• Home
  • »
  • News
  • »
  • entertainment
  • »
  • Malaika Arora: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಲೈಕಾ ಈಗ ಹೇಗಿದ್ದಾರೆ? ಮನೆ ಸೇರಿದ ಕೂಡಲೇ ಫೋಟೋ ಹಂಚಿಕೊಂಡ ನಟಿ

Malaika Arora: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಲೈಕಾ ಈಗ ಹೇಗಿದ್ದಾರೆ? ಮನೆ ಸೇರಿದ ಕೂಡಲೇ ಫೋಟೋ ಹಂಚಿಕೊಂಡ ನಟಿ

ಮಲೈಕಾ ಅರೋರಾ

ಮಲೈಕಾ ಅರೋರಾ

ಮಲೈಕಾ ಅವರಿಗೆ ಗಂಭೀರ ಗಾಯಗಳೇನು ಆಗಿರಲಿಲ್ಲ. ಅವರ ಸಿ.ಟಿ ಸ್ಕ್ಯಾನ್ ವರದಿಯಿಂದಲೂ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ(Treatment) ನೀಡಿ, ವೈದ್ಯರು ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

  • Share this:

    ಫ್ಯಾಶನ್ ಈವೆಂಟ್(Fashion Event) ಒಂದರಲ್ಲಿ ಭಾಗವಹಿಸಿ, ಮರಳುತ್ತಿದ್ದ ಮಲೈಕಾ ಅರೋರಾ(Malaika Arora) ಅವರು ಇತ್ತೀಚೆಗೆ ರಸ್ತೆ ಅಪಘಾತಕ್ಕೆ ಈಡಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಶನಿವಾರ (ಏಪ್ರಿಲ್ 2) ಮಲೈಕಾ ಅವರು ಪ್ರಯಾಣಿಸುತ್ತಿದ್ದ ಕಾರು, ಮಹರಾಷ್ಟ್ರ(Maharashtra)ದ ಖೊಪೋಲಿಯ ಮುಂಬೈ-ಪೂನಾ(Mumbai -Pune) ಹೈವೇಯಲ್ಲಿ ಅಪಘಾತ(Accident)ಕ್ಕೆ ಒಳಗಾಯಿತು. ಅವರನ್ನು ಆ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮಲೈಕಾ ಅವರಿಗೆ ಗಂಭೀರ ಗಾಯಗಳೇನು ಆಗಿರಲಿಲ್ಲ. ಅವರ ಸಿ.ಟಿ ಸ್ಕ್ಯಾನ್ ವರದಿಯಿಂದಲೂ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ(Treatment) ನೀಡಿ, ವೈದ್ಯರು ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.


    ಚೇತರಿಸಿಕೊಳ್ಳುತ್ತಿದ್ದಾರೆ ಮಲೈಕಾ ಅರೋರಾ!


    ಮೂರು ಕಾರುಗಳು ಪರಸ್ಪರ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು. ಅಪಘಾತಕ್ಕೊಳಗಾದ ಮಲೈಕಾ ಅವರ ಕಾರಿನ ಫೋಟೋಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಮಲೈಕಾ ಅರೋರಾ ಪ್ರಸ್ತುತ ಟಿವಿಯ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸದಾ ಬ್ಯುಸಿಯಾಗಿರುವ ನಟಿ ಮತ್ತು ರೂಪದರ್ಶಿ. ಪತಿ ಅರ್ಬಾಜ್ ಖಾನ್ ಅವರಿಂದ ವಿಚ್ಚೇದನ ಬಳಿಕ, ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ನಡೆಸುವ ಮೂಲಕ ಅವರು ಬಾಲಿವುಡ್ ಮಂದಿ ಸೇರಿದಂತೆ ಎಲ್ಲರ ಕುತೂಹಲವನ್ನು ಕೆರಳಿಸಿದ್ದರು.


    ಮಲೈಕಾ ಅರೋರಾ ಭೇಟಿ ಮಾಡಿದ ಆಪ್ತರು!


    ಮಲೈಕಾಗೆ ಬಾಲಿವುಡ್‍ನಲ್ಲಿ ದೊಡ್ಡ ಸ್ನೇಹಿತರ ಬಳಗವಿದೆ. ಇದೀಗ ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಲೈಕಾ ಅವರನ್ನು, ಅರ್ಜುನ್ ಕಪೂರ್, ಸಂಜಯ್ ಕಪೂರ್, ಕರೀನಾ ಕಪೂರ್, ಅರ್ಬಾಜ್ ಖಾನ್ ಸಹೋದರಿ ಅಲವೀರಾ ಖಾನ್ ಸೇರಿದಂತೆ, ಬಹಳಷ್ಟು ಮಂದಿ ಸ್ನೇಹಿತರು ಮತ್ತು ಆಪ್ತರು ಭೇಟಿಯಾಗಿ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ.


    ಇದನ್ನೂ ಓದಿ: ಬಾಲಿವುಡ್​ನಲ್ಲಿ `ಆ’ ರೀತಿಯ ಸಿನಿಮಾಗಳು ಮತ್ತೆ ಬರಲಿ! ಹಿಂಗ್ಯಾಕ್​ ಅಂದ್ರು ಸಂಜಯ್​ ದತ್​ ನೀವೇ ನೋಡಿ..


    ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಮಲೈಕಾ!


    ಅಪಘಾತದ ಮೂಲಕ ಸುದ್ದಿಯಾಗಿದ್ದ ಮಲೈಕಾ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಮಲೈಕಾ ಬರೆದಿರುವ ಕೃತಜ್ಞತೆಯ ಟಿಪ್ಪಣಿ..! ಹೌದು, ಅಪಘಾತ ನಡೆದು ಸುಮಾರು ಒಂದು ವಾರದ ಬಳಿಕ, ಬಾಲಿವುಡ್‍ನ ಹಾಟ್ ಬೆಡಗಿ ಮಲೈಕಾ, ತಮ್ಮ ಅಪಘಾತದ ಅನುಭವವನ್ನು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಒಂದು ಟಿಪ್ಪಣಿಯನ್ನು ಕೂಡ ಬರೆದಿದ್ದಾರೆ.



    ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ನಟಿ!


    ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಒಂದನ್ನು ಹಂಚಿಕೊಂಡು, ಕಳೆದ ಕೆಲವು ದಿನಗಳು ನಂಬಲು ಅಸಾಧ್ಯವೆನ್ನುವಂತಿದ್ದವು ಎಂದು ಬರೆದುಕೊಂಡಿದ್ದಾರೆ. “ಆ ಘಟನೆಯನ್ನು ಮತ್ತೆ ನೆನಪಿಸಿಕೊಂಡರೆ, ಅದೊಂದು ಸಿನಿಮಾದ ದೃಶ್ಯ ಮತ್ತು ವಾಸ್ತವದಲ್ಲಿ ನಡೆದೇ ಇಲ್ಲ ಎಂಬಂತೆ ಭಾಸವಾಗುತ್ತದೆ. ಅದೃಷ್ಟವಶಾತ್, ಅಪಘಾತ ನಡೆದ ಕೂಡಲೇ, ನಾನು ಅನೇಕ ಕಾಳಜಿ ವಹಿಸುವ ಏಂಜೆಲ್‍ಗಳಿಂದ ಸುತ್ತಿವರೆಯಲ್ಪಟ್ಟಿದ್ದೇನೆ ಎಂದು ಅನಿಸಿತು. ಅದು ನನ್ನ ಸಿಬ್ಬಂದಿ ಆಗಿರಬಹುದು, ಆಸ್ಪತ್ರೆಗೆ ನನ್ನನ್ನ ತಲುಪಿಸಲು ಸಹಾಯ ಮಾಡಿದ ಜನರಾಗಿರಬಹುದು, ಈ ಕಷ್ಟದ ಸಂದರ್ಭದ ಉದ್ದಕ್ಕೂ ನನಗೆ ಬೆಂಬಲವಾಗಿ ನಿಂತ ನನ್ನ ಕುಟುಂಬದವರಾಗಿರಬಹುದು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಾಗಿರಬಹುದು” ಎಂದು ಮಲೈಕಾ ಬರೆದಿದ್ದಾರೆ.


    ಇದನ್ನೂ ಓದಿ: ಆ್ಯಂಕರ್​ ಕಪಾಳಕ್ಕೆ ಹೊಡೆದಿದ್ದಕ್ಕೆ ಆಸ್ಕರ್‌ನಿಂದ ಸ್ಮಿತ್​ 10 ವರ್ಷ ಬ್ಯಾನ್.. ತಪ್ಪು ಒಪ್ಪಿಕೊಂಡ ಸೂಪರ್​ ಸ್ಟಾರ್​!


    ಅಷ್ಟೇ ಅಲ್ಲ, ಈ ರೀತಿಯ ಕ್ಷಣಗಳು, ನಮ್ಮ ಮೇಲೆ , ಅದರಲ್ಲೂ ಮುಖ್ಯವಾಗಿ ನಮಗೆ ಅತ್ಯವಿರುವ ಸಂದರ್ಭಗಳಲ್ಲಿ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಸುರಿಸುವ ಜನರಿಗೆ ನಾವು ಕೃತಜ್ಞರಾಗಿರಬೇಕು ಎಂಬುದನ್ನು ನೆನಪಿಸುತ್ತವೆ ಎಂದು ಮಲೈಕಾ ಅರೋರಾ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    Published by:ವಾಸುದೇವ್ ಎಂ
    First published: