news18-kannada Updated:December 19, 2020, 10:48 AM IST
Major First Look
26 ನವೆಂಬರ್ 2008ರಲ್ಲಿ ಮುಂಬೈ ತಾಜ್ ಹೋಟೆಲ್ನಲ್ಲಿ ಸಿಲುಕಿದವರನ್ನು ಕಾಪಾಡಲು ಹೋಗಿ ಉಗ್ರರ ಗುಂಡಿಗೆ ತನ್ನ ಪ್ರಾಣವನ್ನೇ ಬಲಿ ನೀಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕಥೆ ತೆಲುಗಿನಲ್ಲಿ ಸಿನಿಮಾವಾಗಿ ತಯಾರಾಗುತ್ತಿದೆ. ಸಂದೀಪ್ ಉನ್ನಿಕೃಷ್ಣನ್ ಕೇರಳಕ್ಕೆ ಸೇರಿದವರಾದರೂ, ಅವರು ಬೆಳೆದದ್ದು ಹಾಗೂ ನೆಲೆಸಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಮಾಜಿ ಇಸ್ರೋ ಅಧಿಕಾರಿ ಕೆ. ಉನ್ನಿಕೃಷ್ಣನ್ ಹಾಗೂ ತಾಯಿ ಧನಲಕ್ಷ್ಮಿ ಉನ್ನಿಕೃಷ್ಣನ್ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಈ ಘಟನೆ ನಡೆದು 12 ವರ್ಷಗಳಾದರೂ ಸಂದೀಪ್ ಉನ್ನಿಕೃಷ್ಣನ್ ಅವರ ಬಗ್ಗೆ ಕಥೆ ಮಾಡಲು ಯಾವ ಕನ್ನಡ ನಿರ್ದೇಶಕರೂ ಮುಂದೆ ಬರಲಿಲ್ಲ. ಈಗ ಅದು ತೆಲುಗಿನಲ್ಲಿ ‘ಮೇಜರ್’ ಹೆಸರಿನಲ್ಲಿ ತಯಾರಾಗುತ್ತಿದೆ.
ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕೆಲವು ಅಂಶಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಟ ಮಹೇಶ್ ಬಾಬು 'ಮೇಜರ್' ಸಿನಿಮಾ ನಿರ್ಮಿಸಿದ್ದಾರೆ. ಅದರಲ್ಲಿ ಹೀರೋ ಆಗಿ ಕ್ಷಣಂ, ಗೂಡಚಾರಿ, ಎವರು, ಖ್ಯಾತಿಯ ಅಡಿವಿ ಶೇಷ್ ನಟಿಸಿದ್ದಾರೆ. ಸದ್ಯ 'ಮೇಜರ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
Neha Kakkar: ವಿವಾಹವಾಗಿ 54 ದಿನಕ್ಕೆ ನೇಹಾ ಕಕ್ಕರ್ನಿಂದ ಅಭಿಮಾನಿಗಳಿಗೆ ಸಿಹಿಸುದ್ದಿ!
ಕೈಯಲ್ಲಿ ಗನ್ ಹಿಡಿದು, ಕಮಾಂಡೋ ಗೆಟಪ್ನಲ್ಲಿ ನಟ ಅಡಿವಿ ಶೇಷ್ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಶಶಿಕಿರಣ್ ತಿಕ್ಕಾ ಇದರ ನಿರ್ದೇಶನ ಮಾಡಿದ್ದಾರೆ. ಇನ್ನು ನಿರ್ಮಾಪಕ ಮಹೇಶ್ ಬಾಬು, ಈ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿಕೊಂಡು, ಅಡಿವಿ ಶೇಷ್ಗೆ ಜನ್ಮದಿನ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಿನಿಮಾಗೆ ಮಹೇಶ್ ಜೊತೆ ಸೋನಿ ಪಿಕ್ಚರ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಹಣ ಹಾಕಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧಗೊಳ್ಳಲಿರುವ ಈ ಸಿನಿಮಾದ ಶೇ.50ರಷ್ಟು ಚಿತ್ರೀಕರಣ ಲಾಕ್ಡೌನ್ಗಿಂತ ಮೊದಲೇ ಕಂಪ್ಲೀಟ್ ಆಗಿತ್ತು.
ವಿಶೇಷ ಎಂದರೆ ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರವನ್ನು ಮಾಡುವುದಕ್ಕಾಗಿ ಅಡಿವಿ ಶೇಷ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಟ-ಅಡಿವಿ ಶೇಷ್ ಬೆಂಗಳೂರಿನಲ್ಲಿರುವ ಸಂದೀಪ್ ಅವರ ಪೋಷಕರನ್ನು ಭೇಟಿ ಮಾಡಿದ್ದರು ಎಂಬುವುದು ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಚಿತ್ರದಲ್ಲಿ ಸಂದೀಪ್ ಅವರ ಬದುಕಿನ ಮತ್ತೊಂದು ಆಯಾಮವನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ತಂಡ ಹೇಳಿಕೊಂಡಿದ್ದು, ಶೋಭಿತಾ ಧುಲಿಪಲಾ, ಸಾಯಿ ಮಂಜ್ರೇಕರ್ ಕೂಡ 'ಮೇಜರ್'ನಲ್ಲಿ ಬಣ್ಣ ಹಚ್ಚಿದ್ದು, ಈ ಬಯೋಪಿಕ್ , ತೆರೆಮೇಲೆ ಹೇಗೆ ಮೂಡಿಬರಲಿದೆ ಎಂಬುವುದನ್ನು ಕಾದು ನೊಡಬೇಕಿದೆ.
ಗ್ರಾಮ ಪಂಚಾಯಿತಿಗೂ ಶುರುವಾಯಿತು ಸ್ಟಾರ್ ಪ್ರಚಾರ; ಅಭ್ಯರ್ಥಿ ಪರ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ಮತಯಾಚನೆ
ಇತ್ತೀಚೆಗಷ್ಟೆ ಮೇಜರ್ ಚಿತ್ರತಂಡದ ಕಡೆಯಿಂದ ರಿವೀಲ್ ಆದ ಟೆಸ್ಟ್ ಲುಕ್ನಲ್ಲಿ ಸಂದೀಪ್ ಉನ್ನಿಕೃಷ್ಣನ್ ಅರ್ಧ ಮುಖದ ಜೊತೆಗೆ, ಅಡಿವಿ ಶೇಷ್ ಅವರ ಅರ್ಧ ಮುಖವನ್ನ ತೋರಿಸಲಾಗಿತ್ತು. ಈ ಟೆಸ್ಟ್ ಲುಕ್ಗೆ ಜನರು ಫಿದಾ ಅಗಿದ್ದಾರೆ. ಕಾರಣ, ಡಿಟ್ಟೋ ಸಂದೀಪ್ ಉನ್ನಿಕೃಷ್ಣನ್ಗೆ ಮ್ಯಾಚ್ ಆಗುವಂತಿದೆ ನಟ ಆದಿವಿಶೇಷ್ ಅವರ ಮುಖ. ನಟ ಮಹೇಶ್ ಬಾಬು ಟೆಸ್ಟ್ ಲುಕ್ ಬಗ್ಗೆ ಟ್ವೀಟ್ ಮಾಡಿ, ಆದಿವಿಶೇಷ್ ಹಾಗೂ ಇಡೀ ತಂಡಕ್ಕೆ ಶುಭ ಕೋರಿದ್ದರು.
Published by:
Vinay Bhat
First published:
December 19, 2020, 10:48 AM IST