆ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ ಮಲೈಕಾಗೆ ದಿಲ್ ಸೆ ದಿಲ್ ಚಿತ್ರ ಚೈಯಾ ಚೈಯಾ
  ಹಾಡು ಹೆಚ್ಚು ಖ್ಯಾತಿ ತಂದುಕೊಟ್ಟಿತು.
  Published by:Latha CG
  First published: