Vidya Balan: ಮಹೇಶ್ ಭಟ್ ಅವರ ಒಂದು ಫೋನ್ ಕಾಲ್ ನಿಂದಾಗಿ ವಿದ್ಯಾ ಬಾಲನ್ ತುಂಬಾ ಅತ್ತಿದ್ರಂತೆ! ಕಾರಣ ಏನು ಗೊತ್ತಾ?

ನಟಿ ವಿದ್ಯಾರನ್ನು ಅಳಿಸಿದ್ದು ಮಹೇಶ್ ಭಟ್ ಅವರ ಒಂದು ಫೋನ್ ಕಾಲ್ ಅಂತೆ. ಹೌದು.. ಒಮ್ಮೆ ವಿದ್ಯಾಗೆ ಕರೆ ಮಾಡಿ ಅವಳ ಒಂದು ಸಿನೆಮಾ ಓಡಲಿಲ್ಲ ಅಂತ ಹೇಳಿದ್ರಂತೆ. ಇದಕ್ಕೆ ವಿದ್ಯಾ ಅಳುವುದಕ್ಕೆ ಶುರು ಮಾಡಿದ್ರಂತೆ ಅಂತ ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ ನೋಡಿ.

ಮಹೇಶ್ ಭಟ್ ಮತ್ತು ವಿದ್ಯಾ ಬಾಲನ್

ಮಹೇಶ್ ಭಟ್ ಮತ್ತು ವಿದ್ಯಾ ಬಾಲನ್

  • Share this:
ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ತಮ್ಮ ವಿಭಿನ್ನ ಪಾತ್ರಗಳಿಂದ ಸಿನಿ ರಸಿಕರನ್ನು ಸುಮಾರು ಎರಡು ದಶಕಗಳಿಂದ ಮನರಂಜಿಸುತ್ತಿದ್ದು, ಅನೇಕ ಒಳ್ಳೆಯ ಚಿತ್ರಗಳನ್ನು ಬಾಲಿವುಡ್ ಗೆ (Bollywood) ನೀಡಿದ್ದಾರೆ.  ನಟಿ ವಿದ್ಯಾ ಅವರು ತಮ್ಮ ವೃತ್ತಿ ಜೀವನದಲ್ಲಿ ಕೆಲವು ನಿಜವಾಗಿಯೂ ಸ್ಮರಣೀಯ ಪಾತ್ರಗಳನ್ನು ಮಾಡಿದ್ದಾರೆ. ಅದು ‘ಕಿಸ್ಮತ್ ಕನೆಕ್ಷನ್’, ‘ದಿ ಡರ್ಟಿ ಪಿಕ್ಚರ್’ ಅಥವಾ ಹಮಾರಿ ಅಧೂರಿ ಕಹಾನಿ’ ಚಿತ್ರ ಆಗಿರಲಿ, ಅವರು ಹೊಸ ಹೊಸ ಜಾನರ್ ಚಿತ್ರಗಳನ್ನು ಮಾಡಿದ್ದಾರೆ ಮತ್ತು ಅವರ ನಟನಾ ಕೌಶಲ್ಯಗಳಿಂದ (Acting Skills) ಅನೇಕ ಅಭಿಮಾನಿಗಳನ್ನು (Fans) ಸಂಪಾದಿಸಿದ್ದಾರೆ. ಆದರೆ ಚಿತ್ರೋದ್ಯಮದಲ್ಲಿ ಅನೇಕ ಹಿಟ್ ಚಿತ್ರಗಳ ಮಧ್ಯೆ ಕೆಲವು ಚಿತ್ರಗಳು ಫ್ಲಾಪ್ ಸಹ ಆಗಿರುತ್ತವೆ ಅಂತ ಎಲ್ಲರಿಗೂ ಗೊತ್ತಿರುತ್ತದೆ.

ಈಗೇಕೆ ವಿದ್ಯಾ ಬಗ್ಗೆ ಇಷ್ಟೊಂದು ಮಾತು ಆಡುತ್ತಾ ಇದ್ದೇವೆ ಅಂತೀರಾ? ವಿದ್ಯಾ ಒಂದೊಮ್ಮೆ ಬಿಕ್ಕಿ ಬಿಕ್ಕಿ ಅತ್ತಿದ್ರಂತೆ, ಅದಕ್ಕೆ ಕಾರಣ ಯಾರು? ಅವರು ಏನು ಹೇಳಿದ್ದಕ್ಕೆ ವಿದ್ಯಾ ಹೀಗೆ ಬಿಟ್ಟು ಬಿಡದೆ ಅತ್ತಿದ್ದು ಅಂತ ತಿಳಿದುಕೊಳ್ಳಬೇಕು ಎಂದರೆ ಮುಂದೆ ಓದಿ.

ಮಹೇಶ್ ಭಟ್ ವಿದ್ಯಾ ಬಾಲನ್ ಗೆ ಕರೆ ಮಾಡಿ ಏನಂದ್ರು 
ನಟಿ ವಿದ್ಯಾರನ್ನು ಅಳಿಸಿದ್ದು ಮಹೇಶ್ ಭಟ್ ಅವರ ಒಂದು ಫೋನ್ ಕಾಲ್ ಅಂತೆ. ಹೌದು.. ಒಮ್ಮೆ ವಿದ್ಯಾಗೆ ಕರೆ ಮಾಡಿ ಅವಳ ಒಂದು ಸಿನೆಮಾ ಓಡಲಿಲ್ಲ ಅಂತ ಹೇಳಿದ್ರಂತೆ. ಇದಕ್ಕೆ ವಿದ್ಯಾ ಅಳುವುದಕ್ಕೆ ಶುರು ಮಾಡಿದ್ರಂತೆ ಅಂತ ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ ನೋಡಿ.

ಇದನ್ನೂ ಓದಿ: Abhishek Bachchan: ಅಪ್ಪನ ಶೂಟಿಂಗ್​​ ಸೆಟ್​​ಗೆ ಸರ್​ಪ್ರೈಸ್ ವಿಸಿಟ್ ಕೊಟ್ಟ ಅಭಿಷೇಕ್ ಬಚ್ಚನ್

ಸುಮಾರು 2 ದಶಕಗಳ ವೃತ್ತಿಜೀವನದಲ್ಲಿ, ವಿದ್ಯಾ ಅವರು ಭೂಲ್ ಭುಲೈಯಾ, ಕಹಾನಿ, ಬೇಗಂ ಜಾನ್, ತುಮ್ಹಾರಿ ಸುಲು, ಹೇ ಬೇಬಿ ಮುಂತಾದ ಅನೇಕ ಚಿತ್ರಗಳಲ್ಲಿ ತುಂಬಾನೇ ಒಳ್ಳೆಯ ನಟನೆಯನ್ನು ಮಾಡಿದ್ದರೂ ಸಹ, ಘನ್ಚಕ್ಕರ್, ಶಾದಿ ಕೆ ಸೈಡ್ ಎಫೆಕ್ಟ್ಸ್ ಮತ್ತು ಇತರ ಚಿತ್ರಗಳು ಫ್ಲಾಪ್ ಆಗಿದ್ದರಿಂದ ಅವರು ಚಿತ್ರೋದ್ಯಮದಲ್ಲಿ ಸ್ವಲ್ಪ ಕಾಲ ಹಿನ್ನಡೆಯನ್ನು ಸಹ ಎದುರಿಸಿದರು.

ವಿದ್ಯಾ ಬಾಲನ್ ಒಮ್ಮೆ ಮಹೇಶ್ ಭಟ್ ಅವರ ಫೋನ್ ಕರೆ ಬಗ್ಗೆ ಹೇಳಿದರು, ಆ ಕರೆ ಅವರಿಗೆ ತುಂಬಾನೇ ನೋವು ತಂದಿತ್ತು ಮತ್ತು ಅಳುವಂತೆ ಮಾಡಿತ್ತು. "ಹಮಾರಿ ಅಧುರಿ ಕಹಾನಿ ಚಿತ್ರಕ್ಕಿಂತಲೂ ಮುಂಚೆ ಬಂದ ಘನ್ಚಕ್ಕರ್, ಶಾದಿ ಕೆ ಸೈಡ್ ಎಫೆಕ್ಟ್ಸ್ ಮತ್ತು ಬಾಬಿ ಜಾಸೂಸ್ ಕೂಡ ಫ್ಲಾಪ್ ಆಗಿದ್ದವು. ಮಹೇಶ್ ಭಟ್ ಸಾಬ್ ಅವರು ಒಂದು ಭಾನುವಾರ ಬೆಳಿಗ್ಗೆ ನನಗೆ ಕರೆ ಮಾಡಿ “ವಿದ್ಯಾ ನನ್ನನ್ನು ಕ್ಷಮಿಸು, ಹಮಾರಿ ಅಧುರಿ ಕಹಾನಿ ಚಿತ್ರ ಓಡಲಿಲ್ಲ' ಎಂದು ಫಿಲ್ಮ್‌ಫೇರ್ ಗೆ ನೀಡಿದ ಸಂದರ್ಶನದಲ್ಲಿ ವಿದ್ಯಾ ಹೇಳಿದರು.

ವಿದ್ಯಾ ಬಾಲನ್ ಮುಂದುವರಿಸಿ "ಆ ಸುದ್ದಿ ಕೇಳಿ ನಾನು ಅಳಲು ಶುರು ಮಾಡಿದೆ, ಅಲ್ಲೇ ಇದ್ದ ಸಿದ್ದಾರ್ಥ್ ನನ್ನನ್ನು ಚೆಂಬೂರಿನಲ್ಲಿರುವ ಸಾಯಿಬಾಬಾ ಮಂದಿರಕ್ಕೆ ಕರೆದೊಯ್ದರು. ಹೊರಗೆ ಅಂದು ಭಾರಿ ಮಳೆ ಸುರಿಯುತ್ತಿತ್ತು, ನಾನು ಕಾರಿನಲ್ಲಿ ಕೂತು ದೇವಸ್ಥಾನಕ್ಕೆ ಹೋಗುವವರೆಗೂ ಅಳುತ್ತಿದ್ದೆ.

ಇದಕ್ಕೆ ನಟಿ ಏನು ಹೇಳಿದ್ದಾರೆ ನೋಡಿ 
ನಾನು ಈಗ ಏನು ತಪ್ಪು ಮಾಡುತ್ತಿದ್ದೇನೆ ಮತ್ತು ನಾನು ಮೊದಲು ಏನು ಮಾಡಿದ್ದೇನೆ ಎಂದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಆಗ ನಾನು ಅದನ್ನು ಮರೆತುಬಿಡಲು ನಿರ್ಧರಿಸಿದೆ. ಸೋಲು ಗೆಲುವಿಗಿಂತಲೂ ಆ ಚಿತ್ರ ಮಾಡುವಾಗ ನನಗೆ ಸಿಕ್ಕ ಸಂತೋಷವನ್ನು ಅಷ್ಟೇ ನಾನು ನೆನಪಿಸಿಕೊಳ್ಳಬೇಕು. ಒಂದು ವೇಳೆ ವಿವಾಹ ಮುರಿದು ಬಿದ್ದರೆ, ದಂಪತಿಗಳು ಒಟ್ಟಿಗೆ ಸಂತೋಷದ ಕ್ಷಣಗಳನ್ನು ಎಂದಿಗೂ ಆನಂದಿಸಲಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ" ಎಂದು ಹೇಳಿದರು.

ಇದನ್ನೂ ಓದಿ:  Bollywood Couple: ಬಾಲಿವುಡ್​ನ ಈ ಸ್ಟಾರ್​ ಜೋಡಿಗೆ ಆತ್ಮವಿಶ್ವಾಸದ ಜೊತೆ ಅಹಂಕಾರನೂ ಇದ್ಯಂತೆ; ಖ್ಯಾತ ಜ್ಯೋತಿಷಿ

ವಿದ್ಯಾ ಬಾಲನ್ ಅವರ ಮುಂಬರುವ ಚಿತ್ರ ‘ನೀಯತ್’ ಆಗಿದ್ದು, ಇದರಲ್ಲಿ ರಾಮ್ ಕಪೂರ್, ಪ್ರಜಕ್ತಾ ಕೋಲಿ, ಅಮೃತಾ ಪುರಿ ಸೇರಿದಂತೆ ಅನೇಕರು ನಟಿಸಿದ್ದಾರೆ.
Published by:Ashwini Prabhu
First published: