ರಾಜಮೌಳಿ ಜೊತೆ ಟಾಲಿವುಡ್​ ಪ್ರಿನ್ಸ್​ ಸಿನಿಮಾ; ತಂದೆಯ ಹುಟ್ಟು ಹಬ್ಬಕ್ಕೆ ಸಿಹಿ ಸುದ್ದಿ ನೀಡಲಿದ್ದಾರಾ ಮಹೇಶ್ ಬಾಬು?

ಇದೀಗ ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ, ಮೇ 31ರಂದು ಮಹೇಶ್​ ಬಾಬು ಅವರ ತಂದೆ ಕೃಷ್ಣ ಅವರು ಹುಟ್ಟು ಹಬ್ಬ. ಆ ವಿಶೇಷ ದಿನದಂದು ಮಹೇಶ್​ ಬಾಬು ಅವರು ರಾಜಮೌಳಿ ಅವರ ಜೊತೆಗಿನ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್​ ನೀಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

news18-kannada
Updated:May 11, 2020, 9:46 PM IST
ರಾಜಮೌಳಿ ಜೊತೆ ಟಾಲಿವುಡ್​ ಪ್ರಿನ್ಸ್​ ಸಿನಿಮಾ; ತಂದೆಯ ಹುಟ್ಟು ಹಬ್ಬಕ್ಕೆ ಸಿಹಿ ಸುದ್ದಿ ನೀಡಲಿದ್ದಾರಾ ಮಹೇಶ್ ಬಾಬು?
ರಾಜಮೌಳಿ, ಮಹೇಶ್​​ ಬಾಬು
  • Share this:
ಖ್ಯಾತ ನಿರ್ದೇಶಕ ರಾಜಮೌಳಿ ಟಾಲಿವುಡ್​ ಪ್ರಿನ್ಸ್​ ಮಹೇಶ್​​ ಬಾಬು ಅವರ ಜೊತೆ ಸಿನಿಮಾ ಮಾಡುವುದಾಗಿ ಕಳೆದ ಕೆಲ ಖಾಸಗಿ ವಾಹಿನಿಯೊಂದರಲ್ಲಿ ಹೇಳಿದ್ದರು. ಅವರಿಗಾಗುವಂತಹ ಕಥೆ ನನ್ನ ಬಳಿ ಇದೆ. ಮಹೇಶ್​​ ಬಾಬು ನನ್ನ ಕಥೆಗೆ ಸರಿ ಹೊಂದುತ್ತಾರೆ. ಹಾಗಾಗಿ ಅವರ ಜೊತೆಗೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಯಾವ ಕಥೆಯನ್ನು ಆಧರಿಸಿದ ಸಿನಿಮಾ? ಸಿನಿಮಾದ ಟೈಟಲ್​ ಯಾವುದು? ಇದಾವುದರ ಬಗ್ಗೆ ರಾಜಮೌಳಿ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಮಾತ್ರವಲ್ಲದೆ ಮಹೇಶ್​ ಬಾಬು ಕೂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

ಇದೀಗ ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ, ಮೇ 31ರಂದು ಮಹೇಶ್​ ಬಾಬು ಅವರ ತಂದೆ ಕೃಷ್ಣ ಅವರು ಹುಟ್ಟು ಹಬ್ಬ. ಆ ವಿಶೇಷ ದಿನದಂದು ಮಹೇಶ್​ ಬಾಬು ಅವರು ರಾಜಮೌಳಿ ಅವರ ಜೊತೆಗಿನ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್​ ನೀಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಮಹೇಶ್​​ ಬಾಬು ಅವನ್ನು ಹಾಕಿಕೊಂಡು ರಾಜಮೌಳಿ ಸಿನಿಮಾ ಮಾಡಬೇಕು ಎಂಬುದು ಪ್ರಿನ್ಸ್​​ ಅಭಿಮಾನಿಗಳ ಒತ್ತಾಸೆಯಾಗಿತ್ತು. ರಾಜಮೌಳಿ ಅವರು ಕೂಡ ಈ ಬಗ್ಗೆ ಆಲೋಚನೆಯನ್ನು ಮಾಡಿದ್ದರು. ಇದೀಗ ಮಹೇಶ್​ ಬಾಬುಗೆ ಸರಿ ಹೊಂದುವ ಕಥೆ ರಾಜಮೌಳಿ ಬಳಿ ಇದೆ. ಸದ್ಯದಲ್ಲೇ ಈ ಸಿನಿಮಾಗೆ ಬಗ್ಗೆ ಸಿಹಿ ಸುದ್ದಿ ಹೊರ ಬೀಳಲಿದೆ. ಅಭಿಮಾನಿಗಳು ಕೂಡ ಹೊಸ ಸಿನಿಮಾದ ಬಗೆಗಿನ ಅಪ್ಡೇಟ್ಸ್​​​ಗಾಗಿ ಕಾದು ಕುಳಿತಿದ್ದಾರೆ.

ಸದ್ಯ ರಾಜಮೌಳಿ ಅವರು ಆರ್​ಆರ್​ಆರ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Realme Narzo series: ರಿಯಲ್​ಮಿ ನಾರ್ಜೊ ಸಿರೀಸ್​ ಸ್ಮಾರ್ಟ್​ಫೋನ್​ ಬಿಡುಗಡೆ; ಫೀಚರ್​, ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ

First published: May 11, 2020, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading