ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ರೇಖಾ ಮೋಹನ್ ಹಾಡಿರುವ ಲೆಟೆಸ್ಟ್ ಹಾಡೊಂದು ಸದ್ಯ ವೈರಲ್ ಆಗುತ್ತಿದೆ. ಯಾರು ಈ ರೇಖಾ ಮೋಹನ್ ಅಂತೀರಾ..? ಅದೇ ರೀ... ಮಜಾ ಟಾಕೀಸ್ನಲ್ಲಿ ಹಾಡುತ್ತಾ ರಂಜಿಸುತ್ತಿದ್ದ ರೆಮೊ. ರೆಮೊ ಎಂದೇ ಖ್ಯಾತರಾಗಿರುವ ಗಾಯಕಿ ಬೆಂಗಳೂರಿಗರಿಗಾಗಿ ಒಂದು ಸಖತ್ ಹಾಡು ಹಾಡಿದ್ದಾರೆ.
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ರೆಮೊ ಆಗಾಗ ತಮ್ಮ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಅವರ ಲೆಟೆಸ್ಟ್ ಹಾಡೊಂದು ನೆಟ್ಟಿಗರು ಹಾಗೂ ಸೆಲೆಬ್ರಿಟಿಗಳ ಮನ ಗೆದ್ದಿದೆ.
ಕೊರೋನಾ ಭೀತಿಯಿಂದಾಗಿ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಾಕಷ್ಟು ಮಂದಿ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರವನ್ನು ಮತ್ತೆ ಲಾಕ್ಡೌನ್ ಮಾಡಲಾಗಿದೆ.
View this post on Instagram
FOR ALL BENGALORIANS OF ALL BENGALOORIANS FROM A BENGALOORIAN😍❤️ #nammabengaluru #bengloor
'ನಿನ್ನೆ ಲಾಕ್ಡೌನ್ ಮತ್ತೆ ಆರಂಭವಾದಾಗ ಮನೆಯಲ್ಲಿ ಕುಳಿತು ಈ ಹಾಡನ್ನು ಗುನುಗುನಿಸುತ್ತಿದ್ದೆ. ಆಗ ನನ್ನ ಮಗಳು ಇದು ಚೆನ್ನಾಗಿದೆ. ಈ ಹಾಡನ್ನು ಒಮ್ಮೆ ರೆಕಾರ್ಡ್ ಮಾಡೋಣ ಅಂತ ಹೇಳಿದಳು. ಅದಕ್ಕೆ ಐಪ್ಯಾಡ್ ಹಾಗೂ ಇಯರ್ ಫೋನ್ ಹಿಡಿದು ಹಾಡಿ, ಅದನ್ನು ರೆಕಾರ್ಡ್ ಮಾಡಿದೆವು' ಎಂದು ಹಾಡನ್ನು ರೆಕಾರ್ಡ್ ಮಾಡಿದ ಕುರಿತಾಗಿ ಹಂಚಿಕೊಂಡಿದ್ದಾರೆ ರೆಮೊ.
ನಮ್ಮ ಜೀವನವನ್ನು ಕಟ್ಟಿಕೊಟ್ಟ ಊರಿನ ಬಗ್ಗೆ ನನಗೆ ಗೌರವ ಹಾಗೂ ಪ್ರೀತಿ ಇದೆ. ಕಷ್ಟದ ಸಮಯದಲ್ಲಿ ನಾವು ನಮ್ಮ ಊರಿನ ಜೊತೆಗಿದ್ದೇವೆ, ಇಲ್ಲೇ ಇರುತ್ತೇವೆ ಎನ್ನುತ್ತಾರೆ ಗಾಯಕಿ ರೇಖಾ.
ಇದನ್ನೂ ಓದಿ: ಸಮಂತಾ ಕೊಟ್ಟ ಸವಾಲು ಸ್ವೀಕರಿಸಿದ ರಶ್ಮಿಕಾ: ಅಷ್ಟಕ್ಕೂ ಲಿಲ್ಲಿ ಮಾಡಿದ್ದೇನು..?
ಈ ಹಾಡನ್ನು ಬರೆದು ಹಾಡಿರುವ ರೆಮೊ, ನಿನ್ನೆಯಷ್ಟೆ ಇದನ್ನು ತಮ್ಮ ಐಪ್ಯಾಡ್ನಲ್ಲಿ ರೆಕಾರ್ಡ್ ಮಾಡಿದ್ದು, ನಂತರ ಮೊಬೈಲ್ನಲ್ಲಿ ರೆಮೋ ಅವರ ಮಗಳೇ ವಿಡಿಯೋ ಮಾಡಿದ್ದಾಳೆ. ಅದನ್ನು ಸ್ನೇಹಿತೆ ಕಾತ್ಯಾಯಿನಿ ರವಿಕುಮಾರ್ ಅವರ ಬಳಿ ಮೊಬೈಲ್ ಆ್ಯಪ್ನಲ್ಲೇ ಎಡಿಟ್ ಮಾಡಿಸಿದ್ದಾರೆ. ಈ ಹಾಡಿಗೆ ಸೆಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ಹಿಂದೆ ರೆಮೊ ಕೊರೋನಾ ಬಗ್ಗೆಯೂ ಹಾಡನ್ನು ಹಾಡಿದ್ದರು. ಆ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಹೊಸ ಲುಕ್ನಲ್ಲಿ ಮಹೇಶ್ ಬಾಬು: ಸಾಮಾಜಿಕ ಜಾಲತಾಣದಲ್ಲಿ ಡಿಪಿ ಬದಲಿಸಿದ ಪ್ರಿನ್ಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ