Kannada Entertainment : ಕನ್ನಡದ ಟಾಪ್​ ಎಂಟರ್​ಟೈನ್​ಮೆಂಟ್​ ಚಾನೆಲ್​ಗಳಲ್ಲಿ ಸ್ಥಾನ ಪಲ್ಲಟ!

Kannada Entertainment: ಎಲ್ಲ ಚಾನೆಲ್​ಗಳ ಹೆಡ್​(Head)ಗಳು ಕೂಡ ತಮ್ಮ ತಮ್ಮ ಚಾನೆಲ್​ ಅನ್ನು ನಂಬರ್​ 1 ಸ್ಥಾನಕ್ಕೆ ತರಲು ಪ್ರತಿದಿನ ಶ್ರಮ ಹಾಕುತ್ತಿರುತ್ತಾರೆ. ಆದರೆ ಇದೀಗ ಟಾಪ್​ ಎಂಟರ್​ಟೈನ್​ಮೆಂಟ್ ಚಾನೆಲ್​ಗಳಲ್ಲಿ ಸ್ಥಾನ ಪಲ್ಲಟ ಆಗಿದೆ. ಹೌದು, ಹೆಸರಾಂತ ತಂತ್ರಜ್ಞರು ತಮ್ಮ ಕೆಲಸವನ್ನು ತೊರೆದು, ಮತ್ತೊಂದು ಕಡೆ ಸೇರಿಕೊಂಡಿದ್ದಾರೆ.

ಕನ್ನಡ ಚಾನೆಲ್​ಗಳು

ಕನ್ನಡ ಚಾನೆಲ್​ಗಳು

  • Share this:
ನಮ್ಮ ಕನ್ನಡ ಚಾನೆಲ್​(Kannada Channels)ಗಳ ಹವಾ ಜೋರಾಗಿದೆ. ಅದರಲ್ಲೂ ಎಂಟರ್​ಟೈನ್​ಮೆಂಟ್(Entertainment) ವಿಚಾರದಲ್ಲಿ ನೋ ಕಾಂಪ್ರಮೈಸ್(Compromise)​. ಸಿನಿಮಾ ಶೂಟಿಂಗ್ ಮಾಡುವಂತೆ ಹಣ ಖರ್ಚು ಮಾಡಿ ಧಾರಾವಾಹಿಗಳನ್ನು ತೆಗೆಯುತ್ತಿದ್ದಾರೆ. ನಮ್ಮ ಕನ್ನಡ ಟಾಪ್​ ಎಂಟರ್​ಟೈನ್​ಮೆಂಟ್​ ಚಾನೆಲ್​ಗಳು ಹೊಸ ಹೊಸ ಐಡಿಯಾ(Idea)ಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದೆ. ಜೀ ಕನ್ನಡ(Zee Kannada), ಕಲರ್ಸ್ ಕನ್ನಡ(Colors Kannada), ಸ್ಟಾರ್​ ಸುವರ್ಣ(Star Suvarna)  ಚಾನೆಲ್​ಗಳಲ್ಲಿ ಸೂಪರ್​ ಡೂಪರ್​ ರಿಯಾಲಿಟಿ ಶೋಗಳು ಮತ್ತು ಧಾರಾವಾಹಿಗಳು ಜನರ ಮನಸ್ಸನ್ನು ಗೆದ್ದಿದೆ. ಇದಕ್ಕೆಲ್ಲ ಕಾರಣ ಚಾನೆಲ್​ಗಳಲ್ಲಿ ಕೆಲಸ ಮಾಡುತ್ತಿರುವವರು. ಅದರಲ್ಲೂ ಆ ಚಾನೆಲ್​ಗಳ ಜವಾಬ್ದಾರಿ ತೆಗೆದುಕೊಂಡಿರುವವರ ಶ್ರಮ. ಅವರ ಐಡಿಯಾಗಳಿಂದಲೇ ಈ ಚಾನೆಲ್​ಗಳಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಬಂದಿದೆ ಅಂದರೆ ತಪ್ಪಲ್ಲ. ಎಲ್ಲ ಚಾನೆಲ್​ಗಳ ಹೆಡ್​(Head)ಗಳು ಕೂಡ ತಮ್ಮ ತಮ್ಮ ಚಾನೆಲ್​ ಅನ್ನು ನಂಬರ್​ 1 ಸ್ಥಾನಕ್ಕೆ ತರಲು ಪ್ರತಿದಿನ ಶ್ರಮ ಹಾಕುತ್ತಿರುತ್ತಾರೆ. ಆದರೆ ಇದೀಗ ಟಾಪ್​ ಎಂಟರ್​ಟೈನ್​ಮೆಂಟ್ ಚಾನೆಲ್​ಗಳಲ್ಲಿ ಸ್ಥಾನ ಪಲ್ಲಟ ಆಗಿದೆ. ಹೌದು, ಹೆಸರಾಂತ ತಂತ್ರಜ್ಞರು ತಮ್ಮ ಕೆಲಸವನ್ನು ತೊರೆದು, ಮತ್ತೊಂದು ಕಡೆ ಸೇರಿಕೊಂಡಿದ್ದಾರೆ. ಹಾಗಿದ್ದರೇ ಯಾವ ಚಾನೆಲ್​ಗಳಲ್ಲಿ ಯಾವ್ಯಾವ ಬದಲಾವಣೆಗಳು ಆಗಿದೆ ಎಂದು ನೋಡೋಣ..

ಸ್ಟಾರ್​ ಸುವರ್ಣ್​, ಬ್ಯುಸಿನೆಸ್​ ಹೆಡ್​ ಬದಲಾವಣೆ

ಸ್ಟಾರ್​ ಸುವರ್ಣ ಈ ಹಿಂದಿನಿಂದಲೂ ರಿಯಾಲಿಟಿ ಶೋಗಳು ಮಾಡಿಕೊಂಡು ಹೆಸರು ಮಾಡಿತ್ತು. ಈಗಲೂ ಈ ಚಾನೆಲ್​ನಲ್ಲಿ ಹಲವಾರು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದೆ. ಜೊತೆಗೆ ಜನ ಮೆಚ್ಚುವ ಸೀರಿಯಲ್​ಗಳು ಸಾಕಷ್ಟಿವೆ. ಇದೆಲ್ಲದರ ನಡುವೆ ಈ ಚಾನೆಲ್​ನ ಬ್ಯುಸಿನೆಸ್ ಹೆಡ್​ ಆಗಿದ್ದ ಸಾಯಿ ಪ್ರಸಾದ್ ಅವರು ಕೆಲವನ್ನು ತೊರೆದಿದ್ದಾರೆ. ಸನ್​ ನೆಟ್​ವರ್ಕ್​ ಅಥವಾ ಹಾಟ್​ಸ್ಟಾರ್​ನ ಮುಖ್ಯಸ್ಥರಾಗುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಹಾಟ್​ಸ್ಟಾರ್​ನೊಂದಿಗೆ ಮಾತುಕತೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.

ಸುವರ್ಣ ಚಾನೆಲ್​ಗೆ ಹೊಸ ಬ್ಯುಸಿನೆಸ್​ ಹೆಡ್​ 

ಇನ್ನೂ ಸಾಯಿ ಪ್ರಸಾದ ಅವರ ಜಾಗಕ್ಕೆ ಸುಷ್ಮಾ ರಾಜೇಶ್​ ಅವರನ್ನು ನೇಮಕ ಮಾಡಲಾಗಿದೆ. ಸುಷ್ಮಾ ರಾಜೇಶ್​ ಅವರು ಕಳೆದ 18 ವರ್ಷಗಳಿಂದ ಸ್ಟಾರ್ ನೆಟ್​ವರ್ಕ್​ನಲ್ಲೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸ್ಟಾರ್​ ಉತ್ಸವ್​ ಹಾಗೂ ಲೈಫ್​ ಒಕೆ ಎರಡು ಚಾನೆಲ್​ಗಳಿಗೆ ಹೆಡ್​ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಸ್ಟಾರ್​  ಸುವರ್ಣ ಚಾನೆಲ್​ಗೆ ಬ್ಯುಸಿನೆಸ್​ ಹೆಡ್​ ಆಗಿ ಸೇರಿಕೊಂಡಿದ್ದಾರೆ. ಸ್ಟಾರ್​ ನೆಟ್​ವರ್ಕ್​ಗೆ ಇವರೇ ಮುಖ್ಯ  ಸ್ಟ್ಯಾಟರ್ಜಿ. ಇವರ ಆಲೋಚನೆಗಳೇ ಡಿಫ್ರೆಂಟ್​. ಅವರ ಹೊಸ ಹೊಸ ಐಡಿಯಾಗಳು ಏನು ಎಂಬುದರ ಬಗ್ಗೆ ಕೆಲವೇ ದಿನಗಳಲ್ಲಿ ಕನ್ನಡಿಗರಿಗೂ ತಿಳಿಯಲಿದೆ

ಸುವರ್ಣ ಚಾನಲ್​ಗೆ ಹೊಸ ಫಿಕ್ಷನ್​ ಹೆಡ್​

ಇನ್ನೂ ಸುವರ್ಣ ಎಂಟರ್​ಟೈನ್​ಮೆಂಟ್​ ಚಾನೆಲ್​​ನಲ್ಲಿ ಮತ್ತೊಂದು ಬದಲಾವಣೆಯಾಗಿದೆ. ಉದಯ ಟಿವಿಯಲ್ಲಿ ಪ್ರೋಗ್ರಾಂ ಹೆಡ್​ ಆಗಿದ್ದ ಶಿಲ್ಪಾ ಎಂಬುವವರು, ಸುವರ್ಣ ಚಾನೆಲ್​ನಲ್ಲಿ ಫಿಕ್ಷನ್​ ಹೆಡ್​ ಆಗಿ ಸೇರಿಕೊಂಡಿದ್ದಾರೆ. ಇನ್ನೂ ಈ ಬದಲಾವಣೆಯಿಂದ ಉದಯ ಟಿವಿ ಪ್ರೋಗ್ರಾಂ ಹೆಡ್​ ಜಾಗ ಖಾಲಿಯಾಗಿದೆ. ಈ ಸ್ಥಾನವನ್ನು ಭರ್ತಿ ಮಾಡಲು ಉದಯ ಟಿವಿ ಹುಡುಕುತ್ತಿದೆ.

ಇದನ್ನು ಓದಿ : ಕನ್ನಡ ಕಿರುತರೆಯಲ್ಲಿ ಹೊಸ ಧಾರಾವಾಹಿಗಳ ಸುಗ್ಗಿ, ಸೀರಿಯಲ್​​ ಪ್ರಿಯರಿಗೆ ತ್ರಿಬಲ್​ ಧಮಾಕ!

ಜೀ ಕನ್ನಡದಲ್ಲೂ ಮೇಜರ್​ ಬದಲಾವಣೆ

ಜೀಕನ್ನಡದಲ್ಲಿ ಬರುವ  ಪ್ರತಿಯೊಂದು ಧಾರಾವಾಹಿಯು ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಇದರಲ್ಲಿ ಬರುವ ರಿಯಾಲಿಟಿ ಶೋಗಳು ಅಷ್ಟೇ ಎಲ್ಲರಿಗೂ ಅಚ್ಚುಮೆಚ್ಚು. ಇದಕ್ಕೆಲ್ಲ ಕಾರಣ ಜೀ ಕನ್ನಡ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು. ಹೌದು, ಜೀ ಕನ್ನಡದಲ್ಲಿ ಸದಾ ಹೊಸ ಹೊಸ ಐಡಿಯಾಗಳನ್ನು ಮಾಡಿ, ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತೆ. ಇದೀಗ ರಾಘವೇಂದ್ರ ಹುಣಸೂರು ಅವರ ರೈಟ್​ ಹ್ಯಾಂಡ್ , ನೋಟಿಸ್​ ಪೀರಿಯಡ್​ನಲ್ಲಿ ಇದ್ದಾರೆ. 50 ಪರ್ಸೆಂಟ್ ಪಾಲು ಇವರದ್ದು. ಕಳೆದ 2 ವರ್ಷಗಳಲ್ಲಿ ಆಂಟನಿ ದಾಸ್ 8 ಸಲ ರಿಸೈನ್ ಮಾಡಿದ್ದಾರೆ. ಇದುವರೆಗೂ ಅವರ ರಾಜೀನಾಮೆಯನ್ನು ತಿರಸ್ಕರಿಸುತ್ತಲೇ ಬಂದಿದ್ದ ಸಂಸ್ಥೆ, ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅವರನ್ನು ಬೀಳ್ಕೊಡಲು ಸಜ್ಜಾಗಿದೆ.

ಇದನ್ನು ಓದಿ :  Weekend With Ramesh ಮತ್ತೆ ಶುರುವಾಗ್ತಿದೆ, ಆದ್ರೆ ಈ ಸಲ ಜೀ ಕನ್ನಡದಲ್ಲಿ ಅಲ್ಲ, ಮತ್ತೆಲ್ಲಿ?

ರಾಘವೇಂದ್ರ ಹುಣಸೂರು ಅವರಿಗೆ ಹೆಚ್ಚುವರಿ ಜವಾಬ್ದಾರಿ

ಈಗಾಗಲೇ ಜೀ ಕನ್ನಡ ಬ್ಯುಸಿನೆಸ್​ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇದೀಗ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುತ್ತಿದೆ. ಜೀ ಕನ್ನಡ OTT​ ಹೆಡ್​ ಜವಾಬ್ದಾರಿ ಕೂಡ ಇನ್ನುಮುಂದೆ ರಾಘವೇಂದ್ರ ಹುಣಸೂರು ಅವರ ಮೇಲಿದೆ. ಈ ಮಧ್ಯೆ ವೀಕೆಂಡ್ ವಿತ್​ ರಮೇಶ್​ ಸೀಸನ್​ 5 ಜೀ 5 ನಲ್ಲೇ ಪ್ರಸಾರವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಜೀ 5 OTT ಹೆಚ್ಚುವರಿ ಜವಾಬ್ದಾರಿಯನ್ನು ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮವನ್ನು ಜೀ 5 OTT ಯಲ್ಲಿ ಪ್ರಸಾರ ಮಾಡಿ, ಎರಡೂ ಕಡೆಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುವ ಹೆಚ್ಚಿನ ಜವಾಬ್ದಾರಿ ಅವರ ಮೇಲಿದೆ
Published by:Vasudeva M
First published: