ಮಾಸ್ಕ್ ಧರಿಸೋಣ, ಜವಾಬ್ದಾರಿಯುತ ನಾಗರಿಕರಾಗೋಣ; ಮಹೇಶ್ ಬಾಬು

Mahesh Babu: ಇನ್​​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಾಕಿಕೊಂಡಿರುವ ಮಹೇಶ್​ ಬಾಬು. ಈ ಮೂಲಕ ಜನರಿಗೆ ಮನವಿ ಮಾಡಿದ್ದಾರೆ. ನಾವು ಹೊಸ ಬದುಕು ತೆರೆದುಕೊಳ್ಳುತ್ತಿದ್ದೇವೆ. ಕಡ್ಡಾಯವಾಗಿ  ಮಾಸ್ಕ್​​ ಧರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಹೇಳಿದ್ದಾರೆ

news18-kannada
Updated:May 22, 2020, 9:50 PM IST
ಮಾಸ್ಕ್ ಧರಿಸೋಣ, ಜವಾಬ್ದಾರಿಯುತ ನಾಗರಿಕರಾಗೋಣ; ಮಹೇಶ್ ಬಾಬು
ಮಹೇಶ್ ಬಾಬು
  • Share this:
ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಮಹಾಮಾರಿ ಕೊರೋನಾ ವೈರಸ್​​ ಕುರಿತಂತೆ ಜನರಲ್ಲಿ ಎಚ್ಚರಿಕೆಯ ಮನವಿ ಮಾಡಿದ್ದಾರೆ. ಕಡ್ಡಾಯವಾಗಿ ಮಾಸ್ಕ್​ ಧರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳೋಣ. ಜವಾಬ್ದಾರಿಯುತ ನಾಗರಿಕರಾಗೋಣ ಎಂದು ಹೇಳಿದ್ದಾರೆ.

ಇನ್​​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಾಕಿಕೊಂಡಿರುವ ಮಹೇಶ್​ ಬಾಬು. ಈ ಮೂಲಕ ಜನರಿಗೆ ಮನವಿ ಮಾಡಿದ್ದಾರೆ. ನಾವು ಹೊಸ ಬದುಕು ತೆರೆದುಕೊಳ್ಳುತ್ತಿದ್ದೇವೆ. ಕಡ್ಡಾಯವಾಗಿ  ಮಾಸ್ಕ್​​ ಧರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳೋಣ. ಮಾಸ್ಕ್​​ ಧರಿಸುವುದು ಕೊಂಚ ಕಷ್ಟವಾದರೂ ಈಗ ಅನಿವಾರ್ಯ. ಮಾಸ್ಕ್​ ಧರಿಸುವುದು ಜವಾಬ್ದಾರಿಯುತ ನಾಗರಿಕರ ಲಕ್ಷಣ. ನಾನು ಮಾಸ್ಕ್​​ ಧರಿಸುತ್ತೇನೆ, ನೀವು ? ಎಂದು ಹೇಳಿದ್ದಾರೆ.

ಮಹೇಶ್​ ಬಾಬು ಮಾಡಿರುವ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ನಟ ಸಾಮಾಜಿಕ ಕಳಕಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 


Salman Khan: ದಕ್ಷಿಣ ಭಾರತದ ನಿರ್ದೇಶಕನತ್ತ ಸಲ್ಮಾನ್​ ಖಾನ್ ಚಿತ್ತ

ಖ್ಯಾತ ನಿರ್ದೇಶಕ ರಾಜಮೌಳಿ ಟಾಲಿವುಡ್​ ಪ್ರಿನ್ಸ್​ ಮಹೇಶ್​​ ಬಾಬು ಅವರ ಜೊತೆ ಸಿನಿಮಾ ಮಾಡುವುದಾಗಿ ಕಳೆದ ಕೆಲ ಖಾಸಗಿ ವಾಹಿನಿಯೊಂದರಲ್ಲಿ ಹೇಳಿದ್ದರು. ಅವರಿಗಾಗುವಂತಹ ಕಥೆ ನನ್ನ ಬಳಿ ಇದೆ. ಮಹೇಶ್​​ ಬಾಬು ನನ್ನ ಕಥೆಗೆ ಸರಿ ಹೊಂದುತ್ತಾರೆ. ಹಾಗಾಗಿ ಅವರ ಜೊತೆಗೆ ಸಿನಿಮಾ ಮಾಡುವುದಾಗಿ ಹೇಳಿದ್ದರು.

ಆದರೆ ಕೆಲ ದಿನಗಳ ಹಿಂದೆ ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ, ಮೇ 31ರಂದು ಮಹೇಶ್​ ಬಾಬು ಅವರ ತಂದೆ ಕೃಷ್ಣ ಅವರು ಹುಟ್ಟು ಹಬ್ಬ. ಆ ವಿಶೇಷ ದಿನದಂದು ಮಹೇಶ್​ ಬಾಬು ಅವರು ರಾಜಮೌಳಿ ಅವರ ಜೊತೆಗಿನ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್​ ನೀಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಾಗಾಗಿ ಅಭಿಮಾನಿಗಳು ಕೂಡ ಕಾದು ಕುಳಿತ್ತಿದ್ದಾರೆ.

‘ಕೆ.ಜಿ.ಎಫ್‘ ಈ​ ನಟಿಯ ಜೊತೆ ಇರುವುದು ನಾಲ್ಕೇ ಬಟ್ಟೆಯಂತೆ!
First published:May 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading