HOME » NEWS » Entertainment » MAHIMA CHAUDHRY OPENS UP ON HORRIFIC ACCIDENT THAT DESTROYED HER CAREER AE

Mahima Chaudhry: ನಟಿ ಮಹಿಮಾ ಚೌಧರಿ ಸಿನಿ ಭವಿಷ್ಯಕ್ಕೆ ಕುತ್ತು ತಂದ ಘಟನೆ ನಡೆದದ್ದು ಬೆಂಗಳೂರಿನಲ್ಲೇ ಅಂತೆ..!

Mahima Chaudhry: ಶೂಟಿಂಗ್​ಗೆಂದು ಸ್ಟುಡಿಯೋಗೆ ಹೋಗುವಾಗ ಮಹಿಮಾ ಅವರ ಕಾರಿಗೆ ಟ್ರಕ್​ ಒಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಮಹಿಮಾ ಅವರ ಮುಖಕ್ಕೆ ಕಾರಿನ ಗಾಜು ಚುಚ್ಚಿಕೊಂಡಿತ್ತು.

Anitha E | news18-kannada
Updated:June 9, 2020, 4:59 PM IST
Mahima Chaudhry: ನಟಿ ಮಹಿಮಾ ಚೌಧರಿ ಸಿನಿ ಭವಿಷ್ಯಕ್ಕೆ ಕುತ್ತು ತಂದ ಘಟನೆ ನಡೆದದ್ದು ಬೆಂಗಳೂರಿನಲ್ಲೇ ಅಂತೆ..!
ಮಹಿಮಾ ಚೌಧರಿ
  • Share this:
ಶಾರುಖ್​ ಖಾನ್​ ಜೊತೆ  'ಕಿಸಿ ರೋಜ್​ ಅಪ್ನಿ ಮುಲಾಕಾತ್​ ಹೋಗಿ...' ಅಂತ ಹಾಡಿದ್ದ ನಟಿ ಮಹಿಮಾ ಚೌಧರಿ ಇದ್ದಕ್ಕಿದ್ದಂತೆಯೇ ಸಿನಿ ರಂಗದಿಂದ ದೂರವಾಗಿದ್ದರು. ಆಗ ಅವರು ಸಿನಿರಂಗದಿಂದ ದೂರ ಉಳಿದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. 

ಬಹಳ ವರ್ಷಗಳ ನಂತರ ಮಹಿಮಾ ಚೌಧರಿ ಮತ್ತೆ ತಮ್ಮ ಜೀವನದಲ್ಲಿ ನಡೆದಿದ್ದ ಆ ಭಯಾನಕ ಘಟನೆಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 1997ರಲ್ಲಿ ಶಾರುಖ್​ ಖಾನ್​ ಜೊತೆ 'ಪರದೇಶ್'​ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ನಟಿ ಮಹಿಮಾ ಚೌಧರಿ.




 



View this post on Instagram




 

#EidMubarak .wishing you good health , peace and a covid free world again.


A post shared by Mahimachaudhry (@mahimachaudhry1) on





ನಟಿ ಮಹಿಮಾ ಚೌಧರಿ ಹಿಂದಿ ಹಾಗೂ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಅವರ ಜೀವನದಲ್ಲಿ ಆ ಒಂದು ಭಯಾನಕ ಘಟನೆ ನಡೆದಿತ್ತು. 1999ರ ಆಸುಪಾಸಿನಲ್ಲಿ ಮಹಿಮಾ ನಿರ್ದೇಶಕ ಪ್ರಕಾಶ್ ಝಾ ಅವರು ಆ್ಯಕ್ಷನ್​ ಕಟ್​ ಹೇಳಿದ್ದ 'ದಿಲ್​ ಕ್ಯಾ ಕರೆ' ಸಿನಿಮಾದಲ್ಲಿ ನಟಿಸುತ್ತಿದ್ದರು. ಅದು ಅಜಯ್​ ದೇವಗನ್​ ಹಾಗೂ ಕಾಜೋಲ್​ ಅವರ ಹೋಂ ಪ್ರೊಡಕ್ಷನ್​ ಚಿತ್ರವಾಗಿದ್ದು, ಅಜಯ್​, ಕಾಜೋಲ್​ ಸಜ ಇದರಲ್ಲಿ ನಟಿಸುತ್ತಿದ್ದರು.

ಇದನ್ನೂ ಓದಿ: HBD Shilpa Shetty: ಹೆಂಡತಿ ಶಿಲ್ಪಾ ಶೆಟ್ಟಿಗೆ ಇಷ್ಟವಾದ ರೀತಿಯಲ್ಲಿ ಸರ್ಪ್ರೈಸ್​ ಕೊಟ್ಟ ರಾಜ್​ ಕುಂದ್ರಾ..!

ಇದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಶೂಟಿಂಗ್​ಗೆಂದು ಸ್ಟುಡಿಯೋಗೆ ಹೋಗುವಾಗ ಮಹಿಮಾ ಅವರ ಕಾರಿಗೆ ಟ್ರಕ್​ ಒಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಮಹಿಮಾ ಅವರ ಮುಖಕ್ಕೆ ಕಾರಿನ ಗಾಜು ಚುಚ್ಚಿಕೊಂಡಿತ್ತು.




ಅಪಘಾತವಾದ ನಂತರ ಮಹಿಮಾ ಅವರನ್ನುಆಸ್ಪತ್ರೆಗೆ ಸೇರಿಸಲಾಗಿತ್ತಂತೆ. ಆಗ ಮಹಿಮಾ ತಮ್ಮ ಮುಖ ನೋಡಿಕೊಂಡು ಭಯ ಪಟ್ಟಿದ್ದರಂತೆ. ಅಂದು ಆಸ್ಪತ್ರೆಗೆ ದಾಖಲಿಸಿದಾಗ ಮಹಿಮಾ ಅವರ ಮುಖದಿಂದ 67 ಗಾಜಿನ ಚೂರುಗಳನ್ನು ತೆಗೆದು ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತಂತೆ.

ಇದನ್ನೂ ಓದಿ: Murli Sharma: ತಾಯಿಯ ಅಗಲಿಕೆಯ ದುಖಃದಲ್ಲಿ ಅಲಾ ವೈಕುಂಠಪುರಂಲೋ ಖ್ಯಾತಿಯ ನಟ..!

ಶಸ್ತ್ರ ಚಿಕಿತ್ಸೆ ನಂತರ ಮಹಿಮಾ ಧೀರ್ಘ ಕಾಲಬಿಸಿಲಿಗೆ ಹೋಗದೆ ಮನೆಯಲ್ಲೇ ಇದ್ದರು. ರೂಮ್​ನಲ್ಲಿ ಕನ್ನಡಿ ಸಹ ಇಟ್ಟುಕೊಂಡಿರಲಿಲ್ಲವಂತೆ. ಅವರಿಗೆ ಮುಖ ನೋಡೋಕೆ ಇಷ್ಟವಾಗುತ್ತಿರಲಿಲ್ಲವಂತೆ. ಇನ್ನು ತನಗೆ ಯಾರೂ ಕೆಲಸ ಕೊಡುತ್ತಾರೆ ಅಂತ ಸದಾ ಯೋಚಿಸುತ್ತಿದ್ದರಂತೆ.




'ಆಗ ನನ್ನ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದವು. ಆದರೆ ಈ ಅಪಘಾತದಿಂದಾಗಿ ಎಲ್ಲವನ್ನೂ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಆಗ ನನ್ನ ಪರಿಸ್ಥಿತಿ ಬಗ್ಗೆ ಯಾರಿಗೂ ಹೇಳಿಕೊಳ್ಳಲಿಲ್ಲವಂತೆ. ಒಂದುವೇಳೆ ಅಪಘಾತದ ಸುದ್ದಿ ಹೊರಗಡೆ ತಿಳಿದಿದ್ದರೆ ಯಾರೂ ಸಹಕರಿಸುತ್ತಿರಲಿಲ್ಲ ಆಗ. ಮುಖ ಹಾಳಾಗಿದೆ ಬೇರೆಯರನ್ನಾದರೂ ತೆಗೆದುಕೊಳ್ಳೋಣ ಎನ್ನುತ್ತಿದ್ದರು ಎಂಬ ಕಾರಣಕ್ಕೆ ಈ ವಿಷಯವನ್ನು ಮುಚ್ಚಿಟ್ಟಿದ್ದೆ' ಎಂದು ಪಿಂಕ್​ವಿಲ್ಲಾಗೆ ನೀಡಿದರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಮಹಿಮಾ.




2006ರಲ್ಲಿ ಬಾಬಿ ಮುಖರ್ಜಿ ಅವರೊಂದಿಗೆ ವಿವಾಹವಾಗಿದ್ದ ಮಹಿಮಾ 7 ವರ್ಷಗಳ ನಂತರ ಅಂದರೆ 2013ರಲ್ಲಿ ವಿಚ್ಛೇಧನ ಪಡೆದು ದೂರಾದರು. ಇವರಿಗೆ ಒಬ್ಬ ಮಗಳಿದ್ದಾಳೆ. ಇನ್ನು ಮಹಿಮಾ ಅವರ ಹೆಸರು ಟೆನ್ನಿಸ್​ ಆಟಗಾರ ಲಿಯಾಂಡರ್​​ ಪೇಸ್​ ಜೊತೆ ಸಹ ತಳುಕು ಹಾಕಿಕೊಂಡಿತ್ತು.

 Sonam Kapoor: ಮುಂಬೈನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೋನಮ್​ ಕಪೂರ್​..!
First published: June 9, 2020, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories