Sarileru Neekevvaru: ಪ್ರತಿ ಸೋಮವಾರ ಮಹೇಶ್​ ಬಾಬು ಅಭಿಮಾನಿಗಳಿಗೆ ಹಬ್ಬ: ಬಿಡುಗಡೆಯಾಗಲಿದೆ ವಾರಕ್ಕೊಂದು ಹಾಡು..!

Prince Mahesh Babu: ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿರುವ ಸರಿಲೇರು ನೀಕೆವ್ವರು ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿಯೇ ಚಿತ್ರ ರಿಲೀಸ್​ ಆಗುವವರೆಗೂ ಒಂದು ವಾರಕ್ಕೊಂದು ಸಿನಿಮಾ ಕುರಿತಾದ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ಇತ್ತೀಚೆಗಷ್ಟೆ ಪ್ರಕಟಿಸಿತ್ತು.

Anitha E | news18-kannada
Updated:November 30, 2019, 12:46 PM IST
Sarileru Neekevvaru: ಪ್ರತಿ ಸೋಮವಾರ ಮಹೇಶ್​ ಬಾಬು ಅಭಿಮಾನಿಗಳಿಗೆ ಹಬ್ಬ: ಬಿಡುಗಡೆಯಾಗಲಿದೆ ವಾರಕ್ಕೊಂದು ಹಾಡು..!
ಹೌದು, ಮಹೇಶ್​ ಕೈಯಲ್ಲಿ ಸರಿಲೇರು ನೀಕೆವ್ವರು ಸಿನಿಮಾ ಇರುವಾಹಗಲೇ ಮತ್ತೊಂದು ಚಿತ್ರದ ಆಫರ್​ ಇತ್ತು.
  • Share this:
'ಮಹರ್ಷಿ' ಚಿತ್ರದ ನಂತರ ಮಹೇಶ್​ ಬಾಬು ಅಭಿನಯಿಸುತ್ತಿರುವ ಸಿನಿಮಾ 'ಸರಿಲೇರು ನೀಕೆವ್ವರು'. ಅನಿಲ್​ ರವಿಪುಡಿ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಮಹೇಶ್ ಬಾಬು ನಟಿಸುತ್ತಿದ್ದು, ಈ ಚಿತ್ರದ ಟೀಸರ್​ ಹಾಗೂ ಪೋಸ್ಟರ್​ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಪ್ರತಿಕ್ರಿಯೆ ಸಿಗುತ್ತಿದೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾ ಪ್ರಚಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿಯೇ ಚಿತ್ರ ರಿಲೀಸ್​ ಆಗುವವರೆಗೂ ಒಂದು ವಾರಕ್ಕೊಂದು ಸಿನಿಮಾ ಕುರಿತಾದ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ಇತ್ತೀಚೆಗಷ್ಟೆ ಪ್ರಕಟಿಸಿತ್ತು.ಅದಕ್ಕೆ ತಕ್ಕಂತೆ ಈಗ ಆ ಮಾಹಿತಿ ಏನು, ಪ್ರತಿ ವಾರ ಸಿನಿಮಾ ಬಗ್ಗೆ ಚಿತ್ರತಂಡ ಯಾವ ಹೊಸ ವಿಷಯ ಹಂಚಿಕೊಳ್ಳಲಿದೆ ಅನ್ನೋದು ಬಹಿರಂಗವಾಗಿದೆ. ಹೌದು, ಪ್ರತಿ ಸೋಮವಾರ ಅಂದರೆ ಸಿನಿಮಾ ಬಿಡುಗಡೆಯಾಗುವವರೆಗೂ ಒಂದೊಂದು ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗೆಡೆ ಮಾಡುವುದಾಗಿ ನಿರ್ದೇಶಕ ಅನಿಲ್​ ರವಿಪುಡಿ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

Now it's @ThisIsDSP 'S Time.... ROCKING ALBUM 👌👌👌👌.... pic.twitter.com/Q5xg9tVvKB

ಈಗ ಡಿ.2ರಂದು ಅಂದರೆ ಸೋಮವಾರ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡಲಿದ್ದು, ಅದು ಯಾವ ಹಾಡು ಊಹಿಸಿ ಎಂದು ಅಭಿಮಾನಿಗಳಿಗೆ ಟ್ವೀಟ್​ ಮೂಲಕ ತಿಳಿಸಲಾಗಿದೆ.

#MassMBMondays Begin with #MBSONG 😎 💥🕺ಇದನ್ನೂ ಓದಿ: ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ: ಉಗ್ರ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ, ಅನುಷ್ಕಾ , ಕೀರ್ತಿ ಸುರೇಶ್​

ಈ ಸಿನಿಮಾ ಜನವರಿ 11ರಂದು ಸಂಕ್ರಾತಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ರಶ್ಮಿಕಾ ಹಾಗೂ ಮಹೇಶ್​ ಬಾಬು ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಲೇಡಿ ಸೂಪರ್​ ಸ್ಟಾರ್​ ವಿಜಯ್​ ಶಾಂತಿ ಸಹ ಮತ್ತೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

 

 Ileana Hot Photos: ಬಳುಕುವ ನಡುವಿನಿಂದಲೇ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಇಲಿಯಾನಾ..!

First published: November 30, 2019, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading