ಪ್ರಿನ್ಸ್​ ಮಹೇಶ್​ ಬಾಬು ಜತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ..!

ಟಾಲಿವುಡ್​ ಪ್ರಿನ್ಸ್​ ಜತೆ ಫೋಟೋ ತೆಗೆಸಿಕೊಳ್ಳುವ ಅವಕಾಶ... ಹೈದರಾಬಾದಿನಲ್ಲಿರುವ ಮಹೇಶ್​ ಅವರ ಎಎಂಬಿ ಸಿನಿಮಾಸ್​ಗೆ ಹೋದರೆ ಅಲ್ಲಿ ಪ್ರಿನ್ಸ್​ ಜತೆ ಸೆಲ್ಫಿ ತೆಗೆದುಕೊಳ್ಳಬಹುದು.

Anitha E | news18
Updated:February 6, 2019, 5:21 PM IST
ಪ್ರಿನ್ಸ್​ ಮಹೇಶ್​ ಬಾಬು ಜತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ..!
ನಟ ಮಹೇಶ್​ ಬಾಬು
  • News18
  • Last Updated: February 6, 2019, 5:21 PM IST
  • Share this:
ಟಾಲಿವುಡ್ ಟಾಪ್​ ನಟರಲ್ಲಿ ಒಬ್ಬರಾದ ಪ್ರಿನ್ಸ್​ ಮಹೇಶ್ ಬಾಬು ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಅವರ ಜನಪ್ರಿಯತೆಯಿಂದಾಗಿ ಅವರಿಗೆ ಅಭಿಮಾನಿಗಳಲ್ಲದವರೂ ಸಹ ಅವರನ್ನು ಇಷ್ಟ ಪಡುತ್ತಾರೆ. ಇಷ್ಟ ಮಟ್ಟಿಗೆ ಮಹೇಶ್​ ಬಗ್ಗೆ ಕ್ರೇಜ್​ ಇದೆ.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಯಂಗ್​​ ರೆಬೆಲ್ ಅಭಿಷೇಕ್​ರಿಂದ​ ಪ್ರೇಮದ ಕಾಣಿಕೆ..!

ಇಂತಹ ನಟನೊಂದಿಗೆ ಯಾರಿಗೆ ತಾನೆ ಸೆಲ್ಫಿ ತೆಗೆದುಕೊಳ್ಳಲು ಇಷ್ಟವಿರುವುದಿಲ್ಲ ಹೇಳಿ. ಅಂತಹ ಅವಕಾಶ ಸಿಕ್ಕರೆ ಸಾಕು ಅಂತ ಜನರು ಕಾಯುತ್ತಾರೆ. ಇಲ್ಲಿಯವರೆಗೆ ಯಾರಿಗೆ ಮಹೇಶ್ ಬಾಬು ಜತೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಸಿಕ್ಕಿಲ್ಲವೋ ಅವರಿಗೆ ಈಗ ಸುವರ್ಣಾವಕಾಶವೊಂದು ಸಿಕ್ಕಿದೆ.

ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು


ಲಂಡನ್​ನಲ್ಲಿರುವ ಮೇಡಮ್​ ಟುಸ್ಸಾಡ್ಸ್​  ಮೇಣದ ಮ್ಯೂಸಿಯಂನಲ್ಲಿ ಮಹೇಶ್​ ಬಾಬು ಅವರ ಪ್ರತಿಮೆ ಇಡುವ ಕಾಲ ಬಂದಿದೆ. ಟಾಲಿವುಡ್​ನ ಬಾಹುಬಲಿ ಪ್ರಭಾಸ್​ ಅವರ ವಿಗ್ರಹವನ್ನು ಹೊರತುಪಡಿಸಿದರೆ, ಈಗ ಮಹೇಶ್​ ಬಾಬು ಅವರ ಪ್ರತಿಮೆಯನ್ನು ಮಾತ್ರ ಇಲ್ಲಿ ಇರಿಸಲಾಗುತ್ತಿದೆ.

ಮೇಡಮ್​ ಟುಸ್ಸಾಡ್​ ಮ್ಯೂಸಿಯಂನಲ್ಲಿ ಸಿದ್ದವಾಗುತ್ತಿರುವ ನಟ ಮಹೇಶ್​ ಬಾಬುರವರ ಮೇಣದ ಪ್ರತಿಮೆ


ಸದ್ಯ ಮಹೇಶ್ ಅವರ ಮೇಣದ ಪ್ರತಿಮೆ ಸಿಂಗಪೂರ್​ನಲ್ಲಿದ್ದು, ಅದನ್ನು ಶೀಘ್ರದಲ್ಲೇ ಹೈದರಾಬಾದಿಗೆ ತರಲಾಗುತ್ತದೆ. ಇಲ್ಲಿ ಮಹೇಶ್​ ಅವರ ಎಎಂಬಿ ಸಿನಿಮಾಸ್​ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಅದು ಸಹ ಈ ತಿಂಗಳಾಂತ್ಯಕ್ಕೆ ಇದನ್ನು ಹೈದರಾಬಾದಿಗೆ ತಂದು ಪ್ರದರ್ಶಿಸಿ, ನಂತರ ಲಂಡನ್​ನ ಮ್ಯೂಸಿಯಂಗೆ ಸ್ಥಳಾಂತರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಈ ಮೇಣದ ಪ್ರತಿಮೆಯೊಂದಿಗೆ ಚಿತ್ರಗಳನ್ನು ತೆಗೆಸಿಕೊಳ್ಳಲು ಸಹ ಅವಕಾಶ ಕಲ್ಪಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. 

'ಕೆ.ಜಿ.ಎಫ್​' ನಿರ್ದೇಶಕ ಪ್ರಶಾಂತ್​ ನೀಲ್​ರ ರೊಮ್ಯಾಂಟಿಕ್​ ಲುಕ್ಸ್​
First published:February 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading