• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Malaika Arora ಜೊತೆ ರೊಮ್ಯಾಂಟಿಕ್ ಬರ್ತ್ ಡೇ ಆಚರಿಸಿಕೊಂಡ ಅರ್ಜುನ್ ಕಪೂರ್, ಪ್ಯಾರಿಸ್​ನಲ್ಲಿ ಲವ್​ ಬರ್ಡ್ಸ್ ಫುಲ್ ಮಸ್ತಿ

Malaika Arora ಜೊತೆ ರೊಮ್ಯಾಂಟಿಕ್ ಬರ್ತ್ ಡೇ ಆಚರಿಸಿಕೊಂಡ ಅರ್ಜುನ್ ಕಪೂರ್, ಪ್ಯಾರಿಸ್​ನಲ್ಲಿ ಲವ್​ ಬರ್ಡ್ಸ್ ಫುಲ್ ಮಸ್ತಿ

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್

Arjun Kapoor birthday: ಅರ್ಜುನ್ ಕಪೂರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ತನ್ನ ಹುಟ್ಟುಹಬ್ಬವನ್ನು ಪ್ರೇಯಸಿ ಮಲೈಕಾ ಅರೋರಾ ಜೊತೆ ಪ್ಯಾರೀಸ್​ನಲ್ಲಿ ಆಚರಿಸಿಕೊಂಡಿದ್ದು, ಅದರ  ಫೋಟೋಗಳು ಸದ್ಯ ವೈರಲ್ ಆಗುತ್ತಿದೆ.

  • Share this:

ಬಾಲಿವುಡ್​ (Bollywood) ವಿಭಿನ್ನ ಪ್ರೇಮ ಕಥೆಗಳಿಗೆ (Love story) ಸಾಕ್ಷಿಯಾಗಿದೆ. ಅದರಲ್ಲಿ ಅರ್ಜುನ್ ಕಪೂರ್ (Arjun Kapoor) ಮತ್ತು ಮಲೈಕಾ ಅರೋರಾ (Malaika Arora) ಸ್ಟೋರಿ ಸ್ವಲ್ಪ ಡಿಫರೆಂಟ್. ಇವರಿಬ್ಬರ ಬಗ್ಗೆ ಚರ್ಚೆಗಳು ಬಂದಾಗೆಲ್ಲಾ ವಯಸ್ಸಿನ ಅಂತರದ ವಿಷಯವೇ ಮೊದಲಿಗೆ ಎಲ್ಲರಿಗೂ ಬೆರಗು ಮೂಡಿಸುತ್ತದೆ. 37ರ ಹರೆಯದ ಅರ್ಜುನ್ 48ರ ವಯಸ್ಸಿನ ಮಲೈಕಾ ಪ್ರೀತಿ ಇವತ್ತಿಗೂ ಚರ್ಚೆಯಲ್ಲಿಯೇ ಇದೆ. ಆದರೂ ಇದೆಲ್ಲರ ಮಧ್ಯೆ ಈ ಜೋಡಿಯ ಆತ್ಮೀಯತೆ, ಹೊಂದಾಣಿಕೆ ಕಪಲ್​ ಗೋಲ್ಸ್​​ ಸೆಟ್ ಮಾಡಿಕೊಟ್ಟಿದೆ. ಇದೀಗ ಈ ಜೋಡಿ ಬರ್ತ್​ ಡೇ ಪಾರ್ಟಿ ಮಾಡಿರುವುದು ಸುದ್ದಿಯಾಗಿದೆ.


ಭರ್ಜರಿ ಬರ್ತ್ ಡೇ ಆಚರಿಸಿದ ಜೋಡಿ


ಹೌದು, ಅರ್ಜುನ್ ಕಪೂರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ತನ್ನ ಹುಟ್ಟುಹಬ್ಬವನ್ನು ಪ್ರೇಯಸಿ ಮಲೈಕಾ ಅರೋರಾ ಜೊತೆ ಪ್ಯಾರೀಸ್​ನಲ್ಲಿ ಆಚರಿಸಿಕೊಂಡಿದ್ದು, ಅದರ  ಫೋಟೋಗಳು ಸದ್ಯ ವೈರಲ್ ಆಗುತ್ತಿದೆ. ಈ ಬಗ್ಗೆ ಮಲೈಕಾ ಅರೋರಾ ಹಾಗು ಅರ್ಜುನ್ ಕಪೂರ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.  ಸದ್ಯ ಬರ್ತ್ ಡೇಯ ಕ್ಯೂಟ್​ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ. ಅಲ್ಲದೇ ಈ ಮುದ್ದಾದ ಜೋಡಿ ನೋಡಿ ಕಾಮೆಂಟ್​ಗಳನ್ನು ಸಹ ಮಾಡುತ್ತಿದ್ದಾರೆ.




ಇನ್ನು ಮೂಲಗಳ ಪ್ರಕಾರ ಜೋಡಿ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ. ವಿಚ್ಚೇದನದ ಬಳಿಕ ಮಲೈಕಾ 'ಟೂ ಸ್ಟೇಟ್ಸ್​​' ಸಿನಿಮಾ ಖ್ಯಾತಿಯ ನಟ ಅರ್ಜುನ್ ಕಪೂರ್ ಜೊತೆಯಾದರು. 2018ರಿಂದ ಈ ಇಬ್ಬರು  ಡೇಟಿಂಗ್​ನಲ್ಲಿದ್ದಾರೆ. ಪ್ರತಿ ಬಾರಿ ತಮ್ಮ ಪ್ರೀತಿ, ಪ್ರವಾಸ, ಔತಣಕೂಟ ಸೇರಿದಂತೆ ಹಲವಾರು ಅದ್ಭುತ ಕ್ಷಣಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಪ್ರತಿ ಪೋಸ್ಟ್​ಗಳು ಅದಕ್ಕೆ ನೀಡುವ ಶೀರ್ಷಿಕೆಗಳು ಇವರಿಬ್ಬರ ಪ್ರೀತಿಯ ಅಗಾಧತೆಗೆ ಸಾಕ್ಷಿಯಾಗಿವೆ.


ಈ ವರ್ಷದ ಕೊನೆಯಲ್ಲಿ ಮದುವೆಯಂತೆ


ವರದಿ ಪ್ರಕಾರ ಮಲೈಕಾ ಮತ್ತು ಅರ್ಜುನ್ ಕಪೂರ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ವೇಳೆ ಈ ಜೋಡಿ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ. ಚಯ್ಯಾ ಚಯ್ಯಾ’ ಬೆಡಗಿ  ಮಲೈಕಾ ಅರೋರಾ, ಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ 19 ವರ್ಷಗಳ ಕಾಲ ಸಂಸಾರ ನಡೆಸಿದ್ದರು.  ಆ ನಂತರ 2017ರಲ್ಲಿ ವಿಚ್ಚೇದನವನ್ನು ಪಡೆದು ಬೇರೆ ಬೇರೆಯಾಗಿದ್ದರು. ಈ ದಂಪತಿಗಳಿಗೆ  ಅರ್ಹಾನ್ ಖಾನ್ ಎನ್ನುವ 18 ವರ್ಷದ ಮಗನಿದ್ದಾನೆ.


ಇನ್ನು ಕೆಲ ತಿಂಗಳ ಹಿಂದೆ ಮಲೈಕಾ ಹಾಗೂ ಅರ್ಜುನ್ ಬ್ರೇಕಪ್​ ಬಗ್ಗೆ ಸಹ ಸುದ್ದಿ ಹರಡಿತ್ತು.  ಆದರೆ ಇದೆಲ್ಲಾ ಶುದ್ಧ ಸುಳ್ಳು, ನಾವ್ಯಾಕೆ ಬ್ರೇಕಪ್​ ಆಗೋಣ, ನಾವು ಯಾವಾಗ್ಲೂ ಸ್ವೀಟ್ ಕಪಲ್ ಅನ್ನೋ ರೀತಿ ಅರ್ಜುನ್​ ಕಪೂರ್ ತಮ್ಮ ಮನದನ್ನೆ ಮಲೈಕಾ ಜೊತೆಗಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.


ಇದನ್ನೂ ಓದಿ: ಸೂಪರ್ ಫೋಟೋಶೂಟ್​ನಲ್ಲಿ ಮಿಂಚಿದ ಮುದ್ದುಲಕ್ಷ್ಮಿ ಅಶ್ವಿನಿ, ನಟಿಯ ಲುಕ್​ ನೋಡಿ ಫ್ಯಾನ್ಸ್ ಫಿದಾ


'ಇಲ್ಲಿ ಕ್ಷುಲ್ಲಕ ವದಂತಿಗಳಿಗೆ ಸ್ಥಾನವಿಲ್ಲ. ನೀವೆಲ್ಲರೂ ಸುರಕ್ಷಿತವಾಗಿರಿ, ದೇವರ ಆಶೀರ್ವಾದವಿರಲಿ, ಎಲ್ಲರಿಗೂ ಶುಭವನ್ನು ಹಾರೈಸಿ, ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ' ಎಂದು ಶೀರ್ಷಿಕೆ ನೀಡಿದ್ದರು ಅರ್ಜುನ್ ಕಪೂರ್. ಇನ್ನು ಮಲೈಕಾ ಅರೋರಾ ಈ ಪೋಸ್ಟ್​ಗೆ ಹೃದಯದ ಎಮೋಜಿಯ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಕೊನೆಗೂ ಈ ಪೋಸ್ಟ್​​ನಿಂದ ತಮ್ಮ ಬ್ರೇಕಪ್ ಸ್ಟೋರಿಗೆ ತೆರೆ ಎಳೆದಿದ್ದರು ಈ ಜೋಡಿ.

Published by:Sandhya M
First published: