• Home
 • »
 • News
 • »
 • entertainment
 • »
 • Mahesh Babu Restaurant: ಪತ್ನಿ ನಮ್ರತಾ ಹೆಸರಿನಲ್ಲಿ ರೆಸ್ಟೋರೆಂಟ್ ಶುರು ಮಾಡಿದ ಮಹೇಶ್ ಬಾಬು!

Mahesh Babu Restaurant: ಪತ್ನಿ ನಮ್ರತಾ ಹೆಸರಿನಲ್ಲಿ ರೆಸ್ಟೋರೆಂಟ್ ಶುರು ಮಾಡಿದ ಮಹೇಶ್ ಬಾಬು!

ಮಹೇಶ್​ ಬಾಬು ಮತ್ತು ನಮ್ರತಾ

ಮಹೇಶ್​ ಬಾಬು ಮತ್ತು ನಮ್ರತಾ

ಈ ಚಲಚಿತ್ರೋದ್ಯಮದಲ್ಲಿರುವ ನಟ-ನಟಿಯರು ಮತ್ತು ಕ್ರಿಕೆಟ್ ಆಟಗಾರರು ತಮ್ಮ ವೃತ್ತಿಜೀವನದ ಜೊತೆಗೆ ಇನ್ನೂ ಕೆಲವು ಆದಾಯ ಕೊಡುವಂತಹ ವ್ಯವಹಾರಗಳು ಎಂದರೆ ಹೊಟೇಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್, ಬ್ರ್ಯಾಂಡೆಡ್ ಆಗಿರುವ ಬಟ್ಟೆಗಳ ಶಾಪ್ ಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿರುವುದನ್ನು ನಾವು ನೋಡುತ್ತೇವೆ. ಅದೇ ರೀತಿ ಮಹೇಶ್​ ಬಾಬು ಅವರು ತನ್ನ ಹೆಂಡತಿ ಹೆಸರಿನಲ್ಲಿ ಒಂದು ಅದ್ಭುತ ಹೋಟೆಲ್​ ನಿರ್ಮಿಸಿದ ಸುದ್ದಿಯನ್ನು ನೀವು ತಿಳಿಯಲೇಬೇಕು.

ಮುಂದೆ ಓದಿ ...
 • Share this:

  ಈ ಚಲನಚಿತ್ರೋದ್ಯಮದಲ್ಲಿರುವ (Film Actress) ನಟ-ನಟಿಯರು ಮತ್ತು ಕ್ರಿಕೆಟ್ ಆಟಗಾರರು (Cricket Player) ತಮ್ಮ ವೃತ್ತಿಜೀವನದ ಜೊತೆಗೆ ಇನ್ನೂ ಕೆಲವು ಆದಾಯ ಕೊಡುವಂತಹ ವ್ಯವಹಾರಗಳು ಎಂದರೆ ಹೊಟೇಲ್ (Hotel), ರೆಸ್ಟೋರೆಂಟ್ (Restaurant), ಶಾಪಿಂಗ್ ಮಾಲ್ (Shopping Mall), ಬ್ರ್ಯಾಂಡೆಡ್ ಆಗಿರುವ ಬಟ್ಟೆಗಳ ಶಾಪ್ ಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿರುವುದನ್ನು ನಾವು ನೋಡುತ್ತೇವೆ. ಹೌದು ತಮ್ಮ ವೃತ್ತಿಜೀವನದಲ್ಲಿ ಸಂಪಾದಿಸಿದ ಹಣವನ್ನು ಈ ರೀತಿ ಅನೇಕ ವ್ಯವಹಾರಗಳಲ್ಲಿ ಹೂಡಿಕೆ (Investment) ಮಾಡುವುದನ್ನು ನಾವು ಹಿಂದೆಯಿಂದಲೂ ನೋಡಿಕೊಂಡು ಬಂದಿರುವಂತದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಅರೆರೇ.. ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ವಿಷಯ ಏನಪ್ಪಾ ಅಂದ್ರೆ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಮತ್ತೊಂದು ವ್ಯವಹಾರಕ್ಕೆ ಕೈ ಹಾಕುತ್ತಿದ್ದಾರೆ ನೋಡಿ.


  ನಟ ಮಹೇಶ್ ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ಕೆಲವು ವರ್ಷಗಳ ಹಿಂದೆ ಮಲ್ಟಿಪ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟರು ಮತ್ತು ಆಸಿಯಾನ್ ಸಿನೆಮಾಸ್ ನೊಂದಿಗೆ ಶುರು ಮಾಡಿದ್ದ ಹೈದರಾಬಾದಿನಲ್ಲಿರುವ ಇವರ ಎಎಂಬಿ ಮಾಲ್ ದೇಶದ ಅತಿದೊಡ್ಡ ಮಾಲ್ ಗಳಲ್ಲಿ ಒಂದಾಗಿದೆ ಮತ್ತು ಅತಿದೊಡ್ಡ ಚಲನಚಿತ್ರ ಥಿಯೇಟರ್ ಗಳಲ್ಲಿ ಒಂದಾಗಿದೆ ಎಂದು ಹೇಳಬಹುದು.


   Mahesh Babu started a restaurant in the name of wife Namrata
  ಮಹೇಶ್​ ಬಾಬು ಮತ್ತು ನಮ್ರತಾ


  ಅನೇಕ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವ ಮಹೇಶ್ ಬಾಬು..


  ಮಹೇಶ್ ಬಾಬು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ ಅಂತ ಹೇಳಬಹುದು. ಚಲನಚಿತ್ರಗಳಲ್ಲಿ ನಟಿಸುವುದು ಮತ್ತು ಬ್ರ್ಯಾಂಡ್ ಗಳನ್ನು ಅನುಮೋದಿಸುವುದರ ಜೊತೆಗೆ, ಅವರು ಹೊಸ ಅಖಾಡಗಳಿಗೆ ಪ್ರವೇಶಿಸುತ್ತಿದ್ದಾರೆ.


  ಅವರು ಈಗಾಗಲೇ ಚಲನಚಿತ್ರ ನಿರ್ಮಾಣದ ವ್ಯವಹಾರಕ್ಕೂ ಸಹ ಪ್ರವೇಶಿಸಿದ್ದು ಇತ್ತೀಚಿನ ವರದಿಗಳ ಪ್ರಕಾರ ಅವರು ಹೋಟೆಲ್ ವ್ಯವಹಾರಕ್ಕೂ ಪ್ರವೇಶಿಸಿಸುತ್ತಿದ್ದಾರೆ. ಈಗ ಅವರು ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಅವರ ಹೆಸರಿನಲ್ಲಿ ಹೋಟೆಲ್ ಅನ್ನು ಪ್ರಾರಂಭಿಸಿದ್ದಾರೆ.


  ಪತ್ನಿ ಹೆಸರಿನಲ್ಲಿ ಶುರು ಮಾಡಿರುವ ರೆಸ್ಟೋರೆಂಟ್ ನ ಹೆಸರೇನು ಗೊತ್ತೇ?


  ಈಗ ನಮ್ರತಾ ಶಿರೋಡ್ಕರ್ ಅವರ ರೆಸ್ಟೋರೆಂಟ್ ಅನ್ನು ಏಷ್ಯನ್ ನಮ್ರತಾ ಎಂದು ಹೆಸರಿಸಲಾಗಿದೆ ಮತ್ತು ಇದು ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿದೆ. ಈ ಹೋಟೆಲ್ ಅನ್ನು ಎಎನ್ ರೆಸ್ಟೋರೆಂಟ್, ಮಿನರ್ವ ಕಾಫಿ ಶಾಪ್ ಎಂದು ಹೆಸರಿಸಲಾಗಿದೆ ಮತ್ತು ಇದು ಡಿಸೆಂಬರ್ 8, 2022 ರಂದು ಬೆಳಿಗ್ಗೆ 7 ಗಂಟೆಯಿಂದ ಅದ್ಧೂರಿಯಾಗಿ ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ.


  ಮಹೇಶ್ ಬಾಬು ಮುಂಬರುವ ದಿನಗಳಲ್ಲಿ ಈ ಹೋಟೆಲ್ ಅನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ ಮತ್ತು ನಗರದಾದ್ಯಂತ ಹೆಚ್ಚಿನ ಶಾಖೆಗಳನ್ನು ಶುರು ಮಾಡಲು ಸಹ ಇವರು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


  ಇದನ್ನೂ ಓದಿ: Allu Arjun: ಪುಷ್ಪ 2ಗೆ ಅದ್ಧೂರಿ ಸ್ಕೆಚ್! ಇಲ್ಲಿದೆ ಇಂಟ್ರೆಸ್ಟಿಂಗ್ ಅಪ್ಡೇಟ್


  ಮಹೇಶ್ ಅವರು ನಟಿ ಪೂಜಾ ಹೆಗ್ಡೆ ಜೊತೆಗೆ ಎರಡನೇ ಬಾರಿ ನಟಿಸಲಿದ್ದಾರಂತೆ!


  ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ನಟ ಮಹೇಶ್ ಬಾಬು ಅವರು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರ ‘ಎಸ್ಎಸ್ಎಂಬಿ 28’ ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ‘ಸರ್ಕಾರು ವಾರಿ ಪಾಟಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.


  ‘ಮಹರ್ಷಿ’ ಚಿತ್ರದ ನಂತರ ಪೂಜಾ ಹೆಗ್ಡೆ ಜೊತೆಗೆ ಮಹೇಶ್ ಬಾಬು ಅವರು ಎರಡನೇ ಬಾರಿಗೆ ಮುಂದಿನ ಚಿತ್ರದಲ್ಲಿ ಜೊತೆಯಾಗುತ್ತಿದ್ದಾರೆ. ಶ್ರೀಲೀಲಾ ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸುವ ಸಾಧ್ಯತೆಯಿದೆ. ಕೆಲವು ವಾರಗಳ ಹಿಂದೆ ಮೊದಲ ಶೂಟಿಂಗ್ ಶೆಡ್ಯೂಲ್ ಮುಗಿದಿದೆ ಮತ್ತು ಎರಡನೇ ಶೆಡ್ಯೂಲ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.


  ಮೂಲಗಳ ಪ್ರಕಾರ, ಹತ್ತು ದಿನಗಳ ಕಾಲ ನಡೆಯುವ ಮ್ಯೂಸಿಕ್ ಸಿಟ್ಟಿಂಗ್ ಗಾಗಿ ತಂಡ ದುಬೈಗೆ ತೆರಳಿದೆ. ಅದರ ನಂತರ, ಅವರು ಹೈದರಾಬಾದ್ ತಲುಪಿ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ. ಪೂಜಾ ಹೆಗ್ಡೆ ಅವರ ಇತರ ಬದ್ಧತೆಗಳಿಂದಾಗಿ ಎಸ್ಎಸ್ಎಂಬಿ 28 ರ ಚಿತ್ರೀಕರಣವು ವಿಳಂಬವಾಗಿದೆ ಎಂಬ ಸುದ್ದಿಯಿಂದ ಉದ್ಯಮವು ಗೊಂದಲದಲ್ಲಿದೆ.

  Published by:Gowtham K
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು