• Home
  • »
  • News
  • »
  • entertainment
  • »
  • Malaika Arora: ಮಾಜಿ ಪತಿ ಬಗ್ಗೆ ಮಲೈಕಾ ಮಧುರ ಮಾತುಗಳು! ನಟಿ ಭಾವುಕ

Malaika Arora: ಮಾಜಿ ಪತಿ ಬಗ್ಗೆ ಮಲೈಕಾ ಮಧುರ ಮಾತುಗಳು! ನಟಿ ಭಾವುಕ

ಅರ್ಬಾಜ್ ಖಾನ್-ಮಲೈಕಾ ಅರೋರಾ

ಅರ್ಬಾಜ್ ಖಾನ್-ಮಲೈಕಾ ಅರೋರಾ

ನಾನು ಮದುವೆಯಾಗಲು ಬಯಸುತ್ತೇನೆ, ನೀವು ಸಿದ್ದರಿದ್ದೀರಾ ಅಂತ ಅರ್ಬಾಜ್ ಅವರನ್ನು ಕೇಳಿದೆ. ಅದಕ್ಕೆ ಅವರು ಬಹಳ ಮಧುರವಾಗಿ ನೀನು ದಿನ ಮತ್ತು ಸ್ಥಳವನ್ನು ಆರಿಸಿಕೋ ಎಂದು ನನಗೆ ಹೇಳಿದರು ಎಂದು ನೆನಪಿಸಿಕೊಂಡಿದ್ದಾರೆ ಮಲೈಕಾ.

  • Trending Desk
  • Last Updated :
  • Bangalore, India
  • Share this:

ಈ ಚಿತ್ರೋದ್ಯಮದಲ್ಲಿರುವ ನಟ (Actor) ಮತ್ತು ನಟಿಯರ (Actress) ಮಧ್ಯೆ ಯಾವಾಗ ಪ್ರೀತಿ (Love) ಹುಟ್ಟುತ್ತದೆಯೋ, ಯಾವಾಗ ಮದುವೆ (Marriage) ಆಗುತ್ತಾರೋ ಮತ್ತು ಯಾವಾಗ ಬೇರ್ಪಡುತ್ತಾರೋ ಒಂದು ಅರ್ಥವಾಗಲ್ಲ. ಅದರಲ್ಲೂ ಈ ಬಾಲಿವುಡ್ (Bollywood) ಸ್ಟಾರ್ ದಂಪತಿಗಳಿಗಂತೂ ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವುದು ಮತ್ತು ಕೆಲವು ವರ್ಷಗಳ ನಂತರ ಹೊಂದಾಣಿಕೆ ಆಗುತ್ತಿಲ್ಲ ಅನ್ನೋ ಕಾರಣ ನೀಡಿ ಬೇರ್ಪಡುವುದು ತುಂಬಾನೇ ಸಾಮಾನ್ಯವಾದ ಅಭ್ಯಾಸವಾದಂತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಬಾಲಿವುಡ್ ನಲ್ಲಿ ಈಗಾಗಲೇ ನಾವು ಅನೇಕ ಸ್ಟಾರ್ ದಂಪತಿಗಳು ವಿಚ್ಛೇದನವನ್ನು ಪಡೆದಿರುವುದನ್ನು ನೋಡಿದ್ದೇವೆ. ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ತಮ್ಮ ಮಾಜಿ ಪತಿ ಅರ್ಬಾಜ್ ಖಾನ್ (Arbaaz Khan) ಅವರೊಂದಿಗೆ ಅನೇಕ ವರ್ಷಗಳ ಕಾಲ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಂಡಿದ್ದಾರೆ.




1998 ರಲ್ಲಿ ಮದುವೆಯಾದ ಮಲೈಕಾ ಮತ್ತು ಅರ್ಬಾಜ್


ಮಲೈಕಾ ಮತ್ತು ಅರ್ಬಾಜ್ ಇಬ್ಬರು 1998 ರಲ್ಲಿ ಮದುವೆಯಾಗಿದ್ದರು. ಸುಮಾರು 18 ವರ್ಷಗಳ ನಂತರ ಅವರು ಅಧಿಕೃತವಾಗಿ ವಿಚ್ಛೇದನ ಪಡೆದರು. ‘ಮೂವಿಂಗ್ ಇನ್ ವಿತ್ ಮಲೈಕಾ’ ಶೋ ನ ಮೊದಲ ಸಂಚಿಕೆಯಲ್ಲಿ ನಟಿ ಮಲೈಕಾ ಅವರು ತಮ್ಮ ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ತೆರೆದಿಟ್ಟರು.




ಮಲೈಕಾ ತನ್ನ ತಂದೆ ತಾಯಿಯ ಮನೆಯಿಂದ ಹೇಗಾದರೂ ಮಾಡಿ ಹೊರಬರಬೇಕೆಂದು ಬಯಸಿದ್ದರಿಂದಲೇ ಅರ್ಬಾಜ್ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಫರಾಹ್ ಖಾನ್ ಅವರೊಂದಿಗೆ ಮಾತನಾಡುವಾಗ, ಮಲೈಕಾ ಅವರು ಅರ್ಬಾಜ್ ಅವರನ್ನು ಮೊದಲು ಪ್ರಪೋಸ್ ಮಾಡಿದವರು ತಾವೇ ಎಂದು ಬಹಿರಂಗಪಡಿಸಿದರು.


"ಅರ್ಬಾಜ್ ಗೆ ಪ್ರಪೋಸ್ ಮಾಡಿದ್ದು ನಾನೇ. ಯಾರಿಗೂ ಇದರ ಬಗ್ಗೆ ಗೊತ್ತಿಲ್ಲ. ನಮ್ಮಿಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಅರ್ಬಾಜ್ ಅಲ್ಲ” ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Nora Fatehi: ಕೆನಡಾದಲ್ಲಿ ಹುಟ್ಟಿ ಭಾರತೀಯ ಡ್ಯಾನ್ಸ್ ಪ್ರೇಮಿಗಳ ಹಾಟ್ ಫೇವರೇಟ್ ಆದ ದಿಲ್​ಬರ್ ಚೆಲುವೆ


“ನಾನು ಮದುವೆಯಾಗಲು ಬಯಸುತ್ತೇನೆ, ನೀವು ಸಿದ್ದರಿದ್ದೀರಾ ಅಂತ ಅರ್ಬಾಜ್ ಅವರನ್ನು ಕೇಳಿದೆ. ಅದಕ್ಕೆ ಅವರು ಬಹಳ ಮಧುರವಾಗಿ ನೀನು ದಿನ ಮತ್ತು ಸ್ಥಳವನ್ನು ಆರಿಸಿಕೋ” ಎಂದು ನನಗೆ ಹೇಳಿದರು.


ವೈವಾಹಿಕ ಜೀವನದಲ್ಲಿ ಏನು ತಪ್ಪಾಗಿದೆ ಅನ್ನೋದರ ಬಗ್ಗೆ ಸಹ ಹೇಳಿಕೊಂಡ ಮಲೈಕಾ


ಅರ್ಬಾಜ್ ಮತ್ತು ಮಲೈಕಾ ಅವರಿಬ್ಬರ ವೈವಾಹಿಕ ಜೀವನದಲ್ಲಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ಸಹ ಅವರು ಮತ್ತಷ್ಟು ತೆರೆದಿಟ್ಟರು. ಮಲೈಕಾ ಅವರು "ನಾನು ತುಂಬಾ ಚಿಕ್ಕವಳಾಗಿದ್ದೆ. ನಾನು ಕೂಡ ಸಮಯಕ್ಕೆ ತಕ್ಕಂತೆ ಬದಲಾದೆ.


ನಾನು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಇಷ್ಟಪಡಲು ಶುರು ಮಾಡಿದೆ. ಇಂದು ನಾವಿಬ್ಬರೂ ತುಂಬಾನೇ ತಿಳಿದುಕೊಂಡ ಮತ್ತು ಅರ್ಥ ಮಾಡಿಕೊಂಡ ಇಬ್ಬರು ವ್ಯಕ್ತಿಗಳಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.


‘ದಬಂಗ್’ ಚಿತ್ರ ಬಿಡುಗಡೆಯಾಗುವವರೆಗೂ ಎಲ್ಲವೂ ಚೆನ್ನಾಗಿತ್ತು


ದಬಂಗ್ ಚಿತ್ರ ಬಿಡುಗಡೆಯಾಗುವವರೆಗೂ ಅರ್ಬಾಜ್ ಮತ್ತು ಮಲೈಕಾ ಅವರ ಮಧ್ಯೆ ವಿಷಯಗಳು ಚೆನ್ನಾಗಿಯೇ ಇದ್ದವು. ಆದರೆ ಚಿತ್ರದ ಬಿಡುಗಡೆಯ ನಂತರ ದಂಪತಿಗಳಿಬ್ಬರಲ್ಲಿ ತುಂಬಾ ಕಿರಿಕಿರಿಗಳು ಶುರುವಾದವು. ಇಬ್ಬರು ಬೇರ್ಪಡಲು ಪ್ರಾರಂಭಿಸಿದರು ಎಂದು ಖುದ್ದು ಮಲೈಕಾ ಅವರೇ ಹಂಚಿಕೊಂಡರು. ದಬಂಗ್ ನಂತರ ಅವರಿಬ್ಬರು ಬೇರ್ಪಡಲು ಪ್ರಾರಂಭಿಸಿದ್ದು ಎಂದು ಫರಾಹ್ ಸಹ ಒಪ್ಪಿಕೊಂಡರು.


ಕೊನೆಯದಾಗಿ ಶೋ ನಲ್ಲಿ ಮಲೈಕಾ ಅವರು ಅರ್ಬಾಜ್ ಖಾನ್ ಒಬ್ಬ ಅದ್ಭುತ ವ್ಯಕ್ತಿ ಎಂಬುದನ್ನು ಹೇಳಲು ಮರೆಯಲಿಲ್ಲ. ಚಿಕಿತ್ಸೆಯ ನಂತರ ಅರ್ಬಾಜ್ ಅವರು ತಮಗಾಗಿ ಜೊತೆಗೆ ನಿಂತಿದ್ದ ದ್ದರು ಎಂದು ಹೇಳುತ್ತಾ ಆ ಸಮಯವನ್ನು ನೆನಪಿಸಿಕೊಂಡರು.

Published by:Divya D
First published: