HOME » NEWS » Entertainment » MAKERS OF PRABHAS ADIPURUSH WILL SPEND RS250 CRORE ON VFX HG

‘ಆದಿಪುರುಷ’ನಾಗಿ ಬಾಹುಬಲಿ ಪ್ರಭಾಸ್​; 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆಯಾ ಈ ಸಿನಿಮಾ?

Adipurush: ‘ಬಾಹುಬಲಿ’ ಮತ್ತು ‘ಬಾಹುಬಲಿ 1 ’ ಹಿಟ್​​ ಸಿನಿಮಾದಲ್ಲಿ ನಟಿಸಿದ ಪ್ರಭಾಸ್​ ನಂತರ ಸಾಹೋದಲ್ಲಿ ನಟಿಸಿದರು. ಈ ಮೂರು ಸಿನಿಮಾಗಳು ಬಿಗ್​ ಬಜೆಟ್​ ಸಿನಿಮಾಗಳಾಗಿವೆ. ಇದೀಗ ‘ಆದಿಪುರುಷ’ ಸಿನಿಮಾ ಕೂಡ ಅದೇ ಸಾಲಿಗೆ ಸೇರುತ್ತಿದೆ.

news18-kannada
Updated:August 22, 2020, 4:44 PM IST
‘ಆದಿಪುರುಷ’ನಾಗಿ ಬಾಹುಬಲಿ ಪ್ರಭಾಸ್​; 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆಯಾ ಈ ಸಿನಿಮಾ?
ಪ್ರಭಾಸ್
  • Share this:
ಬಾಹುಬಲಿ ಸಿನಿಮಾದ ಮೂಲಕ ನ್ಯಾಷನಲ್​​​ ಸ್ಟಾರ್​ ಆದ  ಯಂಗ್​​ ರೆಬೆಲ್​​ ಸ್ಟಾರ್​​ ಪ್ರಭಾಸ್​​​​​ ಇದೀಗ ‘ಆದಿಪುರುಷ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಬಿಗ್ ಬಜೆಟ್​ನಲ್ಲಿ ಆದಿಪುರುಷ ಸಿನಿಮಾ ನಿರ್ಮಾಣವಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆ  ಕೇಳಿಬರುತ್ತಿದೆ.

‘ಬಾಹುಬಲಿ’ ಮತ್ತು ‘ಬಾಹುಬಲಿ 1 ’ ಹಿಟ್​​ ಸಿನಿಮಾದಲ್ಲಿ ನಟಿಸಿದ ಪ್ರಭಾಸ್​ ನಂತರ ಸಾಹೋದಲ್ಲಿ ನಟಿಸಿದರು. ಈ ಮೂರು ಸಿನಿಮಾಗಳು ಬಿಗ್​ ಬಜೆಟ್​ ಸಿನಿಮಾಗಳಾಗಿವೆ. ಇದೀಗ ‘ಆದಿಪುರುಷ’ ಸಿನಿಮಾ ಕೂಡ ಅದೇ ಸಾಲಿಗೆ ಸೇರುತ್ತಿದೆ. ಸುಮಾರು 500 ಕೊಟಿ ಬಜೆಟ್​​ನಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕಾಲಿವುಡ್​ನಲ್ಲಿ ಕೇಳಿಬಂದಿದೆ.

ಇದರ ಜೊತೆಗೆ ‘ಆದಿಪುರಷ’ ಸಿನಿಮಾದಲ್ಲಿ ವಿಎಫ್​ಎಕ್ಸ್​ ತಂತ್ರಜ್ನಾನಕ್ಕಾಗಿ 250 ಕೋಟಿ ರೂಪಾಯಿ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿಂದೆ ಸೂಪರ್​​ ಸ್ಟಾರ್​​​ ರಜನಿಕಾಂತ್​​ ರೋಬೊ 2.0 ಸಿನಿಮಾದಲ್ಲಿ ವಿಎಫ್​ಎಕ್ಸ್​ ತಂತ್ರಜ್ನಾನಕ್ಕೆ ಹೆಚ್ಚಿನ ಬಂಡವಾಳ ಹಾಕಿದ್ದರು. ಇದೀಗ ಡಾರ್ಲಿಂಗ್​ ಪ್ರಭಾಸ್​ ‘ಆದಿಪುರಷ’ನಾಗಿ ಹೊರಬರುತ್ತಿದ್ದಾರೆ. ಹಾಗಾಗಿ ಚಿತ್ರತಂಡ ಬಿಗ್​ ಬಜೆಟ್​ನಲ್ಲಿ ಖರ್ಚು ಮಾಡುವ ಮೂಲಕ ಸಿನಿಮಾ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Youtube Video

ಕಳೆದ ವರ್ಷ ಪ್ರಭಾಸ್​ ನಟನೆಯ ‘ಸಾಹೋ’ ಸಿನಿಮಾ ರಿಲೀಸ್​ ಆಯಿತು. ಆದರೆ ಅಂದುಕೊಂಡಷ್ಟು ಈ ಸಿನಿಮಾ ಯಶಸ್ಸುಗಳಿಸಲಿಲ್ಲ. ಬಾಲಿವುಡ್​ ನಟಿ ಶ್ರದ್ಧಾ ಕಪೂರ್​​ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸದ್ಯ ಪ್ರಭಾಸ್​ ‘ರಾಧೆ ಶ್ಯಾಮ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಸಿನಿಮಾ 2021ರಲ್ಲಿ ತೆರೆಗೆ ಬರಲಿದೆ.
Published by: Harshith AS
First published: August 22, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories