• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Main Mulayam Singh Yadav Trailer: ಕುಸ್ತಿ ಅಖಾಡದಿಂದ ರಾಜಕೀಯದ ರಣರಂಗಕ್ಕೆ ಧುಮುಕಿದ ಮುಲಾಯಂ ಸಿಂಗ್​ ಯಾದವ್​ರ ಕತೆ ಹೇಳುತ್ತೆ ಈ ಟ್ರೇಲರ್..!

Main Mulayam Singh Yadav Trailer: ಕುಸ್ತಿ ಅಖಾಡದಿಂದ ರಾಜಕೀಯದ ರಣರಂಗಕ್ಕೆ ಧುಮುಕಿದ ಮುಲಾಯಂ ಸಿಂಗ್​ ಯಾದವ್​ರ ಕತೆ ಹೇಳುತ್ತೆ ಈ ಟ್ರೇಲರ್..!

'ಮೈ ಮುಲಾಯಂ ಸಿಂಗ್​ ಯಾದವ್'​ ಸಿನಿಮಾದ ಪೋಸ್ಟರ್​

'ಮೈ ಮುಲಾಯಂ ಸಿಂಗ್​ ಯಾದವ್'​ ಸಿನಿಮಾದ ಪೋಸ್ಟರ್​

Main Mulayam Singh Yadav: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ಅವರ ಜೀವನಾಧಾರಿತ ಸಿನಿಮಾಗೆ 'ಮೈ ಮುಲಾಯಂ ಸಿಂಗ್​ ಯಾದವ್​' ಎಂದು ಟೈಟಲ್​ ಇಡಲಾಗಿದೆ. ಈಗ ಅದರ ಟ್ರೇಲರ್​ ಬಿಡುಗಡೆಯಾಗಿದೆ.

  • Share this:

ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್​ ಯಾದವ್​ ಅವರ ಬಯೋಪಿಕ್​ ಸೆಟ್ಟೇರಿರುವ ವಿಷಯ ಗೊತ್ತೇ ಇದೆ. ಈ ಹಿಂದೆಯೇ ಈ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿತ್ತು. 


ರಾಜಕೀಯಕ್ಕೆ ಬರುವ ಮೊದಲು ಮುಲಾಯಂ ಸಿಂಗ್​ ಯಾದವ್ ವೃತ್ತಿಯಲ್ಲಿ ಪೈಲ್ವಾನ್​ ಆಗಿದ್ದರು​. ಇದೇ ಕಾರಣಕ್ಕೆ ರಿಲೀಸ್​ ಆಗಿದ್ದ ಟೀಸರ್​ನಲ್ಲಿ ಕುಸ್ತಿಯ ಅಖಾಡದ ದೃಶ್ಯವನ್ನೇ ಮೊದಲು ತೋರಿಸಲಾಗಿತ್ತು. ಅದರಲ್ಲಿ ಅಖಾಡದ ಮಟ್ಟಿಯನ್ನು ಕೈಗೆತ್ತಿಕೊಳ್ಳುವ ಪೈಲ್ವಾನ್​ನ ರೂಪದಲ್ಲಿ ಮುಲಾಯಂ ಎಂಟ್ರಿ ಆಗುತ್ತದೆ.




ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ಅವರ ಜೀವನಾಧಾರಿತ ಸಿನಿಮಾಗೆ 'ಮೈ ಮುಲಾಯಂ ಸಿಂಗ್​ ಯಾದವ್​' ಎಂದು ಟೈಟಲ್​ ಇಡಲಾಗಿದೆ. ಈಗ ಅದರ ಟ್ರೇಲರ್​ ಬಿಡುಗಡೆಯಾಗಿದೆ. ಮುಲಾಯಂ ಸಿಂಗ್​ ಯಾದವ್​ ಹೇಗೆ ಕುಸ್ತಿಯ ಅಖಾಡದಿಂದ ರಾಜಕೀಯದ ರಣರಂಗಕ್ಕೆ ಧುಮುಕಿದರು ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತದೆ ಈ ಟ್ರೇಲರ್​.




ಮೀನಾ ಸೇತಿ ಮಂಡಲ್​ ಅವರ ನಿರ್ಮಾಣದ ಈ ಸಿನಿಮಾವನ್ನು ಸುವೆಂದು ರಾಜ್​ ಘೋಷ್​ ನಿರ್ದೇಶಿಸುತ್ತಿದ್ದಾರೆ. ಅಮಿತ್​ ಸೇತಿ, ಮಿಮೋಹ್​ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಈ ಸಿನಿಮಾದ ಹೊಸ ಪೋಸ್ಟರ್​ ಸಹ ರಿಲೀಸ್​ ಮಾಡಲಾಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2ಕ್ಕೆ ಫಿಕ್ಸ್​ ಮಾಡಲಾಗಿದೆ.


ಇದನ್ನೂ ಓದಿ: ಸ್ನೇಹಿತರೊಂದಿಗೆ ಟ್ರ್ಯಾಕ್ಟರ್​ ಹತ್ತಿ ರಸ್ತೆಗಿಳಿದ ದರ್ಶನ್​..!


ಸಮಾಜವಾದಿ ಪಕ್ಷದ ಸಂಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದವರು. ಜೊತೆಗೆ ಕೇಂದ್ರದಲ್ಲಿಯೂ ಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ರಾಜಕೀಯ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.


ರಾಜಕುಮಾರ ಖ್ಯಾತಿಯ ನಟ ಶರತ್​ ಕುಮಾರ್ ಅವರ ಫೋಟೋಗಳು




ಬಾಲಿವುಡ್​ನಲ್ಲಿ ಈಗಾಗಲೇ ರಾಜಕೀಯ ವ್ಯಕ್ತಿಗಳ ಮೇಲೆ ಸಾಕಷ್ಟು ಬಯೋಪಿಕ್​ಗಳು​ ಬಿಡುಗಡೆಯಾಗಿವೆ. ಸಾಲದಕ್ಕೆ ಇನ್ನು ಸಾಕಷ್ಟು ಜೀವನಾಧಾರಿತ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ.


ಇದನ್ನೂ ಓದಿ: Jaggesh: ಅಭಿಮಾನಿಗಳಿಗೆ ತಮ್ಮ ನಂದಗೋಕುಲವನ್ನು ಪರಿಚಯಿಸಿದ ಜಗ್ಗೇಶ್​..!

Published by:Anitha E
First published: