ವಿವಾದಗಳಿಗೆ ಹೆಸರುವಾಸಿಯಾಗಿರುವ ನಟಿ ಕಂಗನಾ ರನೌತ್ (Kangana Ranaut) ಅವರನ್ನು ಬಾಲಿವುಡ್‌ನಲ್ಲಿ ದೂಷಿಸದ ನಟ ನಟಿಯರು ಇಲ್ಲ. ಪ್ರತಿಭಾವಂತ ನಟಿಯಾಗಿದ್ದರೂ (Actress) ಒಂದಿಲ್ಲೊಂದು ವಿವಾದಗಳಿಂದ ಕಂಗನಾ ಹೆಸರುವಾಸಿಯಾಗಿದ್ದಾರೆ. ವಿವಾದಗಳಿಂದಲೇ ಕಂಗನಾ ಪ್ರಸಿದ್ಧಿಯನ್ನು ಪಡೆದುಕೊಂಡಿರುವುದು ಹಾಗೂ ನೇರವಾಗಿ ಟೀಕಿಸುವ ಜಾಯಮಾನ ಈ ನಟಿಯದ್ದಾಗಿದೆ. ಹೆಚ್ಚಿನ ಪೋಸ್ಟ್‌ಗಳು ನಟಿಯ ಮುಂಬರಲಿರುವ ಪ್ರಾಜೆಕ್ಟ್‌ಗಳ (Projects) ಕುರಿತಾಗಿದ್ದರೂ ಇನ್ನು ಕೆಲವೊಂದು ಬಾಲಿವುಡ್‌ನ ಹೆಸರಾಂತ ಸೆಲೆಬ್ರಿಟಿಗಳನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಬೆಟ್ಟುಮಾಡುವಂತಿದೆ. ಈ ಬಾರಿ ಕಂಗನಾ ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರ ಮೇಲೆ ಆರೋಪ ಹೊರಿಸಿದ್ದು ನಿರ್ದೇಶಕ ಹಿಂಸಾತ್ಮಕವಾಗಿ ಅಂತೆಯೇ ಕಲಾತ್ಮಕವಾಗಿ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹೇಶ್ ನಿಜವಾದ ಹೆಸರು ಅಸ್ಲಾಂ
ಕ್ವೀನ್ ನಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸ್ಟೋರಿಗಳ ಸೀರೀಸ್‌ಗಳನ್ನು ಹಂಚಿಕೊಂಡಿದ್ದು, ಇದು ಮಹೇಶ್ ಭಟ್‌ಗೆ ಸಂಬಂಧಿಸಿದ್ದಾಗಿದೆ. ವಿಡಿಯೋಗಳಲ್ಲಿ ಭಟ್ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಮಹೇಶ್ ಅವರ ನಿಜವಾದ ಹೆಸರು ಮಹೇಶ್ ಅಲ್ಲ ಅಸ್ಲಾಂ ಎಂಬುದಾಗಿ ಕಂಗನಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Miheeka Daggubati: ರಾಣಾ ದಗ್ಗುಬಾಟಿ ಪತ್ನಿಗೆ ಪತಿ ಅಂದ್ರೆ ಇಷ್ಟ, ಅದಕ್ಕಿಂತಲೂ ಇಷ್ಟದ ವಸ್ತುವೊಂದಿದೆ!
ಇದೇ ವಿಡಿಯೋದ ಮುಂದಿನ ಭಾಗದಲ್ಲಿ, ಕಂಗನಾ ನಾನು (ಮಹೇಶ್ ಭಟ್) ಆತನ ನಿಜವಾದ ಹೆಸರು ಅಸ್ಲಾಂ ಎಂದು ಹೇಳಿದ್ದೆ. ತನ್ನ ಎರಡನೆಯ ಪತ್ನಿ (ಸೋನಿ ರಜ್ದಾನ್) ಯನ್ನು ವಿವಾಹವಾಗಲು ಆತ ಮತಾಂತರಗೊಂಡಿದ್ದ. ಅದೊಂದು ಸುಂದರ ಹೆಸರು ಏಕೆ ಅದನ್ನು ಮರೆಮಾಡಲಾಗಿದೆ? ಎಂದು ಬರೆದುಕೊಂಡಿದ್ದಾರೆ.
ಮತಾಂತರಗೊಂಡರೂ ಅದೇ ಹೆಸರನ್ನೇ ಬಳಸಬೇಕು:
ಕೊನೆಯ ಸ್ಲೈಡ್‌ನಲ್ಲಿ ಇನ್ನಷ್ಟು ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಕಂಗನಾ, ಮತಾಂತರಗೊಂಡಾಗ ಆತ ತನ್ನ ನಿಜವಾದ ಹೆಸರನ್ನು ಬಳಸಿಕೊಳ್ಳಬೇಕು ನಿರ್ದಿಷ್ಟ ಧರ್ಮವನ್ನು ಬಳಸಬಾರದು ಎಂದಿದ್ದಾರೆ.
ಮಹೇಶ್ ಭಟ್‌ರನ್ನೇ ಗುರಿಯಾಗಿಸಿಕೊಂಡಿರುವ ನಟಿ
35 ರ ಹರೆಯದ ನಟಿ ಹೆಸರಾಂತ ಹಾಗೂ ಹಿರಿಯ ನಿರ್ದೇಶಕರನ್ನು ಗುರಿಯಾಗಿಸಿಕೊಂಡು ದೋಷಾರೋಪಣೆ ಮಾಡುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ ಮಹೇಶ್ ಭಟ್ ಅವರ ಮಗಳು ಪೂಜಾ ಭಟ್ ಚಿತ್ರ ದೋಖಾವನ್ನು ಕಂಗನಾ ನಿರಾಕರಿಸಿದ್ದಕ್ಕೆ ಮಹೇಶ್ ಭಟ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದರು.
ಆಲಿಯಾರನ್ನು ಬಿಡದ ಕಂಗನಾ
ಮತ್ತೊಂದೆಡೆ, ಮಹೇಶ್ ಭಟ್ ಅವರ ಮಗಳು ಆಲಿಯಾ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಗೂ ಮುನ್ನ, ಕಂಗನಾ ತಂದೆ-ಮಗಳನ್ನು ಪರೋಕ್ಷವಾಗಿ ಕೆಣಕಿದ್ದರು. ತಮ್ಮ ಇನ್‌ಸ್ಟಾ ಸ್ಟೋರಿಗಳಲ್ಲಿ ಅವರುಗಳನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರಗಳನ್ನು ಮಾಡಿದ್ದಾರೆ.
ಕಂಗನಾ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಆಕೆಯ ಪ್ರಕಾರ ಚಿತ್ರದಲ್ಲಿನ ದೊಡ್ಡ ಪ್ರಮಾದವೆಂದರೆ ತಪ್ಪಾದ ತಾರಾಗಣವಾಗಿದೆ. ಏಕೆಂದರೆ ಆಲಿಯಾ ತಂದೆಯ ದೇವತೆಯಾಗಿದ್ದರೆ ಇನ್ನು ಮಹೇಶ್ ಚಲನಚಿತ್ರ ಮಾಫಿಯಾದಲ್ಲಿ ಹೆಸರುವಾಸಿಯಾದವರು ಎಂದು ಕೆಣಕಿದ್ದರು.
ಆಲಿಯಾ ಚಿತ್ರದ ಬಗ್ಗೆ ಟೀಕೆ
ಫೆಬ್ರವರಿ 2022 ರಲ್ಲಿ ಚಿತ್ರ ಬಿಡುಗಡೆಗೂ ಮುನ್ನ ಫ್ಯಾಷನ್ ಚಿತ್ರದ ನಟಿ ಕಂಗನಾ ಮುಕ್ತವಾಗಿ ಮಾತನಾಡಿದ್ದು, ಅಪ್ಪನ ಮುದ್ದಿನ ಮಗಳಿಗಾಗಿ (ಮಹೇಶ್ ಭಟ್, ಆಲಿಯಾ) ರೂ 200 ಕೋಟಿ ಗಲ್ಲಾಪೆಟ್ಟಿಗೆಯಲ್ಲಿ ಸುಟ್ಟು ಬೂದಿಯಾಗುವುದಂತೂ ಖಂಡಿತ. ಆಲಿಯಾ ಆಕರ್ಷಕವಾಗಿದ್ದರೂ ಬುದ್ಧಿವಂತ ನಟಿ ಅಲ್ಲ. ಅದಾಗ್ಯೂ ನಟನೆಯ ಗಂಧಗಾಳಿ ಇಲ್ಲದ ಮಗಳು ಕೂಟ ನಟಿಸುತ್ತಾಳೆ ಎಂಬುದಾಗಿ ಅಪ್ಪ ಪ್ರೂವ್ ಬಯಸುತ್ತಾರೆ. ಚಿತ್ರವು ತಪ್ಪಾದ ತಾರಾಗಣವನ್ನು ಹೊಂದಿದೆ ಹಾಗಾಗಿಯೇ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲುತ್ತದೆ. ಇವರೆಲ್ಲರೂ ಖಂಡಿತ ಬದಲಾಗುವುದಿಲ್ಲ ಎಂದು ನೇರವಾಗಿಯೇ ಕಂಗನಾ ಅಪ್ಪ ಮಗಳನ್ನು ಟೀಕಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ