• Home
  • »
  • News
  • »
  • entertainment
  • »
  • Shahrukh Khan: ಮಹೇಶ್‌ ಭಟ್‌ ಮೇಲೆ ಶಾರುಖ್‌ಗೆ ಏಕೆ ಗೌರವ? ಕಿಂಗ್ ಖಾನ್ ಬಗ್ಗೆ ಅವರು ಹೇಳಿದ್ದೇನು?

Shahrukh Khan: ಮಹೇಶ್‌ ಭಟ್‌ ಮೇಲೆ ಶಾರುಖ್‌ಗೆ ಏಕೆ ಗೌರವ? ಕಿಂಗ್ ಖಾನ್ ಬಗ್ಗೆ ಅವರು ಹೇಳಿದ್ದೇನು?

ಮಹೇಶ್ ಭಟ್ ಮತ್ತು ಶಾರುಖ್  ಖಾನ್

ಮಹೇಶ್ ಭಟ್ ಮತ್ತು ಶಾರುಖ್ ಖಾನ್

ಶಾರುಖ್, ಸಲ್ಮಾನ್ ಮತ್ತು ಆಮಿರ್ ಖಾನ್ ಅವರ ಸಿನೆಮಾ ವೃತ್ತಿಜೀವನದಲ್ಲಿಯೂ ಕೆಲವು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಓಡದೆ ಫ್ಲಾಪ್ ಆಗಿರುವ ನಿರ್ದೇಶನಗಳು ಬೇರೆ ನಟರಿಗೆ ಹೊಲಿಸಿದರೆ ತುಂಬಾನೇ ಕಡಿಮೆ ಇರುತ್ತವೆ. ಹೀಗೆ ಶಾರುಖ್ ಅವರೊಂದಿಗೆ ಬೆರಳೆಣಿಕೆಯಷ್ಟು ಚಿತ್ರಗಳು ಮಾಡಿ ಅದರಲ್ಲಿಯೂ ಕೆಲವು ಫ್ಲಾಪ್ ಆಗಿರುವ ಚಿತ್ರಗಳ ನಿರ್ದೇಶಕ ಮಹೇಶ್ ಭಟ್ ಅವರು ಶಾರುಖ್ ಅವರನ್ನು 'ಅಸಾಮಾನ್ಯ ವ್ಯಕ್ತಿ' ಎಂದು ಹೊಗಳಿದ್ದಾರೆ!

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಎಷ್ಟು ಚಿತ್ರಗಳು ಹಿಟ್ ಆಗುತ್ತವೆಯೋ, ಅದಕ್ಕಿಂತಲೂ ಹೆಚ್ಚು ಚಿತ್ರಗಳು ಪ್ಲಾಫ್ (Flop Movie) ಸಹ ಆಗಿರುತ್ತವೆ. ಇನ್ನೂ ಬಾಲಿವುಡ್ ವಿಷಯಕ್ಕೆ ಬಂದರೆ ಮೂವರು ಖಾನ್ ಎಂದರೆ ಅವರು ನಟಿಸಿದ ಚಿತ್ರಗಳು ಅಷ್ಟೊಂದು ಸುಲಭವಾಗಿ ಫ್ಲಾಪ್ ಆಗುವುದಿಲ್ಲ ಅಂತ ಬಹುತೇಕರು ಹೇಳುತ್ತಾರೆ. ಈ ಮೂವರು ಖಾನ್ ಗಳ ಸಿನೆಮಾ ವೃತ್ತಿಜೀವನದಲ್ಲಿಯೂ (Career) ಕೆಲವು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ (Box Office) ಓಡದೆ ಫ್ಲಾಪ್ ಆಗಿರುವ ನಿರ್ದೇಶನಗಳು ಬೇರೆ ನಟರಿಗೆ ಹೊಲಿಸಿದರೆ ತುಂಬಾನೇ ಕಡಿಮೆ ಇರುತ್ತವೆ. ಹೀಗೆ ಶಾರುಖ್ ಅವರೊಂದಿಗೆ ಬೆರಳೆಣಿಕೆಯಷ್ಟು ಚಿತ್ರಗಳು ಮಾಡಿ ಅದರಲ್ಲಿಯೂ ಕೆಲವು ಫ್ಲಾಪ್ ಆಗಿರುವ ಚಿತ್ರಗಳ ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಶಾರುಖ್ ಅವರನ್ನು 'ಅಸಾಮಾನ್ಯ ವ್ಯಕ್ತಿ' ಎಂದು ಹೊಗಳಿದ್ದಾರೆ ನೋಡಿ.


ಶಾರುಖ್ ಅವರನ್ನು ಹೊಗಳಿದ ಮಹೇಶ್ ಭಟ್..
ಹೌದು.. ನಿರ್ದೇಶಕ ಮಹೇಶ್ ಭಟ್ ಅವರು ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಅವರು ನಟ ಶಾರುಖ್ ಗೆ ಯಾವಾಗಲೂ ಕೃತಜ್ಞರಾಗಿರುತ್ತಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಒಂದು ಹೊಸ ಸಂದರ್ಶನದಲ್ಲಿ ಮಹೇಶ್ ಅವರು ಶಾರುಖ್ ಅವರನ್ನು 'ತುಂಬಾ ದೊಡ್ಡ ವ್ಯಕ್ತಿ' ಎಂದು ಕರೆದರು ಮತ್ತು 'ನೀವು ಅಂತಹ ವ್ಯಕ್ತಿಯನ್ನು ಹೆಚ್ಚಾಗಿ ನೋಡಿರುವುದಿಲ್ಲ' ಎಂದು ಹೇಳಿದರು. ನಿರ್ದೇಶಕ ಮಹೇಶ್ ಭಟ್ ಕೂಡ ನಕ್ಕು ಶಾರುಖ್ ಅವರೊಂದಿಗೆ 'ಎರಡು ಫ್ಲಾಪ್ ಚಿತ್ರಗಳನ್ನು ಮಾಡಿದ ಏಕೈಕ ವ್ಯಕ್ತಿ ನಾನು' ಎಂದು ಹೇಳಿದರು.


ಮಹೇಶ್ ನಿರ್ದೇಶನದಲ್ಲಿ 1996 ರಲ್ಲಿ ಬಿಡುಗಡೆಯಾಗಿದ್ದ ‘ಚಾಹತ್’ ಎಂಬ ಚಿತ್ರದಲ್ಲಿ ಶಾರುಖ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಹಿರಿಯ ನಟರಾದ ನಾಸಿರುದ್ದೀನ್ ಶಾ, ಅನುಪಮ್ ಖೇರ್, ನಟಿಯರಾದ ಪೂಜಾ ಭಟ್ ಮತ್ತು ರಮ್ಯಾ ಕೃಷ್ಣನ್ ಸಹ ನಟಿಸಿದ್ದರು. ಇದರ ನಂತರ ಶಾರುಖ್ ಅವರು ಮಹೇಶ್ ಅವರ ನಿರ್ದೇಶನದಲ್ಲಿ 1998 ರಲ್ಲಿ ಬಿಡುಗಡೆಯಾದ 'ಡುಪ್ಲಿಕೇಟ್' ಎಂಬ ಚಿತ್ರದಲ್ಲಿಯೂ ನಟಿಸಿದ್ದರು. ಇದರಲ್ಲಿ ನಟಿಯರಾದ ಜೂಹಿ ಚಾವ್ಲಾ ಮತ್ತು ಸೋನಾಲಿ ಬೇಂದ್ರೆ ಕೂಡ ನಟಿಸಿದ್ದರು.


ಶಾರುಖ್ ನನ್ನನ್ನು ರಾಜನಂತೆ ಗೌರವಿಸುತ್ತಾರೆ: ಮಹೇಶ್
“ನಾನು ಶಾರುಖ್ ಅವರನ್ನು ತುಂಬಾನೇ ಇಷ್ಟಪಡುತ್ತೇನೆ. ಆದರೆ ನಾನು ಎರಡು ಫ್ಲಾಪ್ ಚಿತ್ರಗಳನ್ನು ಶಾರುಖ್ ಅವರ ಜೊತೆಗೆ ಮಾಡಿದ್ದರೂ ಸಹ ಅವರು ನನ್ನನ್ನು ಒಳ್ಳೆ ರಾಜನಂತೆ ನೋಡಿಕೊಳ್ಳುತ್ತಾರೆ. ಅವರು ಒಬ್ಬ ಅಸಾಮಾನ್ಯ ವ್ಯಕ್ತಿಯಾಗಿದ್ದು, ನಾನು ಯಾವಾಗಲೂ ಅವನಿಗೆ ಕೃತಜ್ಞನಾಗಿರುತ್ತೇನೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Shah Rukh Khan: ಗೌರಿ ಖಾನ್ ತನ್ನನ್ನು ಬಿಟ್ಟು ಹೋಗ್ತೇನೆ ಅಂತ ಹೆದರಿಸಿದ್ರೆ ಶಾರುಖ್ ಖಾನ್ ಸಿಟ್ಟಲ್ಲಿ ಏನ್ ಮಾಡ್ತಾರಂತೆ ಗೊತ್ತಾ?


ಅವರು ಶಾರುಖ್ ಅವರನ್ನು 'ಅತ್ಯುತ್ತಮ ವ್ಯಕ್ತಿ’ ಎಂದು ಕರೆದರು ಮತ್ತು "ನೀವು ನಿಜವಾಗಿಯೂ ಅಂತಹ ಅದ್ಭುತ ವ್ಯಕ್ತಿಯನ್ನು ನೋಡಿರಲು ಸಾಧ್ಯವೇ ಇಲ್ಲ, ಶಾರುಖ್ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ ಮತ್ತು ಬಹಳ ಉದಾರಿ, ಧೈರ್ಯಶಾಲಿ, ಮಹಾನ್ ಮನುಷ್ಯ" ಅಂತ ಭಟ್ ಹೇಳಿದ್ದಾರೆ.


20 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ ಮಹೇಶ್ ಭಟ್
ಮಹೇಶ್ ಅವರ ಕೊನೆಯ ನಿರ್ದೇಶನದ ಚಿತ್ರ ‘ಸಡಕ್ 2’ (2020) ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಮತ್ತು ಮುಖೇಶ್ ಭಟ್ ಅವರ ಬ್ಯಾನರ್ನ ಅಡಿಯಲ್ಲಿ ಅವರ ಬ್ಯಾನರ್ ನ ಅಡಿಯಲ್ಲಿ ನಿರ್ಮಿಸಿದ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. 1991ರಲ್ಲಿ ತೆರೆಕಂಡ 'ಸಡಕ್' ಚಿತ್ರದ ಮುಂದುವರಿದ ಭಾಗವಾದ ಈ ಚಿತ್ರದಲ್ಲಿ ಸಂಜಯ್ ದತ್, ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಜಿಶ್ಶು ಸೇನ್ ಗುಪ್ತಾ, ಗುಲ್ಶನ್ ಗ್ರೋವರ್, ಮಕ್ರಂದ್ ದೇಶಪಾಂಡೆ ಮತ್ತು ಪ್ರಿಯಾಂಕಾ ಬೋಸ್ ನಟಿಸಿದ್ದಾರೆ. ಪೂಜಾ ಭಟ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದು 20 ವರ್ಷಗಳ ನಂತರ ಮಹೇಶ್ ಮತ್ತೆ ನಿರ್ದೇಶಕರಾಗಿ ಮರಳಿರುವುದನ್ನು ಸೂಚಿಸುತ್ತದೆ.


ಪಠಾನ್ ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಶಾರುಖ್
ಪ್ರಸ್ತುತವಾಗಿ ಶಾರುಖ್ ‘ಪಠಾಣ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬೆಂಬಲಿಸಿದೆ ಮತ್ತು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ ಮತ್ತು ಶಾರುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ ಮತ್ತು ಜನವರಿ 25, 2023 ರಂದು ಇದು ಸಿನೆಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


ಇದನ್ನೂ ಓದಿ:  Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!


ಶಾರುಖ್ ಅವರು ನಿರ್ಮಾಪಕ ಅಟ್ಲೀ ಅವರ ‘ಜವಾನ್’ ಚಿತ್ರವನ್ನು ಸಹ ಹೊಂದಿದ್ದಾರೆ. ಈ ಚಿತ್ರವು ಜೂನ್ 2, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಗಳಲ್ಲದೆ, ಶಾರುಖ್ ಅವರು ರಾಜ್ ಕುಮಾರ್ ಹಿರಾನಿ ಅವರ ‘ಡಂಕಿ’ ಚಿತ್ರದಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಜೊತೆಗೆ ನಟಿ ತಾಪ್ಸಿ ಪನ್ನು ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಇದು ಡಿಸೆಂಬರ್ 22, 2023 ರಂದು ಬಿಡುಗಡೆಯಾಗಲಿದೆ.

Published by:Ashwini Prabhu
First published: