• Home
 • »
 • News
 • »
 • entertainment
 • »
 • Mahesh Bhatt: ಕೋಟಿ ಕೋಟಿ ಕುಳ ಬಾಲಿವುಡ್ ಡೈರೆಕ್ಟರ್‌ ಮಹೇಶ್‌ ಭಟ್‌; ಇವರ ಆಸ್ತಿ ಮೌಲ್ಯ ಎಷ್ಟು?

Mahesh Bhatt: ಕೋಟಿ ಕೋಟಿ ಕುಳ ಬಾಲಿವುಡ್ ಡೈರೆಕ್ಟರ್‌ ಮಹೇಶ್‌ ಭಟ್‌; ಇವರ ಆಸ್ತಿ ಮೌಲ್ಯ ಎಷ್ಟು?

ಮಹೇಶ್​ ಭಟ್​

ಮಹೇಶ್​ ಭಟ್​

ಮಹೇಶ್ ಅವರು ತಮ್ಮ ಸಹೋದರ ಮುಖೇಶ್ ಭಟ್ ಅವರೊಂದಿಗೆ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ರಾಝ್, ಆಶಿಕಿ ಮತ್ತು ಮರ್ಡರ್ ಮುಂತಾದ ಚಲನಚಿತ್ರಗಳ ಫ್ರಾಂಚೈಸಿಗಳನ್ನು ನಿರ್ಮಿಸಿದ ಪ್ರೊಡಕ್ಷನ್ ಬ್ಯಾನರ್ "ವಿಶೇಶ್ ಫಿಲ್ಮ್ಸ್" ಅವರ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿದೆ.

 • Share this:

  ಬಿ ಟೌನ್‌ನ (Bollywood) ಖ್ಯಾತ ನಿರ್ಮಾಪಕ, ನಿರ್ದೇಶಕ, ನಟ ಮಹೇಶ್ ಭಟ್ (Mahesh Bhatt) ಚಿತ್ರರಂಗದಲ್ಲಿ ಸ್ಟಾರ್‌ ಡೈರೆಕ್ಟರ್‌ ಎಂದೇ ಗುರುತಿಸಿಕೊಂಡವರಲ್ಲಿ ಒಬ್ಬರು. ವಿಭಿನ್ನ ಚಿತ್ರಗಳನ್ನು (Different pictures) ನಿರ್ಮಿಸಲು ಹೆಸರು ಪಡೆದಿದ್ದ ಇವರು ಎಂಬತ್ತು, ತೊಂಬತ್ತರ ದಶಕದ ಹಿಟ್‌ ಡೈರೆಕ್ಟರ್.‌ ಮಹೇಶ್‌ ಭಟ್‌ ಅವರ ಸಾರಾನ್ಶ್ ಸಿನಿಮಾ 1984ರಲ್ಲಿ ಬಿಡುಗಡೆಯಾಗಿ ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು. ಜೊತೆಗೆ 14ನೇ ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ವಿದೇಶಿ ಭಾಷ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತ್ತು. ನಂತರ ಕಬ್ಜಾ ಮತ್ತು ನಾಮ್ ಎಂಬುವಂತಹ ಸಿನಿಮಾವನ್ನು ನಿರ್ದೇಶಿಸಿದ ಇವರು ಬಾಲಿವುಡ್ ಚಿತ್ರರಂಗದ ದಿಕ್ಕನ್ನೆ ಬದಲಿಸಿ ಬಿಟ್ಟಿದ್ದರು.


  ಮಹೇಶ್‌ ಭಟ್‌ ಚಿತ್ರಗಳು


  ಬಾಲಿವುಡ್ ಚಿತ್ರರಂಗಕ್ಕೆ ಯಶಸ್ಸು ಮತ್ತು ಖ್ಯಾತಿಯನ್ನು ತಂದುಕೊಟ್ಟು ತನದೇ ಆದ ಛಾಪನ್ನು ಮೂಡಿಸಿರುವ ಮಹೇಶ್ ಭಟ್ ಕೇವಲ ಸಿನಿಮಾಗಳಿಂದಷ್ಟೇ ಅಲ್ಲದೇ ಆಗಾಗ ತಮ್ಮ ವಿವಾದಗಳಿಂದಲೂ ಸುದ್ದಿಯಾಗುತ್ತಲೇ ಇರುತ್ತಾರೆ. ಹಲವು ಹಿಂದಿ ಚಿತ್ರಗಳನ್ನು ಮಹೇಶ್‌ ಭಟ್‌ ನಿರ್ದೇಶಿಸಿದ್ದಾರೆ. ಡ್ಯಾಡಿ (1989) ಮತ್ತು ಸ್ವಯಂ (1991) ಸಿನಿ ಜೀವನದ ಮುಖ್ಯ ಚಿತ್ರಗಳಾಗಿವೆ. ಜೊತೆಗೆ ಅವರ್ಗಿ (1990), ಆಶಿಕಿ (1990), ಮತ್ತು ದಿಲ್ ಹೈ ಕಿ ಮಂತಾ ನಹೀನ್ (1991) ನಂತಹ ಲವ್‌ ಸ್ಟೋರಿ ಹಿಟ್‌ಗಳನ್ನು ನೀಡಿದ್ದಾರೆ.


  ಚಿತ್ರೋದ್ಯಮದಲ್ಲಿ ದಶಕಗಳ ಕಾಲ ಚಿತ್ರನಿರ್ಮಾಪಕ, ನಿರ್ಮಾಪಕ ಮತ್ತು ಮಾರ್ಗದರ್ಶಕರಾಗಿ ಮಹೇಶ್ ಭಟ್ ಅವರು ಪ್ರಭಾವಶಾಲಿ ಚಲನಚಿತ್ರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ಸ್ಟಾರ್‌ ಡೈರೆಕ್ಟರ್‌ ಎಂದು ಗುರುತಿಸಿಕೊಂಡಿದ್ದ ಮಹೇಶ್‌ ಭಟ್‌ ಸಂಪತ್ತು ಕೂಡ ಭರ್ಜರಿಯಾಗಿದೆ. CaKnowledge ಪ್ರಕಾರ, ಮಹೇಶ್‌ ಭಟ್‌ ಅವರ ನಿವ್ವಳ ಮೌಲ್ಯವು 373 ಕೋಟಿ ಎಂದು ಅಂದಾಜಿಸಲಾಗಿದೆ.


  ಹಾಗಾದರೆ ಮಹೇಶ್‌ ಭಟ್‌ ಸಿನಿಮಾ ಸೇರಿ ಯಾವೆಲ್ಲಾ ಮೂಲಗಳಿಂದ ಆದಾಯ ಪಡೆಯುತ್ತಿದ್ದಾರೆ ನೋಡೋಣ ಬನ್ನಿ


  ವಿಶೇಷ್ ಫಿಲ್ಮ್ಸ್


  ಮಹೇಶ್ ಅವರು ತಮ್ಮ ಸಹೋದರ ಮುಖೇಶ್ ಭಟ್ ಅವರೊಂದಿಗೆ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ರಾಝ್, ಆಶಿಕಿ ಮತ್ತು ಮರ್ಡರ್ ಮುಂತಾದ ಚಲನಚಿತ್ರಗಳ ಫ್ರಾಂಚೈಸಿಗಳನ್ನು ನಿರ್ಮಿಸಿದ ಪ್ರೊಡಕ್ಷನ್ ಬ್ಯಾನರ್ "ವಿಶೇಶ್ ಫಿಲ್ಮ್ಸ್" ಅವರ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿದೆ.


  ಇದನ್ನೂ ಓದಿ: Kendasampige: ವೋಟ್​​ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!


  ಮಹೇಶ್ ಭಟ್ ಆಸ್ತಿ


  ಚಲನಚಿತ್ರ ನಿರ್ಮಾಪಕರ ವಾಸ ಬಂಗಲೆ ಜುಹುದಲ್ಲಿದೆ, ಅಲ್ಲಿ ಅವರು ತಮ್ಮ ಮಕ್ಕಳಾದ ಪೂಜಾ ಭಟ್, ರಾಹುಲ್ ಭಟ್, ಶಾಹೀನ್ ಭಟ್ ಮತ್ತು ಪತ್ನಿ ಸೋನಿ ರಜ್ದನ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಇನ್ನೂ ಆಲಿಯಾ ಭಟ್‌ ಕೂಡ ಮದುವೆ ಮುನ್ನ ಇದೇ ಮನೆಯಲ್ಲಿಯೇ ವಾಸಿಸುತ್ತಿದ್ದರು.
  ಮಹೇಶ್ ಭಟ್ ಅವರು ನವಿ ಮುಂಬೈನಲ್ಲಿ 6.5 ಕೋಟಿ ಮೌಲ್ಯದ ಐಷಾರಾಮಿ ಆಸ್ತಿಯನ್ನು ಹೊಂದಿದ್ದಾರೆ. ಇಷ್ಟೇ ಅಲ್ಲ ಬೇರೆ ದೇಶಗಳಲ್ಲೂ ಆಸ್ತಿ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಮಹೇಶ್‌ ಭಟ್‌ ಹೂಡಿಕೆ ಮಾಡಿದ ಪ್ರಮುಖ ಆಸ್ತಿಯಲ್ಲಿ ಪ್ರೊಡಕ್ಷನ್ ಹೌಸ್ ಕಛೇರಿ ಪ್ರಮುಖವಾಗಿದೆ.
  ಮಹೇಶ್ ಭಟ್ ಸಂಭಾವನೆ


  ಮಹೇಶ್‌ ಭಟ್‌ ಕಾಸ್ಟಿ ಡೈರೆಕ್ಟರ್‌ ಆಗಿದ್ದು, ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ. ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್ ಮತ್ತು ಸಂಜಯ್ ದತ್ ನಾಯಕರಾಗಿ ನಟಿಸಿದ ಸಡಕ್ 2 ಅವರು ನಿರ್ದೇಶಿಸಿದ ಕೊನೆಯ ಚಿತ್ರ. Caknowledge ವರದಿಗಳ ಪ್ರಕಾರ, 3 ಕೋಟಿ ರೂ.ಗಿಂತ ಹೆಚ್ಚಿನ ಮಾಸಿಕ ವೇತನವನ್ನು ಗಳಿಸುತ್ತಾರೆ, ಇದು ವಾರ್ಷಿಕ ಆದಾಯ 36 ಕೋಟಿ ರೂ. ಆಗಿದ್ದು, ಪ್ರತಿ ಸಿನಿಮಾಗೆ ಅವರು ಪಡೆಯುವ ಸರಾಸರಿ ಸಂಭಾವನೆ 11 ಕೋಟಿ ರೂ. ಆಗುತ್ತದೆ.


  ಇದನ್ನೂ ಓದಿ: Bollywood Gym Fashion: ಬಾಲಿವುಡ್ ತಾರೆಯರ ಜಿಮ್ ಫ್ಯಾಷನ್, ಬಿ-ಟೌನ್ ಟಾಪ್ ನಟಿ ಮಣಿಯರ ವರ್ಕೌಟ್ ಲುಕ್


  ಐಷಾರಾಮಿ ಕಾರು


  ಅನೇಕ ಸೆಲೆಬ್ರಿಟಿಗಳಂತೆ ಮಹೇಶ್ ಭಟ್ ಕೂಡ ಐಷಾರಾಮಿ ಕಾರುಗಳ ಕ್ರೇಜ್‌ ಹೊಂದಿದ್ದಾರೆ. ಮರ್ಸಿಡಿಸ್ ಬೆಂಜ್, ರೇಂಜ್ ರೋವರ್ ಮತ್ತು BMW ನಂತಹ ಕಾರುಗಳು ಅವರ ಮನೆಯಲ್ಲಿವೆ. ಈ ಎಲ್ಲಾ ಕಾರುಗಳು 1.2 ರಿಂದ 2 ಕೋಟಿ ರೂಪಾಯಿ ಬೆಲೆ ಬಾಳುತ್ತವೆ.


  ನಿವ್ವಳ ಮೌಲ್ಯ


  ವರದಿಯ ಪ್ರಕಾರ, ನಿರ್ಮಾಪಕ ಮಹೇಶ್ ಭಟ್ ಸಂಪತ್ತು ರಿಯಲ್ ಎಸ್ಟೇಟ್ ಮತ್ತು ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಂತಹ ವಿವಿಧ ಆದಾಯ ಮೂಲಗಳನ್ನು ಹೊಂದಿದ್ದಾರೆ. ಅವರು ಹೂಡಿಕೆದಾರರೂ ಕೂಡ ಆಗಿದ್ದು, ಕೋಟಿಗಟ್ಟಲೆ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ಅವರ ಸಂಪತ್ತು 55% ರಷ್ಟು ಗಮನಾರ್ಹವಾಗಿ ಬೆಳೆದಿದೆ. ಅವರ ವೈಯಕ್ತಿಕ ಹೂಡಿಕೆ ಸುಮಾರು 115 ಕೋಟಿ ರೂ. ಚಲನಚಿತ್ರ ನಿರ್ಮಾಪಕರ ನಿವ್ವಳ ಮೌಲ್ಯವು ಸುಮಾರು $48 ಮಿಲಿಯನ್ (ಅಂದಾಜು ರೂ 373 ಕೋಟಿ) ಎಂದು ಅಂದಾಜಿಸಲಾಗಿದೆ.

  Published by:ಪಾವನ ಎಚ್ ಎಸ್
  First published: