Covid Death In Sandalwood: ಸ್ಯಾಂಡಲ್​ವುಡ್​ನಲ್ಲಿ ಕೊರೋನಾಗೆ ಮತ್ತೊಂದು ಬಲಿ: ರನ್ನ ಚಿತ್ರದ ನಿರ್ಮಾಪಕ ಇನ್ನಿಲ್ಲ

ಅಣ್ಣಯ್ಯ, ಏನೋ ಒಂಥೆರಾ, ಬಿಂದಾಸ್​ ಹಾಗೂ ರನ್ನ‌ ಚಿತ್ರಗಳ ನಿರ್ಮಾಪಕ ಚಂದ್ರಶೇಖರ್  23 ದಿನಗಳ ಹಿಂದೆ ಕೋವಿಡ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡಿದೆ. ನಿನ್ನೆ ರಾತ್ರಿ 11:30ರ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ರನ್ನ ಸಿನಿಮಾದ ನಿರ್ಮಾಪಕ ಚಂದ್ರಶೇಖರ್​

ರನ್ನ ಸಿನಿಮಾದ ನಿರ್ಮಾಪಕ ಚಂದ್ರಶೇಖರ್​

  • Share this:
ಕೊರೋನಾ ಎರಡನೇ ಅಲೆ ಇಡೀ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಮೊದಲ ಲಅಎಗೆ ಹೋಲಿಸಿದರೆ, ಎರಡನೇ ಅಲೆಯಿಂದಾಗಿ ಆಗುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ದಿನೇ ದಿನೇ ಸೋಂಕಿತರ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ. ಇದರಿಂದ 2ನೇ ಅಲೆ ತಡೆಗಾಗಿ ದೇಶದಲ್ಲಿ ಆಯಾ ಆಯಾ ರಾಜ್ಯ ಸರ್ಕಾರಗಳು ಲಾಕ್​ಡೌನ್​ ಜಾರಿಗೊಳಿಸಿವೆ. ರಾಜ್ಯದಲ್ಲೂ ಸಹ 14 ದಿನಗಳ ಲಾಕ್​ಡೌನ್​ ಮಾಡಲಾಗಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಸಮಯ ನಿಗದಿ ಮಾಡಿದ್ದು, ಅನಗತ್ಯವಾಗಿ ಓಡಾಡುವವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುತ್ತಿದೆ. 14 ದಿನಗಳ ಕಾಲ  ಮಾಡಿರುವ ಲಾಕ್​ಡೌನ್​ನಿಂದಾಗಿ  ಕೊರೋನಾ ಹರಡುತ್ತಿರುವ ತೀವ್ರತೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಲಾಕ್​ಡೌನ್​ಗೆ ಹೆದರಿ  ನಗರಪ್ರದೇಶಗಳಲ್ಲಿರುವ ಜನರು ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ. ಇನ್ನು ನಗರದ ಆಸ್ಪತ್ರೆಗಳಲ್ಲಿ ಬೆಡ್​ಗಳ ಜೊತೆಗೆ ಆಮ್ಲಜನಕದ ಕೊರತೆ ಇನ್ನೂ ಕಾಡುತ್ತಿದೆ. ಇವುಗಳಿಂದಾಗಿಯೇ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

ಕೊರೋನಾದಿಂದಾಗಿ ಸ್ಯಾಂಡಲ್​ವುಡ್​ನಲ್ಲೂ ಸಹ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಕಿಚ್ಚ ಸುದೀಪ್​ ಅಭಿನಯದ ರನ್ನ ಸಿನಿಮಾದ ನಿರ್ಮಾಪಕ ಚಂದ್ರಶೇಖರ್​ ಕೊರೋನಾಗೆ ಬಲಿಯಾಗಿದ್ದಾರೆ.

covid death, Sandalwood, Ranna Movie Producer, Chandrashekar Producer, Makeup Srinivas, Ramu, Ramu Kanafal, ರನ್ನ ಸಿನಿಮಾ ನಿರ್ಮಾಪಕ ಶ್ರೀನಿವಾಸ್​, ಸುದೀಪ್​ ಅವರ ರನ್ನ ಸಿನಿಮಾ, ಮೇಕಪ್​ ಶ್ರೀನಿವಾಸ್​, ರಾಮು, ರಾಮು ಕಣಗಾಲ್​, Makeup Srinivas and Ranna Movie Producer Chandrashekar died due to corona ae
ರನ್ನ ಸಿನಿಮಾದ ನಿರ್ಮಾಪಕ ಚಂದ್ರಶೇಖರ್​


ಅಣ್ಣಯ್ಯ, ಏನೋ ಒಂಥೆರಾ, ಬಿಂದಾಸ್​ ಹಾಗೂ ರನ್ನ‌ ಚಿತ್ರಗಳ ನಿರ್ಮಾಪಕ ಚಂದ್ರಶೇಖರ್  23 ದಿನಗಳ ಹಿಂದೆ ಕೋವಿಡ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡಿದೆ. ನಿನ್ನೆ ರಾತ್ರಿ 11:30ರ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಇದನನ್ನೂ ಓದಿ: ಪ್ರಕಾಶ್​ ರಾಜ್​ ಕುಟುಂಬದ ಕೆಲವು ಅಪರೂಪದ ಫೋಟೋಗಳು ನಿಮಗಾಗಿ..!

ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅಭಿನಯಿಸುತ್ತಿರುವ ಹೊಸ ಸಿನಿಮಾವನ್ನು ನಿಮಾ್ಪಕ ಚಂದ್ರಶೇಖರ್​ ಇತ್ತೀಚೆಗಷ್ಟೆ ಅನೌನ್ಸ್​ ಮಾಡಿದ್ದರು. ಆದರೆ ಈ ಸಿನಿಮಾ ಸೆಟ್ಟೇರುವ ಮುನ್ನವೇ ಚಂದ್ರಶೇಖರ್​ ಇಹಲೋಕ ತ್ಯಜಿಸಿದ್ದಾರೆ.

ಮೇಕಪ್​ ಶ್ರೀನಿವಾಸ್​


ಇನ್ನು ಮೇಕಪ್​ ಶ್ರೀನಿವಾಸ್​ ಅಲಿಯಾಸ್​ ಮೇಕಪ್​ ಸೀನಣ್ಣ ಸಹ ಕೋವಿಡ್​ಗೆ ಬಲಿಯಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಶ್ರೀನಿವಾಸ್​ ಅವರೂ ಏ.28ರಂದು ಕೊನೆಯುಸಿರೆಳೆದಿದ್ದಾರೆ. ಸೀನಣ್ಣ ಎಂದೇ ಖ್ಯಾತರಾಗಿದ್ದವರು ವರ್ಣಾಲಂಕಾರ ಹಾಗೂ ಕೇಶಾಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷರಾಗಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ಕೊರೋನಾ ಆರ್ಭಟ; ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 137 ಮಂದಿ ಕೋವಿಡ್​ಗೆ ಬಲಿ

ಸೀನಣ್ಣ ಅವರು ಭರ್ಜರಿ, ಭರಾಟೆ, ಹಾಗೂ ಬಹದ್ದೂರ್​ ಸಿನಿಮಾಗಳಲ್ಲಿ ಮೇಕಪ್​ ಕಲಾವಿದರಾಗಿ ಕೆಲಸ ಮಾಡಿದ್ದರು. ಜೊತೆಗೆ ಪುನೀತ್ ರಾಜ್​ಕುಮಾರ್ ಅಭಿನಯದ  ಜೇಮ್ಸ್​ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದರು.

RIP Ramu Kanagal, Ramu Kangal is no more, Puttanna Kanagal, Corona Virus, Covid Death, Ramu Kanagal, Puttana Kanagal son Ramu Kanagal, classical dancer Ramu Kanagal is no more, Rip Ramu Kanagal, sandalwood, Corona death, ರಾಮು ಕಣಗಾಲ್​, ಪುಟ್ಟಣ್ಣ ಕಣಗಾಲ್​ ಅವರ ಮಗ ರಾಮು ಕಣಗಾಲ್​, ಮತ್ತೊಂದು ಸಾವು, ಕೋವಿಡ್​ಗೆ ಮತ್ತೋರ್ವ ಕಲಾವಿದ ಬಲಿ, ರಾಮು ಕಣಗಾಲ್​, ನೃತ್ಯಗಾರ ರಾಮು ಕಣಗಾಲ್​, Director Puttanna Kanagal son Ramu Kanagal died due to covid ae
ಪುಟ್ಟಣ್ಣ ಕಣಗಾಲ್​ ಅವರ ಮಗ ರಾಮು ಕಣಗಾಲ್​


ನಿರ್ಮಾಪಕ ಕೋಟಿ ರಾಮು ಹಾಗೂ ಪುಟ್ಟಣ್ಣ ಕಣಗಾಲ್​ ಅವರ ಮಗ ರಾಮು ಕಣಗಾಲ್​ ಅವರೂ ಸಹ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ ನಿತ್ಯ ಸಾವಿರಾರು ಮಂದಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸುತ್ತಿದ್ದಾರೆ.

malashree husband Kannada producer Ramu is no more
ರಾಮು ಹಾಗೂ ಮಾಲಾಶ್ರೀ


ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ನಿನ್ನೆ ಕೂಡ ದಾಖಲೆಯ ಪ್ರಕರಣ ಬೆಳಕಿಗೆ ಬಂದಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್​ ಮಾಡಿದ ಬಳಿಕ ಇದೆ ಮೊದಲ ಬಾರಿಗೆ ಇಷ್ಟು ಪ್ರಮಾಣದ ಪ್ರಕರಣಗಳು ಕಂಡು ಬಂದಿದೆ. ಇಂದು ರಾಜ್ಯದಲ್ಲಿ 39,047 ಪ್ರಕರಣಗಳು ಪತ್ತೆಯಾಗಿದ್ದು, 229 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೊರೋನಾ ಅಬ್ಬರಕ್ಕೆ ಜನರು ನಲುಕಿದ್ದು, ಇಂದು 22, 596 ಮಂದಿ ಸೋಂಕಿಗೆ ಒಳಗಾಗಿದ್ದು, 137 ಮಂದಿ ಬಲಿಯಾಗಿದ್ದಾರೆ. ಕೊರೋನಾ ರೂಪಾಂತರಿ ತಳಿ (ಡಬಲ್​ ಮ್ಯೂಟೆಂಟ್​) ವೈರಸ್​ ಕೂಡ ಪತ್ತೆಯಾಗಿರುವುದಾಗಿ ತಜ್ಞರು ತಿಳಿಸಿದ್ದಾರೆ. 46 ಯುಕೆ ಸ್ಟ್ರೈನ್​ ಮತ್ತು 6 ದಕ್ಷಿಣ ಆಫ್ರಿಕಾದ ಸೋಂಕು ಈ ಹಿಂದೆ ರಾಜ್ಯದಲ್ಲಿ ಪತ್ತೆಯಾಗಿತ್ತು. ಇದರ ಹೊರತಾಗಿ ಹೊಸ ತಳಿಯ ಬಿ.1.617ನ ಸೋಂಕು ರಾಜ್ಯದ 20 ಮಂದಿಯಲ್ಲಿ ಕಂಡು ಬಂದಿದೆ

ಇದನ್ನೂ ಓದಿ: Kavya Gowda Wedding: ಮೇ 13ಕ್ಕೆ ನಡೆಯಲಿದೆ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ವಿವಾಹ..!

ಮೊನ್ನೆ ರಾತ್ರಿಯಿಂದ ರಾಜ್ಯದಲ್ಲಿ ಲಾಕ್​ಡೌನ್​ ಘೋಷಣೆಯಾಗಿದೆ. ಈಗಾಗಲೇ ರಾಜಧಾನಿ ತೊರೆದು ವಲಸಿಗರು ತಮ್ಮ ತಮ್ಮ ಊರು ಸೇರಿದ್ದಾರೆ. ಬೆಳಗ್ಗೆ ಅಗತ್ಯ ಸೇವೆಗಳ ಸಮಯ ಮುಗಿಯುತ್ತಿದ್ದಂತೆ ಜನರು ಕೂಡ ಸ್ವಯಂ ಆಗಿ ಅಂಗಡಿ ಬಂದ್​ ಮಾಡುವ ಮೂಲಕ ಈ ಜನತಾ ಕರ್ಪ್ಯೂಗೆ ಬೆಂಬಲ ನೀಡುತ್ತಿರುವ ದೃಶ್ಯ ಕಂಡು ಬಂದಿದೆ
Published by:Anitha E
First published: