• Home
  • »
  • News
  • »
  • entertainment
  • »
  • Malaika Arora: ನಾನೇನು ದಡ್ಡಿಯಲ್ಲ, ಯಾವಾಗ ಯಾವ ರೀತಿ ಡ್ರೆಸ್ ಮಾಡ್ಕೊಬೇಕು ಅಂತ ಗೊತ್ತಿದೆ - ಹೀಗೆ ಹೇಳಿದ್ದು ಯಾರಿಗೆ?

Malaika Arora: ನಾನೇನು ದಡ್ಡಿಯಲ್ಲ, ಯಾವಾಗ ಯಾವ ರೀತಿ ಡ್ರೆಸ್ ಮಾಡ್ಕೊಬೇಕು ಅಂತ ಗೊತ್ತಿದೆ - ಹೀಗೆ ಹೇಳಿದ್ದು ಯಾರಿಗೆ?

ಮಲೈಕಾ ಅರೋರಾ

ಮಲೈಕಾ ಅರೋರಾ

ಮಲೈಕಾ ಅವರು “ನಾನು ಅಷ್ಟೊಂದು ಸಿಲ್ಲಿ ಮತ್ತು ಮೂರ್ಖಳಲ್ಲ, ನನಗೆ ಯಾವ ಬಟ್ಟೆ ಚೆನ್ನಾಗಿ ಕಾಣುತ್ತದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದ್ದಾರೆ.

  • Share this:

ಬಾಲಿವುಡ್ ನಟಿ (Bollywood actress)ಮಲೈಕಾ ಅರೋರಾ (Malaika Arora) ಯಾವುದಾದರೂ ಒಂದು ವಿಷಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಟಿವಿ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ತಪ್ಪಾಗುವುದಿಲ್ಲ.ಈ ನಟಿ ಒಮ್ಮೆ ಆಕೆಯು ಬೇರೆಯ ನಟನೊಂದಿಗೆ ಹೊಂದಿದಂತಹ ಸಂಬಂಧದ (Relationship)ಬಗ್ಗೆ ಸುದ್ದಿಯಲ್ಲಿದ್ದರೆ, ಇನ್ನೊಮ್ಮೆ ಆಕೆ ಹಾಕುವಂತಹ ಮಾದಕ ಉಡುಪುಗಳಿಂದ ಸುದ್ದಿಯಲ್ಲಿರುತ್ತಾರೆ. ಒಟ್ಟಿನಲ್ಲಿ ಈ ನಟಿ ತುಂಬಾನೇ ಸುದ್ದಿಯಲ್ಲಿ ಇರುವ ನಟಿಯರ ಸಾಲಿನಲ್ಲಿ ಬರುವಂತಹ ನಟಿ ಎಂದು ಹೇಳಬಹುದು. ಇತ್ತೀಚೆಗೆ ತನ್ನ ಹೊಸ ಬಾಯ್ ಫ್ರೆಂಡ್ ಬಾಲಿವುಡ್ ನಟ ಅರ್ಜುನ್(Arjun Kapoor) ಕಪೂರ್ ಜೊತೆಗೆ ಬ್ರೇಕಪ್ ಆಗಿರುವ ವದಂತಿಯಿಂದ ಚರ್ಚೆಯಲ್ಲಿರುವ(Discussion) ನಟಿ ಮಲೈಕಾ ತಾನು ಹಾಕಿಕೊಳ್ಳುವ ತನ್ನ ಉಡುಗೆಗಳಿಗಾಗಿ ಸದಾ ಟೀಕೆಗೆ ಒಳಗಾಗುವ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ ನೋಡಿ.


ನಾನು ಮೂರ್ಖಳಲ್ಲ
ಮಹಿಳೆಯರು ಯಾವಾಗಲೂ ತಾವು ಹಾಕುವಂತಹ ಬಟ್ಟೆಗಳಿಂದ ನಿರ್ಣಯಿಸಲ್ಪಡುತ್ತಾರೆ” ಎಂದು ಹೇಳಿರುವ ಮಲೈಕಾ ಡ್ರೆಸ್ಸಿಂಗ್ ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಜನರು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂದು ಇತರರಿಗೆ ಹೇಳುವ ಬದಲು ತಾವು ಬದುಕಬೇಕು ಮತ್ತು ಬದುಕಲು ಬಿಡಬೇಕು” ಎಂದು ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ, ಮಲೈಕಾ ಅವರು “ನಾನು ಅಷ್ಟೊಂದು ಸಿಲ್ಲಿ ಮತ್ತು ಮೂರ್ಖಳಲ್ಲ, ನನಗೆ ಯಾವ ಬಟ್ಟೆ ಚೆನ್ನಾಗಿ ಕಾಣುತ್ತದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದ್ದಾರೆ.


“ಯಾವ ಬಟ್ಟೆಯನ್ನು ಧರಿಸಿದರೆ ನಾವು ತುಂಬಾನೇ ಆರಾಮದಾಯಕವಾಗಿ ಇರುತ್ತೇವೆಯೋ ಅದನ್ನೇ ಧರಿಸುವುದು ಸೂಕ್ತವಲ್ಲವೇ” ಎಂದು ಅವರು ಹೇಳಿದರು. ಮನರಂಜನೆ ಮಾಧ್ಯಮದ ಜೊತೆ ಮಾತನಾಡಿದ ಮಲೈಕಾ ಅವರು “ಯಾವಾಗಲೂ ನನ್ನ ಬಟ್ಟೆಯ ಬಗ್ಗೆಯೇ ಪ್ರಶ್ನಿಸಲಾಗುತ್ತದೆ” ಎಂದು ಹೇಳಿದರು.


ಇದನ್ನೂ ಓದಿ: Arjun Kapoor-Malaika: ಬ್ರೇಕಪ್​ ರೂಮರ್​ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಲೈಕಾ-ಅರ್ಜುನ್​.. ಅಂತೆ-ಕಂತೆಗಳಿಗೆ ಫುಲ್​ಸ್ಟಾಪ್​!


ವೈಯಕ್ತಿಕ ಆಯ್ಕೆಗಳು
ಚಿತ್ರೋದ್ಯಮದಲ್ಲಿ ಒಬ್ಬ ಮಹಿಳೆ ಯಾವಾಗಲೂ ತಾನು ಧರಿಸುವ ಸ್ಕರ್ಟ್‌ನ ಉದ್ದದಿಂದ ನಿರ್ಣಯಿಸಲ್ಪಟ್ಟಿದ್ದಾಳೆ, ನನ್ನ ಉಡುಪುಗಳ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದರ ಪ್ರಕಾರ ನಾನು ನನ್ನ ಜೀವನ ನಡೆಸಲು ಸಾಧ್ಯವಿಲ್ಲ. ಡ್ರೆಸ್ಸಿಂಗ್ ತುಂಬಾ ವೈಯಕ್ತಿಕ ಆಯ್ಕೆಯಾಗಿದೆ. ನಿಮಗೆ ಒಂದು ರೀತಿಯ ಬಟ್ಟೆಗಳು ಇಷ್ಟವಾಗಬಹುದು ಮತ್ತು ಅದು ನನಗೆ ಇಷ್ಟವಾಗದೆ ಇರಬಹುದು. ನಾನು ಅದನ್ನು ಯಾರಿಗೂ ಮತ್ತು ಎಲ್ಲರಿಗೂ ಹೇಳಿಕೊಂಡು ಕೂರಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ಆಯ್ಕೆಗಳು ನನ್ನ ವೈಯಕ್ತಿಕ ಆಯ್ಕೆಗಳಾಗಿರಬೇಕು, ಆದ್ದರಿಂದ ಬೇರೊಬ್ಬರು ನೀವು ಈ ರೀತಿಯ ಬಟ್ಟೆಗಳನ್ನು ಏಕೆ ಧರಿಸುತ್ತೀರಿ ಎಂದು ಕೇಳುವುದು ಒಳ್ಳೆಯದಲ್ಲ" ಎಂದು ಅವರು ಹೇಳಿದರು.


ದೇಹಕ್ಕೆ ಆರಾಮವೆನಿಸುವ ಬಟ್ಟೆಗಳನ್ನೇ ಧರಿಸುತ್ತೇನೆ
"ನನಗೆ ಯಾವ ಬಟ್ಟೆ ಹಾಕಿದರೆ ಆರಾಮದಾಯಕವೆನಿಸುತ್ತದೆಯೋ ಅಂತಹ ಬಟ್ಟೆಯನ್ನು ನಾನು ಹಾಕಿಕೊಳ್ಳುತ್ತೇನೆ. ಒಟ್ಟಿನಲ್ಲಿ ನಾನು ಸಿಲ್ಲಿ ಮತ್ತು ಮೂರ್ಖಳಲ್ಲ ಎಂಬುದು ನನಗೆ ಅರಿವಿರುತ್ತದೆ. ನನಗೆ ಯಾವುದು ಚೆನ್ನಾಗಿ ಕಾಣುತ್ತದೆ ಮತ್ತು ಯಾವ ಬಟ್ಟೆ ನನಗೆ ಚೆನ್ನಾಗಿ ಕಾಣುವುದಿಲ್ಲ ಎಂಬುದು ನನಗೆ ತಿಳಿದಿದೆ. ಒಂದು ವೇಳೆ ನಾನು ಹಾಕುವ ಬಟ್ಟೆ ಸ್ವಲ್ಪ ಹೆಚ್ಚು ಹಾಟ್ ಆಗಿ ಕಾಣಬಹುದು ಎಂದು ನನಗೆ ಅನ್ನಿಸಿದರೆ, ನಾನು ಅದನ್ನು ಹಾಕದೇ ಇರಬಹುದು ಮತ್ತು ಅದು ನನ್ನ ಆಯ್ಕೆ, ಅದನ್ನು ಹೇಳುವ ಹಕ್ಕು ಯಾರಿಗೂ ಇರುವುದಿಲ್ಲ. ನಾನು ನನ್ನ ದೇಹಕ್ಕೆ ಆರಾಮವೆನಿಸುವ ಬಟ್ಟೆಗಳನ್ನೇ ಧರಿಸುತ್ತೇನೆ" ಎಂದು ಅವರು ಹೇಳಿದರು.


ಇದನ್ನೂ ಓದಿ: Malaika Arora: 48ರಲ್ಲೂ ಸಖತ್​ ಹಾಟ್​ ಬಾಲಿವುಡ್​ ಮುನ್ನಿ: ಬಿಕಿನಿ ಫೋಟೋ ನೋಡಿದ್ರೆ ತಲೆ ತಿರುಗುತ್ತೆ..!


ನಟಿ ಮಲೈಕಾ ಚೈಯ ಚೈಯ, ಮಾಹಿ ವೇ, ಕಾಲ್ ಧಮಾಲ್ ಮತ್ತು ಮುನ್ನಿ ಬದ್ನಾಮ್ ಹುಯಿ ಮುಂತಾದ ಹಾಡುಗಳಲ್ಲಿ ಡ್ಯಾನ್ಸ್ ಮಾಡಿ ತುಂಬಾನೇ ಜನಪ್ರಿಯವಾದ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಷ್ಟೇ ಅಲ್ಲದೆ ಅವರು ಒಬ್ಬ ವಿಡಿಯೋ ಜಾಕಿ, ಮಾಡೆಲ್ ಮತ್ತು ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ

Published by:vanithasanjevani vanithasanjevani
First published: