• Home
  • »
  • News
  • »
  • entertainment
  • »
  • Mahesh Babu: ನಮ್ಮ ಅಜ್ಜನೇ ನಮಗೆ ಹೀರೋ! ಮಹೇಶ್ ಬಾಬು ಮಕ್ಕಳ ಭಾವುಕ ಬರಹ

Mahesh Babu: ನಮ್ಮ ಅಜ್ಜನೇ ನಮಗೆ ಹೀರೋ! ಮಹೇಶ್ ಬಾಬು ಮಕ್ಕಳ ಭಾವುಕ ಬರಹ

ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ಮಹೇಶ್ ಬಾಬು ಅವರ ಮಕ್ಕಳು ತಾತನಿಗಾಗಿ ವಿಶೇಷವಾದ ಪೋಸ್ಟ್ ಶೇರ್ ಮಾಡಿ ಭಾವುಕರಾಗಿದ್ದಾರೆ. ಅಜ್ಜನ ಜೊತೆಗಿನ ಸಮಯವನ್ನು ನೆನಪಿಸಿಕೊಂಡಿದ್ದಾರೆ.

  • Share this:

ತೆಲುಗು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಟರಾಗಿದ್ದ ಕೃಷ್ಣ (Krishna) ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದ ಸುದ್ದಿ ಕೇಳಿ ಬಹುತೇಕ ಸಿನಿ ಪ್ರೇಕ್ಷಕರಿಗೆ ಮತ್ತು ಕೃಷ್ಣ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಸೋಮವಾರ ಹೃದಯ ಸ್ತಂಭನಕ್ಕೆ ಒಳಗಾದ ನಂತರ ಅವರನ್ನು ಹೈದರಾಬಾದಿನ (Hyderabad) ಗಚ್ಚಿಬೌಲಿಯಲ್ಲಿರುವ ಒಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೆಲುಗು ಚಿತ್ರರಂಗದ (Tollywood) ಜನಪ್ರಿಯ ನಟ ಮಹೇಶ್ ಬಾಬು ಅವರ ತಂದೆ. ಅಭಿಮಾನಿಗಳಿಂದ 'ಸೂಪರ್ ಸ್ಟಾರ್' ‘ನಟ ಶೇಖರ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೃಷ್ಣ ಅವರು 55 ವರ್ಷಗಳ ವೃತ್ತಿಜೀವನದಲ್ಲಿ 340 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪತ್ನಿ ಇಂದಿರಾ ದೇವಿ ಅವರು ಇದೇ ವರ್ಷ ಸೆಪ್ಟೆಂಬರ್ ನಲ್ಲಿ ನಿಧನರಾಗಿದ್ದರು.


ಎರಡು ತಿಂಗಳುಗಳ ಅಂತರದಲ್ಲಿಯೇ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ನಟ ಮಹೇಶ್ ಬಾಬು


ಮಹೇಶ್ ಬಾಬು ಎರಡು ತಿಂಗಳುಗಳ ಅಂತರದಲ್ಲಿಯೇ ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ ಅಂತ ಹೇಳಬಹುದು. ತಾಯಿಯ ನಿಧನದ ಆ ನೋವಿನಿಂದ ಹೊರ ಬರುವ ಮೊದಲೇ ತಂದೆಯನ್ನು (Father) ಸಹ ಕಳೆದುಕೊಂಡಿರುವುದು ನಟ ಮಹೇಶ್ ಬಾಬು ಕುಟುಂಬಕ್ಕೆ ತುಂಬಾನೇ ಒಂದು ನೋವಿನ ಸಂಗತಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಷ್ಟೇ ಅಲ್ಲದೆ ಈ ವರ್ಷದ ಜನವರಿಯಲ್ಲಿ, ಮಹೇಶ್ ತನ್ನ ಹಿರಿಯ ಸಹೋದರ ರಮೇಶ್ ಅವರನ್ನು ಕಳೆದುಕೊಂಡಿದ್ದರು.




ತೆಲುಗು ಸೂಪರ್ ಸ್ಟಾರ್ ಮತ್ತು ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರು ತಮ್ಮ 80ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ನಿಧನರಾದರು. ಮಹೇಶ್ ಬಾಬು ಅವರ ಮಕ್ಕಳಾದ ಸಿತಾರಾ ಮತ್ತು ಗೌತಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಅಜ್ಜನಿಗಾಗಿ ಭಾವನಾತ್ಮಕ ಟಿಪ್ಪಣಿಗಳನ್ನು ಪೋಸ್ಟ್ ಮಾಡಿದ್ದಾರೆ.


ಮಹೇಶ್ ಬಾಬು ಮಗಳು ಸಿತಾರಾ ಅಜ್ಜನ ನೆನಪಿನಲ್ಲಿ ಏನಂತ ಬರೆದಿದ್ದಾರೆ ನೋಡಿ..


ಮಹೇಶ್ ಬಾಬು ಅವರ ಮಗಳು ಸಿತಾರಾ ತನ್ನ ಅಜ್ಜ ಕೃಷ್ಣ ಅವರೊಂದಿಗಿನ ಒಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು "ವಾರದ ದಿನಗಳಲ್ಲಿ ನಿಮ್ಮ ಜೊತೆ ಕುಳಿತು ಊಟ ಮಾಡುವ ಅವಕಾಶ ಮತ್ತೆ ಎಂದಿಗೂ ಬರುವುದಿಲ್ಲ..... ನೀವು ನನಗೆ ಅನೇಕ ಅಮೂಲ್ಯವಾದ ವಿಷಯಗಳನ್ನು ಕಲಿಸಿದ್ದೀರಿ... ಯಾವಾಗಲೂ ನನ್ನನ್ನು ನಗಿಸುತ್ತಿದ್ದೀರಿ, ಈಗ ನನ್ನ ಜೊತೆ ಉಳಿದಿರುವುದು ನಿಮ್ಮ ನೆನಪುಗಳು ಮಾತ್ರ. ನೀವು ನನ್ನ ಹೀರೋ... ಒಂದಲ್ಲ ಒಂದು ದಿನ ನಾನು ನಿಮಗೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇನೆ ಎಂದು ನಾನು ಭಾವಿಸುತ್ತೇನೆ. ನಾನು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ ತಾತಾ.." ಎಂದು ಬರೆದಿದ್ದಾರೆ.


ಇದನ್ನೂ ಓದಿ: Kamal Haasan: ಮಾಜಿ ಪತ್ನಿಯ ಸ್ವಾಭಿಮಾನದ ಬಗ್ಗೆ ಕಮಲ್ ಹಾಸನ್ ಹೆಮ್ಮೆಯ ಮಾತು


ಅಜ್ಜನ ಬಗ್ಗೆ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಮಹೇಶ್ ಮಗ ಗೌತಮ್..


ನಟ ಮಹೇಶ್ ಬಾಬು ಅವರ ಮಗ ಗೌತಮ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಅಜ್ಜ ಕೃಷ್ಣ ಅವರೊಂದಿಗೆ ತೆಗೆಸಿಕೊಂಡ ಫೋಟೋವೊಂದನ್ನು ಹಂಚಿಕೊಳ್ಳುತ್ತಾ ಅವರು "ನೀವು ಎಲ್ಲೇ ಇದ್ದರೂ... ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನೀವು ಸಹ ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ. ಮಿಸ್ ಯೂ ತಾತಾ..." ಎಂದು ಬರೆದಿದ್ದಾರೆ.


ಮಹೇಶ್ ಬಾಬು


ಅಜ್ಜನಿಗೆ ಗೌರವ ಸಲ್ಲಿಸಿದ ಮೊಮ್ಮಕ್ಕಳು


ಬುಧವಾರ ಇಬ್ಬರೂ ಮಕ್ಕಳು ತಮ್ಮ ಅಜ್ಜ ಕೃಷ್ಣ ಅವರಿಗೆ ಗೌರವ ಸಲ್ಲಿಸಿದರು. ನಟನ ಪಾರ್ಥಿವ ಶರೀರವನ್ನು ಪದ್ಮಾಲಯ ಸ್ಟುಡಿಯೋದಿಂದ ಹೈದರಾಬಾದ್ ನ ಚಿತಾಗಾರ ಸ್ಥಳವಾದ ವೈಕುಂಠ ಮಹಾಪ್ರಸ್ಥಾನಂ ಗೆ ಕೊಂಡೊಯ್ಯಲಾಯಿತು.

Published by:Divya D
First published: