ಅಬ್ಬಾ..! ನಟಿ ಮಲೈಕಾ ಅರೋರಾ ಧರಿಸಿರುವ ಬಳೆಯ ಬೆಲೆಯೆಷ್ಟು ಗೊತ್ತಾ?

ಫೋಟೋಶೂಟ್​ಗಾಗಿ ಮಲೈಕಾ ಅವರು ಗೆಲೈನಾ ಜುವೆಲ್ಸ್​ ಅವರಿಂದ ವಜ್ರ ಮತ್ತು ಚಿನ್ನದ ಕಾಲಮ್​ ಕಿವಿಯೋಲೆ ಆರಿಸಿಕೊಂಡಿದ್ದಾರೆ. ಡಯೋಸಾ ಅವರಿಂದ ವಜ್ರದಿಂದ ಸುತ್ತುವರಿದ ಬಳೆ ಧರಿಸಿಕೊಂಡಿದ್ದಾರೆ.

news18-kannada
Updated:December 3, 2019, 4:36 PM IST
ಅಬ್ಬಾ..! ನಟಿ ಮಲೈಕಾ ಅರೋರಾ ಧರಿಸಿರುವ ಬಳೆಯ ಬೆಲೆಯೆಷ್ಟು ಗೊತ್ತಾ?
ಮಲೈಕಾ ಆರೋರಾ
  • Share this:
ನಟಿ ಮಲೈಕಾ ಆರೋರಾ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಹೊಸ ವಿನ್ಯಾಸದ ಬಟ್ಟೆ, ಆಭರಣ ಧರಿಸಿಕೊಂಡು ಕಂಗೊಳಿಸುತ್ತಿರುತ್ತಾರೆ. ಮಾತ್ರವಲ್ಲದೆ, ಇದೇ ವಿಚಾರಕ್ಕಾಗಿ ಆಗಾಗಾ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್​ ಫ್ಯಾಷನ್​ ರಾಣಿ ಮಲೈಕಾ ದುಬಾರಿ ಬೆಲೆಯ ಬಳೆ ಧರಿಸಿ ಸುದ್ದಿಯಾಗಿದ್ದಾರೆ.

ಹೌದು. ನಟಿ ಮಲೈಕಾ ಅರೋರಾ ಇತ್ತೀಚೆಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಸಿಲ್ವರ್​ ಗೌನ್​ ಧರಿಸಿಕೊಂಡು ಫೋಟೋಗೆ ಪೋಸು ನೀಡಿದ್ದಾರೆ. ಈ ಫೋಟೋವನ್ನು ನಟಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.ಆದರೆ ನೆಟ್ಟಿಗರ ಕಣ್ಣು ಮಾತ್ರ ಮಲೈಕಾ ಆರೋರಾ ಧರಿಸಿರುವ ಬಳೆಯ ಮೇಲೆ ಬಿದ್ದಿದೆ. ಫೋಟೋಶೂಟ್​ಗಾಗಿ ಮಲೈಕಾ ಅವರು ಗೆಲೈನಾ ಜುವೆಲ್ಸ್​ ಅವರಿಂದ ವಜ್ರ ಮತ್ತು ಚಿನ್ನದ ಕಾಲಮ್​ ಕಿವಿಯೋಲೆ ಆರಿಸಿಕೊಂಡಿದ್ದಾರೆ. ಡಯೋಸಾ ಅವರಿಂದ ವಜ್ರದಿಂದ ಸುತ್ತುವರಿದ ದುಬಾರಿ ಬಳೆ ಧರಿಸಿಕೊಂಡಿದ್ದಾರೆ. ಆದರೆ ಇವೆಲ್ಲದರ ಬೆಲೆ ಕೇಳಿದರೆ ಮುಂಬೈ ನಗರದಲ್ಲಿ ಫ್ಲಾಟ್​ ಖರೀದಿಸಬಹುದಂತೆ! 

ಫೋಟೋಶೂಟ್​​ಗಾಗಿ ಮಲೈಕಾ ಆರೋರಾ ಆಯ್ಕೆ ಮಾಡಿರುವ ಈ ದುಬಾರಿ ಆಭರಣದ ಬೆಲೆ ಸುಮಾರು 22,80,500. ಆದರೆ ನೆಟ್ಟಿಗರ ಕಣ್ಣು ಸೆಳೆದಿದ್ದು ಮಾತ್ರ ಮಲೈಕಾ ಧರಿಸಿರುವ ಬಳೆ ಮೇಲೆ. ಇದರ ಬೆಲೆ 12,67,500 ಆಗಿದೆ.ಸಾಕಷ್ಟು ನಟ- ನಟಿಯರು ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಫೋನ್​, ಓಡಾಡುವ ಕಾರು, ಬೈಕ್​, ಧರಿಸುವ ಬಟ್ಟೆಗಳು ಎಲ್ಲವೂ ದುಬಾರಿ ವಸ್ತುಗಳೇ ಆಗಿರುತ್ತವೆ. ಅದೇ ರೀತಿ ನಟಿ ಮಲೈಕಾ ಫೋಟೋಶೂಟ್​ಗೆಂದು ದುಬಾರಿ ಬೆಲೆಯ ಆಭರಣವನ್ನು ಧರಿಸಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಗ್ಯಾಲಕ್ಸಿ ಎಸ್10 ಸ್ಮಾರ್ಟ್​ಫೋನಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ ವಿವೋ ‘ವಿ17‘ ಸ್ಮಾರ್ಟ್​ಫೋನ್​​!

ಇದನ್ನೂ ಓದಿ: ‘ಓಲ್ಡ್​ ಆಂಟಿ‘ ಅಂತೆ ನಟಿ ಮಲೈಕಾ ಅರೋರಾ..! ಹಿಂಗೇಕಂದ್ರು ಟ್ರೋಲಿಗರು?
First published: December 3, 2019, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading