ಕಿಂಗ್ ಖಾನ್ ಶಾರುಖ್ ಖಾನ್ ನಿನ್ನೆಯಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 55ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇನ್ನು ಎರಡು ವರ್ಷಗಳಿಂದ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳದ ನಟ ಶಾರುಖ್, ಇತ್ತೀಚೆಗಷ್ಟೆ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದ್ದರು. ಅದು ಅವರ ಸಿನಿಮಾ ಕುರಿತಾಗಿ. ಈಗಷ್ಟೆ ಅವರ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇನ್ನು ಅವರ ಹುಟ್ಟುಹಬ್ಬದಂದು ಶಾರುಖ್ ಶುಭ ಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಬೇಗನೆ ಸಿಗುವ ಎಂದು ಹೇಳಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಒಂದು ಸಂದೇಶ ಸಹ ನೀಡಿದ್ದಾರೆ. ಇನ್ನು ಶಾರುಖ್ ಖಾನ್ಗೆ ಸೆಲೆಬ್ರಿಟಿಗಳೂ ಬಹಳ ವಿಶೇಷವಾಗಿ ವಿಶ್ ಮಾಡಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಹ ಶಾರುಖ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಮಹೇಶ್ ಬಾಬು, ನಿನ್ನೆ ಅಂದರೆ . ನ.2ರಂದು ಶಾರುಖ್ ಹುಟ್ಟುಹಬ್ಬದಂದು ಅವರೊಂದಿಗೆ ತೆಗೆಸಿಕೊಂಡಿರುವ ಪೋಟೋ ಹಂಚಿಕೊಂಡಿದ್ದಾರೆ,. ಈ ಮೂಲಕ ಶಾರುಖ್ಗೆ ಬರ್ತ್ ಡೇಗೆ ವಿಶ್ ಮಾಡಿದ್ದಾರೆ.
ನನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡುವ ಬದಲು ನಿಮ್ಮ ಸಮಯವನ್ನು ಸದ್ಯದ ಪರಿಸ್ಥಿತಿಯಲ್ಲಿ ಕೆಲವೊಂದು ಅಗತ್ಯ ಕೆಲಸಗಳಿಗೆ ಉಯೋಗಿಸಿಕೊಂಡರೆ ನನಗೆ ಖುಷಿಯಾಗುತ್ತದೆ. ಯುವ ಜನತೆ ಸದ್ಯದ ಪರಿಸ್ಥಿತಿಯಲ್ಲಿ ರಕ್ತದಾನ ನಡೆಯುತ್ತಿರುವ ಕಡೆಗಳಲ್ಲಿ ಹಾಗೂ ಸಹಾಯಕ್ಕಾಗಿ ಕಾಯುತ್ತಿರುವವರಿಗೆ ನೆರವಾದರೆ ನಿಜಕ್ಕೂ ನನಗೆ ಸಂತೋಷವಾಗುತ್ತದೆ ಎಂದು ಶಾರುಖ್ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ