ಬಾಲಿವುಡ್ (Bollywood) ನಟ ಅರ್ಬಾಜ್ ಖಾನ್ (Arbaaz Khan) ಮತ್ತು ನಟಿ ಮಲೈಕಾ ಅರೋರಾ (Malaika Arora) ಇಬ್ಬರು ವೈವಾಹಿಕ ಜೀವನದಿಂದ ಬೇರ್ಪಟ್ಟ ಸುದ್ದಿ ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಅರ್ಬಾಜ್ ಮತ್ತು ಮಲೈಕಾ ಇಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ (Airport) ಜೊತೆಯಲ್ಲಿ ನಿಂತಿದ್ರಂತೆ. ಹೌದು.. ತಮ್ಮ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಲು ಮತ್ತೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ವೆಬ್ ರಿಯಾಲಿಟಿ ಶೋ ‘ಮೂವಿಂಗ್ ಇನ್ ವಿತ್ ಮಲೈಕಾ’ ಗೆ ಪಾದಾರ್ಪಣೆ ಮಾಡಿದ ಮಲೈಕಾ ತನ್ನ ಮಗನನ್ನು ಪ್ರೀತಿಯಿಂದ ತಬ್ಬಿಕೊಂಡು ಮುದ್ದಾಡಿದ್ದಾರೆ. ತಂದೆಯಾದ ಅರ್ಬಾಜ್ ಈ ತಾಯಿ-ಮಗನ ಜೋಡಿಯನ್ನು ನಗುತ್ತಾ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅರ್ಹಾನ್ ಪ್ರಸ್ತುತ ಯುಎಸ್ ನಲ್ಲಿ ಚಲನಚಿತ್ರ ನಿರ್ಮಾಣದ ಕೋರ್ಸ್ ವೊಂದನ್ನು ಅಧ್ಯಯನ ಮಾಡುತ್ತಿದ್ದಾರೆ.
ಮಗನನ್ನು ಸ್ವಾಗತಿಸಲು ಬಂದ ಮಲೈಕಾ ಮತ್ತು ಅರ್ಬಾಜ್
ಮಲೈಕಾ ಮತ್ತು ಅರ್ಬಾಜ್ ತಮ್ಮ ಮಗನನ್ನು ಸ್ವಾಗತಿಸಲು ಬಂದಂತಹ ಆ ಸನ್ನಿವೇಶದ ವೀಡಿಯೋ ಈಗ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಏಕೆಂದರೆ ಹಲವಾರು ಪಾಪರಾಜಿಗಳು ಅದನ್ನು ಆಯಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಮಗನಿಗೆ ಸಹ-ಪೋಷಕರಾಗಿ ಮತ್ತು ಆಗಾಗ್ಗೆ ಒಟ್ಟಿಗೆ ಬರುತ್ತಿರುವುದಕ್ಕಾಗಿ ಮಾಜಿ ದಂಪತಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಭಿಮಾನಿಯೊಬ್ಬರು "ಅವರು ತಮ್ಮ ತಮ್ಮ ಜೀವನವನ್ನು ಮತ್ತು ತಮ್ಮ ಮಗನನ್ನು ಘನತೆಯಿಂದ ನಿಭಾಯಿಸುತ್ತಿದ್ದಾರೆ. ಅವರು ಮಗುವನ್ನು ಸಹ-ಪಾಲನೆ ಮಾಡುತ್ತಿದ್ದಾರೆ. ಅದು ತುಂಬಾನೇ ಮುಖ್ಯ. ಯಾವುದೇ ಕೆಸರು ಎರುಚೊ ಆಟ ಇಲ್ಲಿ ನಡೆಯುತ್ತಿಲ್ಲ, ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದ ಇಬ್ಬರು ಪ್ರಬುದ್ಧ ವಯಸ್ಕರು” ಎಂದು ಬರೆದಿದ್ದಾರೆ.
"ಅವರು ತಮ್ಮ ನಡುವೆ ಇರುವ ಎಲ್ಲಾ ಅಸಮಾಧಾನವನ್ನು ಬದಿಗಿಟ್ಟು ತಮ್ಮ ಮಗನ ಜೊತೆಗೆ ಒಟ್ಟಾಗಿ ಇರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ" ಎಂದು ಇನ್ನೊಬ್ಬ ಅಭಿಮಾನಿ ಬರೆದಿದ್ದಾರೆ. "ಸಂತೋಷದ ಕುಟುಂಬ" ಎಂದು ಇನ್ನೊಬ್ಬ ಅಭಿಮಾನಿ ಅವರ ಕುಟುಂಬವನ್ನು ನೋಡಿ ಕಾಮೆಂಟ್ ಮಾಡಿದ್ದಾರೆ.
ಜಾಹಿರಾತಿನ ಸೆಟ್ ನಲ್ಲಿ ಮೊದಲ ಬಾರಿಗೆ ಭೇಟಿ ಅಗಿದ್ರಂತೆ ಮಲೈಕಾ-ಅರ್ಬಾಜ್
ಮಲೈಕಾ ಮತ್ತು ಅರ್ಬಾಜ್ 1998 ರಲ್ಲಿ ವಿವಾಹವಾಗಿದ್ದರು ಮತ್ತು ಅವರಿಬ್ಬರೂ ಮೊದಲ ಬಾರಿಗೆ ಒಂದು ಜಾಹೀರಾತಿನ ಚಿತ್ರೀಕರಣದ ಸೆಟ್ ನಲ್ಲಿ ಭೇಟಿಯಾಗಿದ್ದರು ಮತ್ತು ಅಲ್ಲಿಂದ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿತು. ಇವರಿಗೆ 2002 ರಲ್ಲಿ ಅರ್ಹಾನ್ ಹುಟ್ಟಿದನು. ಇವರಿಬ್ಬರು 2017 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಮಲೈಕಾ ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ, ಇತ್ತ ಅರ್ಬಾಜ್ ಅವರ ಹೆಸರು ಜಾರ್ಜಿಯಾ ಆಂಡ್ರಿಯಾನಿ ಅವರ ಹೆಸರಿನ ಜೊತೆ ಕೇಳಿ ಬರುತ್ತಿದೆ.
'ಮೂವಿಂಗ್ ಇನ್ ವಿತ್ ಮಲೈಕಾ' ದ ಮೊದಲ ಸಂಚಿಕೆಯಲ್ಲಿ, ಅರೋರಾ ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಸಂಗತಿಗಳನ್ನು ತೆರೆದಿಟ್ಟರು. ಅವರು ತನ್ನ ಮನೆಯಿಂದ ಹೊರಬರಲು ಬಯಸಿದ್ದರಿಂದಲೇ ಅರ್ಬಾಜ್ ನನ್ನು ಮದುವೆಯಾದೆ ಎಂದು ಅವರು ಶೋ ನಲ್ಲಿ ಹೇಳಿದರು.
View this post on Instagram
ನೃತ್ಯ ಸಂಯೋಜಕಿ ಫರಾಹ್ ಖಾನ್ ಅವರೊಂದಿಗಿನ ಸಂಭಾಷಣೆಯಲ್ಲಿ, ಮಲೈಕಾ ತನ್ನ ಹಿಂದಿನ ಮತ್ತು ಪ್ರಸ್ತುತ ಸಂಬಂಧಗಳ ಬಗ್ಗೆ ಚರ್ಚಿಸಿದರು ಮತ್ತು ಅರ್ಬಾಜ್ ಗೆ ಪ್ರಪೋಸ್ ಮಾಡಿದ ಸಮಯದ ಬಗ್ಗೆ ಸಹ ಅವರು ನೆನಪಿಸಿಕೊಂಡರು.
ಮಲೈಕಾ ಅವರು "ಅರ್ಬಾಜ್ ಗೆ ಮೊದಲು ಪ್ರಪೋಸ್ ಮಾಡಿದ್ದೆ ನಾನು, ಈ ವಿಷಯ ಯಾರಿಗೂ ಗೊತ್ತಿಲ್ಲ. ನನಗೆ ಮೊದಲು ಪ್ರಪೋಸ್ ಮಾಡಿದ್ದು ಅರ್ಬಾಜ್ ಅಲ್ಲ” ಎಂದು ಶೋ ನಲ್ಲಿ ಹೇಳಿದರು. ಮಲೈಕಾ ಅವರ ಶೋ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ