ಬಾಲಿವುಡ್ ನಲ್ಲಿ ನಟ ಸಂಜಯ್ ದತ್ (Sanjay Dutt) ಅವರ ಚಿತ್ರ ಬಿಡುಗಡೆಯಾಗುತ್ತಿದೆ ಅಂತ ತಿಳಿದರೆ ಸಾಕು ಅವರ ಅಭಿಮಾನಿಗಳು ಅವರು ಚಿತ್ರದಲ್ಲಿ ಯಾವ ಪಾತ್ರ ಮಾಡುತ್ತಿದ್ದಾರೆ? ಚಿತ್ರದ ಕಥೆ ಏನು? ಸಂಜಯ್ ದತ್ ಅವರ ಲುಕ್ ಹೇಗಿರುತ್ತೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಿಗೆ ಕಾಡಲು ಶುರುವಾಗುತ್ತವೆ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾದ ಕೆಜಿಎಫ್: ಚಾಪ್ಟರ್ 2 (KGF: Chapter 2)ಚಿತ್ರದಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ವಿರುದ್ಧ ಪಾತ್ರದಲ್ಲಿ ನಟಿಸಿ ಸಂಜಯ್ ದತ್ ಅವರು ಮತ್ತೊಮ್ಮೆ ಅವರು ಎಂತಹ ಒಳ್ಳೆಯ ನಟ ಅಂತ ಸಾಬೀತು ಪಡಿಸಿದ್ದರು.
ನಟ ಸಂಜಯ್ ದತ್ ಅವರ ಇನ್ನೊಂದು ಚಿತ್ರ ಬಿಡುಗಡೆ
ಈಗ ನಟ ಸಂಜಯ್ ದತ್ ಅವರ ಇನ್ನೊಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಹೌದು. ಬಾಲಿವುಡ್ ನ ಇನ್ನೊಬ್ಬ ನಟ ರಣಬೀರ್ ಕಪೂರ್ ಮತ್ತು ಇತರ ನಟರು ನಟಿಸಿರುವ ಶಂಶೇರಾ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ತುಂಬಾನೇ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಚಿತ್ರದ ಪ್ರಕಟಣೆಯ ನಂತರ, ಪ್ರತಿಯೊಬ್ಬ ನಟರು ಚಿತ್ರದಲ್ಲಿ ಹೇಗೆ ಕಾಣಲಿದ್ದಾರೆ ಮತ್ತು ಅವರ ಪಾತ್ರಗಳು ಹೇಗಿರಲಿವೆ ಅಂತ ಕುತೂಹಲ ಅಭಿಮಾನಿಗಳಲ್ಲಿ ಈಗಾಗಲೇ ಹೆಚ್ಚಾಗಿದೆ.
ಕೆಲವು ದಿನಗಳ ಹಿಂದೆ, ನಟ ರಣಬೀರ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ಆನ್‌ಲೈನ್ ನಲ್ಲಿ ತುಂಬಾನೇ ವೈರಲ್ ಆಗಿತ್ತು.
ಶಂಶೇರಾ ಚಿತ್ರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಚಿತ್ರ ತಯಾರಕರು ಈಗ ದರೋಗಾ ಶುದ್ಧ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಂಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ ನೋಡಿ. ಈ ಪೋಸ್ಟರ್ ನೋಡಲು ತುಂಬಾನೇ ಇನ್ಟೆನ್ಸ್ ಆಗಿದೆ ಎಂದು ಹೇಳಬಹುದು. ಇತ್ತೀಚೆಗೆ ರಣಬೀರ್ ಕಪೂರ್ ಅವರನ್ನು ವಿವಾಹವಾದ ನಟಿ ಆಲಿಯಾ ಭಟ್ ಸಹ ಬಹುನಿರೀಕ್ಷಿತ ಶಂಶೇರಾ ಚಿತ್ರದ ನಿರ್ಮಾಪಕರು ಚಿತ್ರದ ಅಧಿಕೃತ ಪೋಸ್ಟರ್ ಅನ್ನು ಸೋಮವಾರ ಬಿಡುಗಡೆ ಮಾಡಿ ಅದರ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದ ಸ್ವಲ್ಪ ಸಮಯದ ನಂತರ ತಮ್ಮ ಪತಿಯ ಚಿತ್ರದ ಪೋಸ್ಟರ್ ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Akshaye Khanna: ಬೋಳುತಲೆ ಇದ್ದರೇನಾಯ್ತು? ನಟ ಅಕ್ಷಯ್ ಖನ್ನಾ ಹೀಗಂತಾರೆ
ಕರಣ್ ಮಲ್ಹೋತ್ರಾ ನಿರ್ದೇಶನದ ಈ ಆಕ್ಷನ್ ಕಥೆಯುಳ್ಳ ಸಿನೆಮಾವನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ ಮತ್ತು ಜುಲೈ 22, 2022 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಟಿ ಆಲಿಯಾ ಭಟ್ ಅವರು ಶಂಶೇರಾ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪತಿಯನ್ನು 'ಹಾಟ್' ಎಂದು ಕರೆದಿದ್ದಾರೆ.
ನಾಯಕ ಪಾತ್ರದಲ್ಲಿ ರಣಬೀರ್ ಕಪೂರ್
ಏತನ್ಮಧ್ಯೆ, ಶಂಶೇರಾದಲ್ಲಿ ರಣಬೀರ್ ಕಪೂರ್ ದೊಡ್ಡ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆದ ಸಂಜು ಚಿತ್ರದಲ್ಲಿ ನಟಿಸಿ ಸುಮಾರು ನಾಲ್ಕು ವರ್ಷಗಳ ನಂತರ, ರಣಬೀರ್ ದೊಡ್ಡ ಪರದೆಗೆ ಮತ್ತೊಮ್ಮೆ ಮರಳುತ್ತಿದ್ದಾರೆ ಎಂದು ಹೇಳಬಹುದು. ಪ್ರೇಕ್ಷಕರು ಮತ್ತು ಅಭಿಮಾನಿಗಳು ರಣಬೀರ್ ಅವರನ್ನು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ನೋಡಲು ತುಂಬಾನೇ ಕಾತುರರಾಗಿದ್ದಾರೆ.
ಶಂಶೇರಾ ಚಿತ್ರದ ವಿಶೇಷತೆ ಏನು
ಶಂಶೇರಾ ಚಿತ್ರದ ಕಥೆಯು ಕಾಲ್ಪನಿಕ ನಗರವಾದ ಕಾಜಾ ಎಂಬಲ್ಲಿ ಶುರುವಾಗುತ್ತದೆ, ಅಲ್ಲಿ ಶುದ್ಧ್ ಸಿಂಗ್ ಎಂಬ ಕ್ರೂರ ಸರ್ವಾಧಿಕಾರಿ ಬುಡಕಟ್ಟು ಜನಾಂಗದವರನ್ನು ಸೆರೆಹಿಡಿದು, ಗುಲಾಮರನ್ನಾಗಿ ಮಾಡಿಕೊಂಡು ಚಿತ್ರಹಿಂಸೆ ನೀಡುತ್ತಾನೆ. ಗುಲಾಮಗಿರಿಗೆ ಒಳಗಾದ ಒಬ್ಬ ವ್ಯಕ್ತಿಯ ಕಥೆ ಇದು, ಅವನು ನಂತರ ಹೇಗೆ ತನ್ನ ಸಮುದಾಯದಲ್ಲಿ ಹೇಗೆ ಒಬ್ಬ ದೊಡ್ಡ ನಾಯಕನಾಗಿ ಹೊರ ಹೊಮ್ಮುತ್ತಾನೆ ಎಂಬುದೇ ಈ ಚಿತ್ರದ ಕಥೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Sara Tendulkar: ರಾಜಕುಮಾರಿಯಂತೆ ಕಂಗೊಳಿಸುತ್ತಿರುವ ಸಾರಾ, ತೆಂಡೂಲ್ಕರ್ ಮಗಳ ಹೊಸ ಲುಕ್ಗೆ ಮನಸೋತ ಅಭಿಮಾನಿಗಳು
ಶಂಶೇರಾ ಚಿತ್ರ ಹೊರತುಪಡಿಸಿದರೆ, ಸಂಜಯ್ ದತ್ ಅವರ ಬಳಿ ಗುಡ್ಚಡಿ ಮತ್ತು ಬಾಪ್ ಎಂಬ ಎರಡು ಚಿತ್ರಗಳು ಇವೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ