• Home
  • »
  • News
  • »
  • entertainment
  • »
  • Malaika Arora: ಬ್ಯೂಟಿಫುಲ್ ಫೇಸ್ ನಿಮ್ಮದಾಗಲು ಈ 3 ಆಸನಗಳು ಸಾಕಂತೆ, ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಮಲೈಕಾ

Malaika Arora: ಬ್ಯೂಟಿಫುಲ್ ಫೇಸ್ ನಿಮ್ಮದಾಗಲು ಈ 3 ಆಸನಗಳು ಸಾಕಂತೆ, ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಮಲೈಕಾ

ಮಲೈಕಾ ಅರೋರಾ

ಮಲೈಕಾ ಅರೋರಾ

ಮಲೈಕಾ ತನ್ನ ಅಭಿಮಾನಿಗಳಿಗೆ ಸಹಾಯ ಮಾಡಲು ಕೆಲವು ಯೋಗ ಭಂಗಿಗಳನ್ನು ಹೇಳಿಕೊಟ್ಟಿದ್ದಾರೆ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇದು ಸಹಕಾರಿಯಾಗಲಿದೆ

  • Share this:

48ರ ಪ್ರಾಯದಲ್ಲೂ ತಮ್ಮ ಫಿಟ್ನೆನೆಸ್‌,(Fitness) ಗ್ಲಾಮರ್‌ನಿಂದ ಅಭಿಮಾನಿಗಳನ್ನು ತನ್ನತ್ತ ಸೆಳೆಯುವ ನಟಿ ಮಲೈಕಾ ಅರೋರಾ. (Malaika Arora) ಕೆಲವೊಮ್ಮೆ ತಮ್ಮ ಫೋಟೋ, ಸ್ಟೈಲ್‌ನಿಂದಾಗಿ ಪಡ್ಡೆ ಹುಡುಗರ ಮನಸ್ಸನ್ನು ಕದಿಯುವುದುಂಟು. ಬಾಲಿವುಡ್‌ನಲ್ಲಿ(Bollywood) ತಮ್ಮದೇ ಶೈಲಿ ನಟನೆ, ಐಟಂ ನೃತ್ಯದ ಮೂಲಕ ಗುರುತಿಸಿಕೊಂಡಿರುವ ಇವರಿಗೆ ಸಖತ್ ಡಿಮ್ಯಾಂಡ್ ಇದೆ.ಫಿಟ್ನೆಸ್ ಕುರಿತಾಗಿ ಹೆಚ್ಚು ಕಾಳಜಿ ವಹಿಸುವ ಮಲೈಕಾ ಜಿಮ್‌ನಲ್ಲಿ ಬೆವರು ಇಳಿಸಿದಂತೆಯೇ, ಯೋಗದಲ್ಲೂ ಕೂಡ ನಿಸ್ಸೀಮರು. ಫಿಟ್ನೆಸ್ ವಿಚಾರದಲ್ಲಿ ಮಾತ್ರ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದ ಮಲೈಕಾ ಸುಂದರ (Beautiful Body) ದೇಹಾಕಾರ ಹೊಂದಿದ್ದು, ಹದಿಹರೆಯದ ಹುಡುಗಿಯರನ್ನು ನಾಚಿಸುವಂತಿದ್ದಾರೆ.


ವಿಡಿಯೋ ಪೋಸ್ಟ್
2020ರಲ್ಲಿ ಮೊದಲ ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದ ಶೂಟಿಂಗ್ ಕಾರ್ಯಗಳು ಸ್ವಲ್ಪ ಕಾಲ ಸ್ಥಗಿತಗೊಂಡವು. ಆಗ ಅವರು ಕೊಂಚವು ತಮ್ಮ ಸಮಯವನ್ನು ವ್ಯರ್ಥಮಾಡದೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೂ ಸಮಯದ ಸದುಪಯೋಗದ ಪಾಠ ಕಲಿಸಿದ್ದಾರೆ ಎನ್ನಬಹುದು.


ಮಾಡೆಲ್ ಮತ್ತು ನರ್ತಕಿ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆನ್‌ಲೈನ್‌ನಲ್ಲಿ ತಮ್ಮ ಸೃಜನಾತ್ಮಕ ಮಾರ್ಗಗಳ ಮೂಲಕ ಫುಲ್ ಬಿಜಿಯಾಗಿಬಿಟ್ಟರು. ಫಿಟ್ನೆಸ್ ಉತ್ಸಾಹಿಯು ಏಕಕಾಲದಲ್ಲಿ ಅಡುಗೆ ಮಾಡುವ ವಿಡಿಯೋಗಳನ್ನು ಪೋಸ್ಟ್ ಮಾಡಿದರು.


ಇದನ್ನೂ ಓದಿ: Arjun Kapoor-Malaika: ಬ್ರೇಕಪ್​ ರೂಮರ್​ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಲೈಕಾ-ಅರ್ಜುನ್​.. ಅಂತೆ-ಕಂತೆಗಳಿಗೆ ಫುಲ್​ಸ್ಟಾಪ್​!


ಫಿಟ್ನೆಸ್ ರಹಸ್ಯ
ಕ್ವಾರಂಟೈನ್ ತನ್ನ ವ್ಯಾಯಾಮದ ಅಭ್ಯಾಸಕ್ಕೆ ತಡೆಯೊಡ್ಡುವುದಿಲ್ಲ ಎಂದು ಹೇಳುವ ಮೂಲಕ ಜನರಿಗೆ ಅನುಕೂಲವಾಗುವ ಮನೆಯಲ್ಲೇ ಮಾಡಬಹುದಾದ ಕೆಲವು ಆಸನಗಳನ್ನು ಸಹ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್ನೆಸ್ ರಹಸ್ಯ ಬಿಚ್ಚಿಟ್ಟರು. ತನ್ನ ಇತ್ತೀಚಿನ ವಿಡಿಯೋದ ಮೂಲಕ, ಮಲೈಕಾ ತನ್ನ ಅಭಿಮಾನಿಗಳಿಗೆ ಸಹಾಯ ಮಾಡಲು ಕೆಲವು ಯೋಗ ಭಂಗಿಗಳನ್ನು ಹೇಳಿಕೊಟ್ಟಿದ್ದಾರೆ. ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ನಾವೆಲ್ಲರೂ ನೈಸರ್ಗಿಕ ಮಾರ್ಗಗಳನ್ನು ಹುಡುಕುವುದಿಲ್ಲವೇ?" ಇನ್ಸ್ಟಾಗ್ರಾಮ್‌ನಲ್ಲಿ ಮಲೈಕಾ ಕೇಳಿ, ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಲುವ ಕೆಲವು ಆಸನಗಳನ್ನು ಹೇಳಿಕೊಟ್ಟಿದ್ದಾರೆ.


ಕ್ಲಾಸಿಕ್ ಆಲ್-ಕಪ್ಪು ಆರಾಮದಾಯಕವಾದ ಉಡುಪನ್ನು ಧರಿಸಿ ಅಚ್ಚುಕಟ್ಟಾಗಿ ಜಡೆ ಹಾಕಿದ ಅವರು "ಮಲೈಕಾ ಅವರ ಮೂವ್ ಆಫ್ ದಿ ವೀಕ್" ಎಂದು ಕರೆಯುವ ತನ್ನ ನೆಚ್ಚಿನ ಆಸನಗಳನ್ನು ವಿವರಿಸುವಾಗ, ಭಂಗಿಗಳನ್ನು ಬಹಿರಂಗಪಡಿಸಿದರು.


ವಿಡಿಯೋ ನೋಡಿ:
ಮಲೈಕಾ ಹಂಚಿಕೊಂಡ ಮೂರು ಮುಖದ ವ್ಯಾಯಾಮಗಳು:


1. ಬಲೂನ್ ಭಂಗಿ: ಯೋಗ ಉತ್ಸಾಹಿಗಳ ಪ್ರಕಾರ ಇದು ಮುಖದ ಸ್ನಾಯುಗಳಿಗೆ ಗೋ-ಟು ಪೋಸ್ ಆಗಿದೆ. ಬಲೂನ್ ಭಂಗಿಯು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಮುಖವನ್ನು ಬಲೂನಿನಾಕಾರವಾಗಿ ಗಾಳಿಯನ್ನು ಬಾಯಿಯಲ್ಲಿ ತುಂಬಿಸಿಕೊಂಡು ನಂತರ ಬಿಡುವುದು. ಇದುವೇ ಬಲೂನ್ ಭಂಗಿ.


2. ಫೇಸ್ ಟ್ಯಾಪಿಂಗ್ ಭಂಗಿ: ಟ್ಯಾಪಿಂಗ್ ಭಂಗಿಯು ಮುಖವು ವಯಸ್ಸಾದ ಮತ್ತು ಸುಕ್ಕುಗಳಿರುವಂತೆ ಕಾಣುವುದನ್ನು ತಡೆಯುತ್ತದೆ. ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಿ, ಈ ಭಂಗಿಯು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.


3. ಮೀನಿನ ಭಂಗಿ: ಇದು ಕುತ್ತಿಗೆಯ ಭಾಗವನ್ನು ವಿಸ್ತರಿಸುತ್ತದೆ, ತುಟಿಯನ್ನು ಮುಂದಕ್ಕೆ ಮಾಡಿ ಪೌಟ್ ರೀತಿಯಲ್ಲಿ ಇರಿಸಿಕೊಳ್ಳಬೇಕು. ಇದರಿಂದ ಕುತ್ತಿಗೆ, ಕೆನ್ನೆಯ ಭಾಗದಲ್ಲಿ ಕೊಂಚ ನೋವಿನ ಅನುಭವವಾಗುತ್ತದೆ. ಇದು ಮುಖದ ಆಕಾರಕ್ಕೆ ಉತ್ತಮವಾದ ಭಂಗಿಯಾಗಿದೆ.


ಇದನ್ನೂ ಓದಿ: Malaika Arora: 48ರಲ್ಲೂ ಸಖತ್​ ಹಾಟ್​ ಬಾಲಿವುಡ್​ ಮುನ್ನಿ: ಬಿಕಿನಿ ಫೋಟೋ ನೋಡಿದ್ರೆ ತಲೆ ತಿರುಗುತ್ತೆ..!


ಈ ತಿಂಗಳ ಆರಂಭದಲ್ಲಿ, ಮಲೈಕಾ ಕೋರ್ ಸ್ನಾಯುಗಳ ಮೇಲೆ ಕೇಂದ್ರೀಕರಿಸುವ ಕೆಲವು ಪ್ರಮುಖ ಆಸನಗಳನ್ನು ತೋರಿಸಿದರು. ತೂಕ ನಷ್ಟದ ಪ್ರಯಾಣವನ್ನು ಹೆಚ್ಚಿಸಲು ಸಹಾಯ ಮಾಡಲು ವಸಿಷ್ಠಾಸನ (ಪಾರ್ಶ್ವದ ಹಲಗೆ ಭಂಗಿ), ಭುಜಂಗಾಸನ (ನಾಗರ ಭಂಗಿ) ಮತ್ತು ನೌಕಾಸನ (ದೋಣಿ ಭಂಗಿ) ಗಳನ್ನು ಶಿಫಾರಸು ಮಾಡಿದರು. "ಕೋರ್ ಸ್ನಾಯುಗಳು ದೇಹದ ಒಂದು ಭಾಗವಾಗಿದ್ದು ಅದು ಎಲ್ಲವನ್ನೂ ಸಮತೋಲನಗೊಳಿಸುತ್ತದೆ ಎಂದು ಅವರು ವಿವರಿಸಿದರು.

Published by:vanithasanjevani vanithasanjevani
First published: