Main Mulayam Singh Yadav Teaser: ಬಿಡುಗಡೆಯಾಗಿದೆ 'ಮೈ ಮುಲಾಯಂ ಸಿಂಗ್​ ಯಾದವ್​' ಸಿನಿಮಾದ ಟೀಸರ್​..!

Main Mulayam Singh Yadav movie Teaser: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್​ ಯಾದವ್​ ಅವರ ಜೀವನಾಧಾರಿತ ಸಿನಿಮಾಗೆ 'ಮೈ ಮುಲಾಯಂ ಸಿಂಗ್​ ಯಾದವ್​' ಎಂದು ಟೈಟಲ್​ ಇಡಲಾಗಿದ್ದು. ಅದರ ಟೀಸರ್ ಬಿಡುಗಡೆಯಾಗಿದೆ.

'ಮೈ ಮುಲಾಯಂ ಸಿಂಗ್​ ಯಾದವ್​' ಸಿನಿಮಾದ ಟೀಸರ್​

'ಮೈ ಮುಲಾಯಂ ಸಿಂಗ್​ ಯಾದವ್​' ಸಿನಿಮಾದ ಟೀಸರ್​

  • Share this:
ಬಾಲಿವುಡ್​ನಲ್ಲಿ ಈಗಾಗಲೇ ರಾಜಕೀಯ ವ್ಯಕ್ತಿಗಳ ಮೇಲೆ  ಸಾಕಷ್ಟು ಬಯೋಪಿಕ್​ಗಳು​ ಬಿಡುಗಡೆಯಾಗಿವೆ. ಸಾಲದಕ್ಕೆ ಇನ್ನು ಸಾಕಷ್ಟು ಜೀವನಾಧಾರಿತ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ಹೀಗಿರುವಾಗಲೇ ಬಾಲಿವುಡ್​ನಲ್ಲಿ ರಾಜಕೀಯ ನಾಯಕರೊಬ್ಬರ ಜೀವನಾಧಾರಿತ ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ಅವರ ಜೀವನಾಧಾರಿತ ಸಿನಿಮಾಗೆ 'ಮೈ ಮುಲಾಯಂ ಸಿಂಗ್​ ಯಾದವ್​' ಎಂದು ಟೈಟಲ್​ ಇಡಲಾಗಿದ್ದು. ಅದರ ಟೀಸರ್ ಬಿಡುಗಡೆಯಾಗಿದೆ.ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್​ ಯಾದವ್​ ಅವರ ಬಯೋಪಿಕ್​ ಸೆಟ್ಟೇರಿದೆ. ರಾಜಕೀಯಕ್ಕೆ ಬರುವ ಮೊದಲು ಮುಲಾಯಂ ಸಿಂಗ್​ ಯಾದವ್ ವೃತ್ತಿಯಲ್ಲಿ ಪೈಲ್ವಾನ್​ ಆಗಿದ್ದರು​. ಇದೇ ಕಾರಣಕ್ಕೆ ಇರಬೇಕು ಟೀಸರ್ ಆರಂಭವಾಗುವುದೇ ಕುಸ್ತಿಯ ಅಖಾಡದಲ್ಲಿ. ಅಖಾಡದ ಮಟ್ಟಿಯನ್ನು ಕೈಗೆತ್ತಿಕೊಳ್ಳುವ ಪೈಲ್ವಾನ್​ನ ರೂಪದಲ್ಲಿ ಮುಲಾಯಂ ಎಂಟ್ರಿ ಆಗುತ್ತದೆ.

ಇದನ್ನೂಓದಿ: ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್​ ಪ್ರಕಾಶ್ ಇನ್ನಿಲ್ಲ; ಇಲ್ಲಿದೆ ಅವರ ಸಿನಿ ಜರ್ನಿ..!

ಮೀನಾ ಸೇತಿ ಮಂಡಲ್​ ಅವರ ನಿರ್ಮಾಣದ ಈ ಸಿನಿಮಾವನ್ನು ಸುವೆಂದು ರಾಜ್​ ಘೋಷ್​ ನಿರ್ದೇಶಿಸುತ್ತಿದ್ದಾರೆ. ಅಮಿತ್​ ಸೇತಿ, ಮಿಮೋಹ್​ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದವರು. ಜೊತೆಗೆ ಕೇಂದ್ರದಲ್ಲಿಯೂ ಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ರಾಜಕೀಯ ಇತಿಹಾಸದಲ್ಲಿ ಬಹುದೊಡ್ಡ ಹೆಸರು  ಗಳಿಸಿದ್ದಾರೆ.

Disha Patani: ಲಾಕ್​ಡೌನ್​ನಲ್ಲೂ ಹಾಟ್ ಫೋಟೋಗಳಿಂದ ಪಡ್ಡೆಗಳ ನಿದ್ದೆ ಕದ್ದಿರುವ ನಟಿ ದಿಶಾ..!

First published: